More

    ಐಪಿಎಲ್​ನಲ್ಲಿ ಧೋನಿ ಸ್ಯಾಲರಿ ಪ್ಯಾಕೇಜ್​ ಎಷ್ಟಿದೆ? ಇಷ್ಟೊಂದು ಹಣ ಮಾಹಿ ಪಾಕೆಟ್ ಸೇರ್ತಿದ್ಯಾ?!​

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​)​ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್​ ಟೂರ್ನಮೆಂಟ್​. ಕೇವಲ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿದೇಶಿ ಆಟಗಾರರು ಸಹ ಐಪಿಎಲ್​ ಆಡಲು ಬಯಸುತ್ತಾರೆ. ಏಕೆಂದರೆ, ಒಳ್ಳೆಯ ಸಂಬಳದೊಂದಿಗೆ ಖ್ಯಾತಿಯೂ ಸಹ ಈ ಟೂರ್ನಿಯಿಂದ ಸಿಗುತ್ತದೆ.

    2021ರ ಐಪಿಎಲ್​ ಟೂರ್ನಿಯಲ್ಲಿ ಕ್ರಿಸ್​ ಮೊರಿಸ್​ ದುಬಾರಿ ಆಟಗಾರನೆಂಬ ಹೆಸರಿಗೆ ಪಾತ್ರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಲು ಕ್ರಿಸ್​ ಮೊರಿಸ್​ಗೆ ಬರೋಬ್ಬರಿ 16.25 ಕೋಟಿ ರೂ. ಅನ್ನು ಹರಾಜು ಪ್ರಕ್ರಿಯೆ ವೇಳೆ ನೀಡಲಾಗಿದೆ. ಇನ್ನು ಹರಾಜಿನ ಸಮಯದಲ್ಲಿ ಬೆಲೆ ಬದಲಾಗಬಹುದಾದರೂ, ಪ್ರತಿ ಒಪ್ಪಂದಕ್ಕೆ ಗಳಿಸುವ ಕೆಲವು ಮೀಸಲು ಆಟಗಾರರು ಸಹ ಐಪಿಎಲ್ ತಂಡಗಳಲ್ಲಿರುತ್ತಾರೆ. ಅವರಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಚೆನ್ನೈ ಸೂಪರ್ಸ್​ ಕಿಂಗ್ಸ್​ ತಂಡದ ನಾಯಕ ಎಂ.ಎಸ್​. ಕೂಡ ಒಬ್ಬರು.

    ಟೂರ್ನಿ ಶರುವಾದಾಗಿನಿಂದ ಧೋನಿ ಚೆನ್ನೈ ಪರ ಆಡುತ್ತಿದ್ದಾರೆ. ಹೀಗಾಗಿಯೇ ಧೋನಿ ಅವರಿಗೆ ಚೆನ್ನೈ ಒಳ್ಳೆಯ ಅಭಿಮಾನಿ ಬಳವೂ ಇದೆ. ಮೂರು ಬಾರಿ ಚೆನ್ನೈ ತಂಡಕ್ಕೆ ಟ್ರೋಫಿ ಜಯಿಸಿಕೊಟ್ಟಿರುವ ಧೋನಿ ಅವರಿಗೆ ಒಪ್ಪಂದ ಪ್ರಕಾರ ಪ್ರತಿ ಆವೃತ್ತಿಯಲ್ಲೂ 15 ಕೋಟಿ ರೂಪಾಯಿ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

    ಇನ್ನು ಧೋನಿ ಅವರು ಜಾಹಿರಾತುಗಳಿಂದಲೂ ಹಣ ಗಳಿಕೆ ಮಾಡುತ್ತಿದ್ದಾರೆ. ಬ್ರ್ಯಾಂಡ್​ ಪ್ರಚಾರಗಳ ಕಿಂಗ್​ ಆಗಿರುವ ಧೋನಿ ಡ್ರೀಮ್​ 11, ಗೋ ಡ್ಯಾಡಿ, ಮಾಸ್ಟರ್​ ಕಾರ್ಡ್​, ಯಿಪ್ಪಿ ನೂಡಲ್ಸ್​, ಗಲ್ಫ್​ ಎಂಜಿನ್​ ಆಯಿಲ್​ ಮತ್ತು ಇತರೆ ಬ್ರ್ಯಾಂಡ್​ಗಳ ಮೂಲಕ 50 ಕೋಟಿ ರೂ. ಸಂಪಾದನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಂತಾರಾಷ್ಟ್ರೀಯ ಕ್ರಿಕೆಟ್​​ ಕರಿಯರ್​ನಲ್ಲಿ ಧೋನಿ ಸಂಬಳದ ವಿಚಾರಕ್ಕೆ ಬಂದಾಗ ಅವರನ್ನು ಬಿಸಿಸಿಐ ಎ+ ಕ್ಯಾಟಗರಿ ಅಡಿಯಲ್ಲಿ ಇರಿಸಿದ್ದು, ಕಳೆದ ವರ್ಷ ಧೋನಿ ಅವರು ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಈಗಲೂ ಧೋನಿ ಅವರು 74.49 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

    ವೆಹಿಕಲ್​ ಟೋಯಿಂಗ್​ ವಿಚಾರದಲ್ಲಿ ಗಲಾಟೆ: ಟೋಯಿಂಗ್ ಯುವಕರನ್ನು ಅಟ್ಟಾಡಿಸಿಕೊಂಡು ಥಳಿಸಿದ ಸಾರ್ವಜನಿಕರು

    ಭಕ್ತಿಯ ಪರಾಕಾಷ್ಠೆ ತಲುಪಿದ ಯುವತಿ: ಕಾಳಿಮಾತೆಯ ದೇವಸ್ಥಾನದ ಮುಂದೆ ನಡೀತು ಬೆಚ್ಚಿಬೀಳಿಸೋ ಘಟನೆ!

    VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts