More

    ನ.6 ರಂದು ರಬಕವಿ-ಬನಹಟ್ಟಿ ತಾಲೂಕಿನ 2ನೇ ಸಾಹಿತ್ಯ ಸಮ್ಮೇಳನ

    ರಬಕವಿ/ಬನಹಟ್ಟಿ: ರಾಂಪುರದ (ಬಿಳ್ಳೂರ) ದಾನೇಶ್ವರಿ ಸಮುದಾಯ ಭವನದಲ್ಲಿ ನ.6 ರಂದು ಜರುಗಲಿರುವ ರಬಕವಿ/ಬನಹಟ್ಟಿ ತಾಲೂಕಿನ 2ನೇ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಾಹಿತಿ ಸಿದ್ದರಾಜ ಪೂಜಾರಿ ಹೇಳಿದರು.

    ಸ್ಥಳೀಯ ಪತ್ರಿಕಾ ಭವನದಲ್ಲಿ ಭಾನುವಾರ ಸಮ್ಮೇಳನದ ಪರಿಕರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ನಿಗದಿತ ಸಮಯದಲ್ಲಿ ಮುಕ್ತಾಯವಾಗುವಂತೆ ಸಮಯಪಾಲನೆ ಮಾಡುವುದು ಬಹುಮುಖ್ಯವಾಗಿದೆ. ಈ ಬಾರಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು, ವಾದ್ಯವೃಂದದವರು ಮತ್ತು ನೌಕರರ ಸಂಘಟನೆಗಳು, ಶಾಲೆ ಮಕ್ಕಳ ಜತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅನುವಾಗಲು ಸೂಕ್ತ ಸ್ಥಳದಲ್ಲಿ ಸಾಹಿತ್ಯ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

    ಈಶ್ವರ ಸಣಕಲ್ ಪ್ರಧಾನ ವೇದಿಕೆ ಹಾಗೂ ಇಬ್ರಾಹಿಂ ಸುತಾರ ಮಹಾಮಂಟಪ ನಿರ್ಮಿಸಲಾಗಿದೆ. ಮಹಾದ್ವಾರಕ್ಕೆ ಕವಿ ಬ.ಗಿ.ಯಲ್ಲಟ್ಟಿ ಅವರ ಹೆಸರಿಡಲಾಗಿದೆ. ಪುಸ್ತಕ ಮಳಿಗೆಗೆ ದು.ನಿಂ.ಬೆಳಗಲಿ ಹೆಸರಿಡಲಾಗಿದೆ. ರಾಷ್ಟ್ರಧ್ವಜವನ್ನು ಶಾಸಕ ಸಿದ್ದು ಸವದಿ, ಪರಿಷತ್ ಧ್ವಜವನ್ನು ಶಿವಾನಂದ ಶೆಲ್ಲಿಕೇರಿ, ನಾಡಧ್ವಜ ವಂದನೆಯನ್ನು ಮ.ಕೃ.ಮೇಗಾಡಿ ನೆರವೇರಿಸುವರು ಎಂದರು.

    ಕಸಾಪ ತಾಲೂಕಾಧ್ಯಕ್ಷ ಮ.ಕೃ.ಮೇಗಾಡಿ, ಎಂ.ಎಸ್.ಬದಾಮಿ ಮಾತನಾಡಿ, ಬೆಳಗ್ಗೆ 8ಕ್ಕೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ರಾಮಪುರ ಸರ್ಕಾರಿ ಉರ್ದು ಶಾಲೆಯಿಂದ ಶ್ರೀರಾಮ ಮಂದಿರ, ಮುಖ್ಯರಸ್ತೆ, ನಗರಸಭೆ ಮುಂಭಾಗ, ಸರ್ಕಾರಿ ಸಮುದಾಯ ಆರೋಗ್ಯಕೇಂದ್ರ ಮುಂಭಾಗದಿಂದ ರಾಜ್ಯ ಹೆದ್ದಾರಿ ಮೂಲಕ ದಾನೇಶ್ವರಿ ಕಲ್ಯಾಣ ಮಂಟಪದ ಪ್ರಧಾನ ವೇದಿಕೆಗೆ ಬರುವುದು. ಕರಾರುವಕ್ಕಾಗಿ ಮೆರವಣಿಗೆ, ಉದ್ಘಾಟನಾ ಮೆರವಣಿಗೆ, ನಾಲ್ಕು ಗೋಷ್ಠಿಗಳು ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

    ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವಪ್ರಭು ಹಟ್ಟಿ, ಮಲ್ಲಪ್ಪ ಗಣಿ, ಶಿವಾನಂದ ದಾಶ್ಯಾಳ, ಶ್ರೀಶೈಲ ಬುರ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts