ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು...

Yashika 000
Published on

ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಈಗಷ್ಟೇ ತಾನೇ ಸಹಜ ಜೀವನಕ್ಕೆ ಮರಳಿದ್ದಾರೆ.

ಅಪಘಾತದ ಬಳಿಕ ಯಶಿಕಾ ಅವರು ಅನೇಕ ಸರ್ಜರಿಗೆ ಒಳಗಾಗಬೇಕಾಯಿತು. ಸದ್ಯ ಗುಣಮುಖರಾಗಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿದ್ದು, ನೆಟ್ಟಿಗರು ಕೇಳುವ ಮುಜುಗರ ಉಂಟು ಮಾಡುವ ಪ್ರಶ್ನೆಗಳಿಗೆ ಸಖತ್​ ಆಗಿಯೇ ತಿರುಗೇಟು ನೀಡುತ್ತಿದ್ದಾರೆ.

ಇದೀಗ ಸೂಕ್ಷ್ಮತೆ ಅರಿಯದ ನೆಟ್ಟಿಗನೊಬ್ಬ ಇನ್​ಸ್ಟಾಗ್ರಾಂನಲ್ಲಿ ಲೈವ್​ ವೇಳೆ ನಿಮ್ಮ ಬೆತ್ತಲೆ ದೇಹವನ್ನು ಪ್ರದರ್ಶಿಸುವಂತೆ ಕೇಳಿದ್ದಾನೆ. ಇದಕ್ಕೆ ಮುಟ್ಟಿನೋಡಿಕೊಳ್ಳುವ ಹಾಗೇ ಉತ್ತರ ನೀಡಿರುವ ಯಶಿಕಾ, ನನ್ನ ತಲೆಗೂದಲನ್ನು ತೋರಿಸಿ ಮಾತನಾಡುತ್ತೇನೆ ಏಕೆಂದರೆ ಅದು ಕೂಡ ನನ್ನ ದೇಹದ ಭಾಗವಾಗಿರುವುದರಿಂದ ನನ್ನ ಮುಖವನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ. ನಿಮಗೆ ನಾಚಿಕ ಆಗಬೇಕು ಎಂದು ನೆಟ್ಟಿಗನ ಕೀಳುಮಟ್ಟವನ್ನು ಟೀಕಿಸಿದ್ದಾರೆ.

ಬಿಸ್​ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾರಣ ನೀಡಿದ ಯಾಶಿಕಾ, ಇತ್ತೀಚಿನ ಕಾರು ಅಪಘಾತದಿಂದಾಗಿ ಹಿಂದಿನಂತೆ ಟಾಸ್ಕ್‌ಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಮತ್ತೊಂದು ಲವ್ ಟ್ರ್ಯಾಕ್‌ಗೆ ಸಿದ್ಧವಾಗಿಲ್ಲ ಎಂದು ಬಹಿರಂಗಪಡಿಸಿದರು. ನಿರೂಪ್ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗಪಡಿಸಿದ ಅವರು, "ನಾನು ನಿರೂಪ್‌ನೊಂದಿಗೆ ಬೇರ್ಪಡುವ ಮೊದಲು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇನೆ ಮತ್ತು ಆತ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net