ಮುಂಬೈ: ಯಾಹೂ ಕಂಪನಿಯು 2021ನೇ ಸಾಲಿನ ವಾರ್ಷಿಕ ಚಿತ್ರಣವನ್ನು ಗುರುವಾರ ತೆರೆದಿಟ್ಟಿದೆ. ಇದು ಸರ್ಚ್ ಇಂಜಿನ್ ಆಗಿದ್ದು, ಬಳಕೆದಾರರ ದೈನಂದಿನ ಹುಡುಕಾಟದ ಅಭ್ಯಾಸಗಳ ಆಧಾರದ ಮೇಲೆ ವರ್ಷದ ಪ್ರಮುಖ ವ್ಯಕ್ತಿಗಳು, ಸುದ್ದಿ ತಯಾರಕರು ಮತ್ತು ಘಟನೆಗಳ ಸಂಗ್ರಹ ಮಾಡಿ, ವರ್ಷಾಂತ್ಯದಲ್ಲಿ ಅದನ್ನು ಬಹಿರಂಗಪಡಿಸುತ್ತದೆ.
ಯಾಹೂವಿನಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಪುರುಷ ಸೆಲೆಬ್ರಿಟಿಗಳಲ್ಲಿ ಇತ್ತೀಚೆಗಷ್ಟೇ ಹೃದಯಾಘಾತದಿಂದ ಮೃತಪಟ್ಟ ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಮೊದಲ ಸ್ಥಾನದಲ್ಲಿದ್ದಾರೆ. ಸಿದ್ಧಾರ್ಥ್ ರೀತಿಯೇ ಹೃದಯಾಘಾತದಿಂದ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ ಸ್ಯಾಂಡಲ್ವುಡ್ ರಾಜಕುಮಾರ ಪುನೀತ್ ರಾಜ್ಕುಮಾರ್ 4ನೇ ಸ್ಥಾನದಲ್ಲಿದ್ದಾರೆ. ಅವರ ನಿಧನದ ನಂತರ ಸಾಕಷ್ಟು ಮಂದಿ ಜಾಲತಾಣ ಮೂಲಕ ನೆಚ್ಚಿನ ನಟನಿಗೆ ಕಂಬನಿ ಮಿಡಿದರು. ನಟ ಸಲ್ಮಾನ್ ಖಾನ್ ಮತ್ತು ಅಲ್ಲು ಅರ್ಜುನ್ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತಿಚೆಗಷ್ಟೇ ನಿಧನರಾದ ಬಾಲಿವುಡ್ ಸಿನಿ ದಿಗ್ಗಜ ದಿಲೀಪ್ ಕುಮಾರ್ 5ನೇ ಸ್ಥಾನದಲ್ಲಿದ್ದಾರೆ.
ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಮಹಿಳಾ ಸೆಲೆಬ್ರಿಟಿಗಳಲ್ಲಿ ಕರೀನಾ ಕಪೂರ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕರ್ತಿನಾ ಕೈಫ್, ಪ್ರಿಯಾಂಕಾ ಚೋಪ್ರಾ (3), ಆಲಿಯಾ ಭಟ್ (4) ಮತ್ತು ದೀಪಿಕಾ ಪಡುಕೋಣೆ (5) ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ಡಿವೋರ್ಸ್ನಿಂದ ಹೆಚ್ಚು ಸದ್ದು ಮಾಡಿದ ನಟಿ ಸಮಂತಾ ಅವರು 10ನೇ ಸ್ಥಾನ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್)
ಯುವತಿಯ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ನಲ್ಲಿ ಸೆಕ್ಸ್ ಪದ! RTO ಎಡವಟ್ಟಿನಿಂದ ಮಾನಸಿಕ ಆಘಾತ
2 ಬಾರಿ ಪರ್ಫೆಕ್ಟ್ 10ಗೆ ಸಾಕ್ಷಿಯಾದ ಮೂವರು ದಿಗ್ಗಜರು…!
ಕೆಲಸವಿಲ್ಲದೇ ಸಂಬಳ?; ನೂರಾರು ಶಿಕ್ಷಕರಿಗೆ ಕುಳಿತಲ್ಲೇ ವೇತನ ಭಾಗ್ಯ