More

    ಬಹುಭಾಷೆಯಲ್ಲಿ ಬರಲಿದೆ ರಾಥ್​; ಕನ್ನಡದ ಚಿತ್ರಕ್ಕೆ ಮುಂಬೈ ಬೆಡಗಿ ನಾಯಕಿ..

    ಬೆಂಗಳೂರು: ಪಲ್ಲಕ್ಕಿ ಸಿನಿಮಾ ಖ್ಯಾತಿಯ ನಿರ್ದೇಶಕ ನರೇಂದ್ರ ಬಾಬು ಇದೀಗ ಥ್ರಿಲ್ಲರ್ ಸಿನಿಮಾ ಹಿಂದೆ ಬಿದ್ದಿದ್ದಾರೆ. ಅಂದರೆ, ಹಾರರ್​ ಶೈಲಿಯ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಆ ಚಿತ್ರಕ್ಕೆ ರಾಥ್ ಎಂಬ ಶೀರ್ಷಿಕೆ ಇಡಲಾಗಿದೆ. ವಿಶೇಷ ಏನೆಂದರೆ ಈ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಲಿದೆ.

    ಇದನ್ನೂ ಓದಿ: ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

    ಶ್ರೀ ಮೂವೀಸ್ ಬ್ಯಾನರ್​ನಲ್ಲಿ ಎನ್.ಎಸ್​. ಶ್ರೀಧರ್ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಇದೇ ಚಿತ್ರ ಚಿತ್ರೀಕರಣ ಪೂರ್ವ ಕೆಲಸಕ್ಕೆ ಅಣಿಯಾಗುತ್ತಿದ್ದು, ಗೋವಾದ ಕಡಲ ಕಿನಾರೆಯಲ್ಲಿ ನಾಯಕ ನಾಯಕಿಯ ಚೆಂದನೆಯ ಫೋಟೋಗಳನ್ನು ಛಾಯಾಗ್ರಾಹಕ ವೀರೇಶ್​ ಸೆರೆಹಿಡಿಯುತ್ತಿದ್ದಾರೆ.

    ಬಹುಭಾಷೆಯಲ್ಲಿ ಬರಲಿದೆ ರಾಥ್​; ಕನ್ನಡದ ಚಿತ್ರಕ್ಕೆ ಮುಂಬೈ ಬೆಡಗಿ ನಾಯಕಿ..ಇದನ್ನೂ ಓದಿ: ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?


    ಬಾಂಬೆ ಮೂಲದ ಅವಿಶ್ ನಾಯಕ ಮತ್ತು ರಿಂಕಲ್ ಈ ಚಿತ್ರದ ನಾಯಕಿ. ಮಿಕ್ಕಂತೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.’ಪಲ್ಲಕ್ಕಿ’ ನಿರ್ದೇಶನ ಮಾಡಿರುವ ನರೇಂದ್ರಬಾಬು ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕುಮಾರ್.ಕೆ.ರೆಡ್ಡಿ ಸಹ ನಿರ್ಮಾಪಕರಾಗಿದ್ದಾರೆ. ಶ್ರೀಧರ್‌ ರಾಠೋಡ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಜೈಪುರ, ಮರಳುಗಾಡು ಪ್ರದೇಶ ಜೈಸಲ್ಮರ್, ಗೋವಾ ಮತ್ತು ರಾಮೋಜಿರಾವ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಲಿದೆ. ಮೇ ಮೊದಲ ವಾರದಿಂದ ಸಿನಿಮಾಕ್ಕೆ ಚಾಲನೆ ಸಿಗಲಿದೆ.

    ಇದನ್ನೂ ಓದಿ: ಬಿಡುಗಡೆಯ ಬೆನ್ನಲ್ಲೇ ನೆಟ್ಟಿಗರ ಹುಬ್ಬೇರಿಸಿದ “ಮುಂಬೈ ಸಗಾ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts