More

    2020ರಲ್ಲಿ ಭಾರತ ಆರ್ಥಿಕತೆಗೆ ಯೂಟ್ಯೂಬ್​ ಕ್ರಿಯೆಟರ್ಸ್​ ನೀಡಿದ ಕೊಡುಗೆಯ ಮೊತ್ತ ಕೇಳಿದ್ರೆ ಅಚ್ಚರಿ ಖಂಡಿತ!

    ನವದೆಹಲಿ: ಭಾರತದ ಆರ್ಥಿಕತೆಗೆ ಯೂಟ್ಯೂಬ್ ಸೃಜನಶೀಲ ಪರಿಸರ ವ್ಯವಸ್ಥೆಯು ಸಾವಿರಾರು ಕೋಟಿ ರೂಪಾಯಿಗಳ ಕೊಡುಗೆಯನ್ನು ಹರಿಸುತ್ತಿದೆ ಎಂದು ಆಕ್ಸ್​ಫರ್ಡ್​ ಎಕನಾಮಿಕ್ಸ್​ ವರದಿ ತಿಳಿಸಿದೆ. 2020ನೇ ಸಾಲಿನಲ್ಲಿ ಕಂಟೆಂಟ್​ ಕ್ರಿಯೆಟರ್ಸ್​ಗಳು ಭಾರತದ​ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಕ್ಕೆ 6,800 ಕೋಟಿ ರೂಪಾಯಿ ಕೊಡುಗೆಯನ್ನು ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ಅಂದರೆ 2020ರಲ್ಲಿ ಯೂಟ್ಯೂಬ್​ ಕಂಪನಿಯು 6,83,900 ಪೂರ್ಣ ಸಮಯದ ಸಮಾನ ಉದ್ಯೋಗಗಳನ್ನು ಭಾರತದಲ್ಲಿ ಕಲ್ಪಿಸಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಚಂದಾದಾರರು ಇರುವ 40 ಸಾವಿರಕ್ಕೂ ಅಧಿಕ ಯೂಟ್ಯೂಬ್​ ಚಾನೆಲ್​ಗಳು ಭಾರತದಲ್ಲಿ ಇವೆ. ಅನೇಕ ಯೂಟ್ಯೂಬ್ ಚಾನೆಲ್‌ಗಳು, ಆರು ಅಂಕಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ ಎಂದು ಸ್ವತಂತ್ರ ಸಲಹಾ ಸಂಸ್ಥೆಯು ಹೊರತಂದಿರುವ ವರದಿ ತಿಳಿಸಿದೆ.

    ಯೂಟ್ಯೂಬ್​ ಕ್ರಿಯೆಟರ್​ಗಳ​ ಆರ್ಥಿಕತೆಯ ಉತ್ತಮ ಭಾಗವೆಂದರೆ ಅಡೆತಡೆಗಳು ತುಂಬಾ ಕಡಿಮೆ ಇರುವುದು ಎಂದು ಪರಿಣಿತರು ಹೇಳುತ್ತಾರೆ. ಯಾರಾದರೂ ಯಾವುದೇ ಉತ್ತಮವಾಗಿ ವಿಷಯವನ್ನು ಹೊಂದಿದ್ದರೆ, ಅವರಿಗೆ ಯೂಟ್ಯೂಬ್​ ಮಾಡಲು ಬೇಕಾಗಿರುವುದು ಕೇವಲ ಯೋಗ್ಯವಾದ ಸ್ಮಾರ್ಟ್​ಫೋನ್​ ಮಾತ್ರ ಎಂದು ಹೇಳಿದ್ದಾರೆ. ಹೆಚ್ಚು ಬಂಡವಾಳ ಇಲ್ಲದೆ, ಅಧಿಕ ಆದಾಯವನ್ನು ಇದರಿಂದ ತೆಗೆಯಬಹುದಾಗಿದೆ.

    ಯೂಟ್ಯೂಬ್​ ಆರ್ಥಿಕ ಬೆಳವಣಿಗೆಗೆ ಎರಡು ಅಂಶಗಳು ಗಣನೀಯವಾಗಿ ಕೊಡುಗೆ ನೀಡಿವೆ. ಒಂದು ಅಗ್ಗದ ಡೇಟಾ ಮತ್ತು ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಹೆಚ್ಚಿದ ಬಳಕೆ.

    ಇನ್ನು ಕಂಟೆಂಟ್​ ಕ್ರಿಯೆಟರ್ಸ್​ಗಳು ಸವಾಲುಗಳನ್ನು ಎದುರಿಸಬೇಕಾಗಿದೆ. ಮೂಲ ಮತ್ತು ವಿಶಿಷ್ಟವಾದ ವಿಷಯವನ್ನು ರಚಿಸುವ ಹಲವು ಚಾನೆಲ್‌ಗಳಿವೆ. ಇಲ್ಲಿ ನಂಬರ್​ ಗೇಮ್​ ತುಂಬಾ ಮುಖ್ಯವಾಗಿರುತ್ತದೆ. ಅಲ್ಲದೆ, ಕೃತಿ ಸ್ವಾಮ್ಯವು ಕೂಡ ಪ್ರಭಾವ ಬೀರುತ್ತದೆ. ಚಂದಾದಾರರು ಸೆಳೆಯುವುದು ಕೂಡ ಸವಾಲಿನ ಕೆಲಸವಾಗಿದ್ದು, ಈ ಎಲ್ಲ ಅಡೆತಡೆಗಳನ್ನು ದಾಟಿ ಯೂಟ್ಯೂಬ್​ ಹಾದಿಯನ್ನು ಯಶಸ್ವಿಯತ್ತ ಸಾಗಿಸಲು ನಿರಂತರ ಪ್ರಯತ್ನ ಮುಖ್ಯವಾಗಿದೆ. (ಏಜೆನ್ಸೀಸ್​)

    ನನ್ನ ಬಳಿ ರೆಕಾರ್ಡಿಂಗ್ಸ್​ ಇವೆ…ಟಾಲಿವುಟ್​ ನಟಿ, ನಿರೂಪಕಿ ರಶ್ಮಿ ವಿರುದ್ಧ ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ..!

    ಲಾಕಪ್​ ಶೋನಲ್ಲಿ ಕಂಗನಾ ಎದುರು ಅಮ್ಮನ ಸ್ನೇಹಿತೆ ಜತೆಗಿನ ರಹಸ್ಯ ಬಿಚ್ಚಿಟ್ಟ ಶಿವಂ ಶರ್ಮಾ: ಬಬಿತಾ ಪೋಗಟ್​ ಶಾಕ್​!

    ಹಿಜಾಬ್​ ಬ್ಯಾನ್​: ಸಿಜೆ ಅವರು ಓದಿದ 129 ಪುಟಗಳ ತೀರ್ಪಿನ ಪ್ರಮುಖ ಅಂಶ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts