More

    ಆಧ್ಯಾತ್ಮಿಕ ಚಿಂತನೆ ಮಾಡಿ | ಮಹಾಂತಯ್ಯ ಹಿರೇಮಠ ಅನಿಸಿಕೆ

    ರಬಕವಿ/ಬನಹಟ್ಟಿ: ಭಕ್ತಿಯ ಮಾರ್ಗಕ್ಕೆ ಧುಮುಕಲು ಆಧ್ಯಾತ್ಮಿಕ ಅರಿವು ಮುಖ್ಯ. ಶ್ರಾವಣ ಹಿಂದುಗಳಿಗೆ ಪವಿತ್ರವಾದ ಮಾಸವಾಗಿದೆ ಎಂದು ವೇದಮೂರ್ತಿ ಮಹಾಂತಯ್ಯ ಹಿರೇಮಠ ಹೇಳಿದರು.

    ಬನಹಟ್ಟಿ ಶಂಕರಲಿಂಗ ದೇವಸ್ಥಾನದಲ್ಲಿ ಬಣಗಾರ ಸಮಾಜದ ಹಿರಿಯರ ನೇತೃತ್ವದಲ್ಲಿ ತಿಂಗಳಪೂರ್ತಿ ಹಮ್ಮಿಕೊಂಡಿದ್ದ ಪುರಾಣ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

    ದೈನಂದಿನ ಜೀವನದಲ್ಲಿ ದಿನದ ಒಂದು ಗಂಟೆಯಾದರೂ ಆಧ್ಯಾತ್ಮಿಕ ಚಿಂತನೆ ಮಾಡಿದರೆ ಬದುಕು ಹಸನಾಗಿರುತ್ತದೆ ಎಂದರು.

    ಸಮಾಜದ ಹಿರಿಯರಾದ ಅಡಿವೆಪ್ಪ ಜುಂಜಪ್ಪನವರ ದಂಪತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಚನ್ನಬಸಯ್ಯ ಮಠಪತಿ, ರೇವಣ್ಣ ಗುಣಕಿ, ಚೂಡಾಮನಿ ಲುಕ್ಕ, ಪ್ರಶಾಂತ ಕೊಳಕಿ, ಚನ್ನಪ್ಪ ಗುಣಕಿ, ಬಸವರಾಜ ಭೂತಿ, ಶಂಕರೆಪ್ಪ ಕಿನ್ನಾಳ, ಚಿದಾನಂದ ಮಟ್ಟಿಕಲ್ಲಿ, ಬಸವರಾಜ ಅಮಟಿ, ಬಸವರಾಜ ಯಂಡಿಗೇರಿ, ಶ್ರೀಶೈಲ ಕೊಳಕಿ, ಶಂಕರ ಅಂಗಡಿ ಇತರರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts