More

    ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

    ನವದೆಹಲಿ: ನಮ್ಮ ಬಾಳು ನಾಯಿಗಿಂತಲೂ ಕಡೆಯಾಯಿತು ಅಂತಾ ಸಾಮಾನ್ಯವಾಗಿ ಜನರು ಹೇಳುವುದನ್ನು ಕೇಳಿದ್ದೇವೆ. ಆದರೆ, ಯುನೈಟೆಡ್​ ಸ್ಟೇಟ್ಸ್​ನ ಮೈಮಿ ನಗರದಲ್ಲಿ ವಾಸಿಸುವ ಈ ಶ್ವಾನದ ಬಗ್ಗೆ ತಿಳಿದುಕೊಂಡರೆ ನಮ್ಮ ಲೈಫ್ ಈ ರೀತಿ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಖಂಡಿತ ಮಾತನಾಡಿಕೊಳ್ಳುತ್ತೀರಾ.

    ಈ ಶ್ವಾನದ ಹೆಸರು ಗುಂಥರ್ VI. ಇದು ಮೈಮಿ ನಗರದ ಐಷಾರಾಮಿ ಕಟ್ಟಡದಲ್ಲಿ ವಾಸಿಸುತ್ತಿದೆ. ಇದು ವಿಶ್ವದಲ್ಲೇ ಶ್ರೀಮಂತ ಶ್ವಾನ ಎಂದು ಕರೆಯಲ್ಪಟ್ಟಿದೆ. ಅದಕ್ಕೆ ಕಾರಣ ಈ ನಾಯಿಯ ಹೆಸರಲ್ಲಿ ಸಾವಿರಾರು ಕೋಟಿ ಆಸ್ತಿ ಇದೆ.

    ಗುಂಥರ್​ನ ಪಿತ್ರಾರ್ಜಿತ ಆಸ್ತಿ ಮೌಲ್ಯ ಒಟ್ಟು 500 ಮಿಲಿಯನ್​ ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 3,715 ಕೋಟಿ ರೂಪಾಯಿ. ಈ ನಾಯಿಯ ಕುಟುಂಬದ ಸದಸ್ಯರಲ್ಲಿ ಒಂದಾದ ಗುಂಥರ್ III ಹೆಸರಿನ ಶ್ವಾನ 1992ರಲ್ಲಿ ಮೃತಪಟ್ಟಿತು. ಇದರ ಹೆಸರಿನಲ್ಲಿ 58 ಮಿಲಿಯನ್​ ಡಾಲರ್​ ಅಂದರೆ, 431 ಕೋಟಿ ರೂಪಾಯಿ ಪಿತ್ರಾರ್ಜಿತ ಆಸ್ತಿ ಇತ್ತು. ತನ್ನ ಕೊನೆಯ ಮಾಲೀಕ ಜರ್ಮನ್​ ಕೌಂಟೀಸ್​ ಕಾರ್ಲೊಟ್ಟ ಲೀಬ್ನಿಸ್ಟೀನ್​ ಬಿಟ್ಟು ಹೋದ ಆಸ್ತಿ ಇದಾಗಿದೆ.

    ದಿನದಿಂದ ದಿನಕ್ಕೆ ಆಸ್ತಿ ಬೆಳೆದು ಇದೀಗ ಗುಂಥರ್ VI ವಿಶ್ವದ ಶ್ರೀಮಂತ ಶ್ವಾನ ಎಂಬ ಹೆಸರಿಗೆ ಪಾತ್ರವಾಗಿದೆ. ಕೊನೆಯ ಮಾಲೀಕರು ಸತ್ತ ನಂತರ, ನಾಯಿಗಳನ್ನು ಹ್ಯಾಂಡರ್ಸ್ ಆರೈಕೆ ಮಾಡುತ್ತಿದ್ದಾರೆ. ಗುಂಥರ್ VI ಇದೀಗ ತಾನು ವಾಸಿಸುತ್ತಿದ್ದ ಟಸ್ಕನ್ ವಿಲ್ಲಾವನ್ನು ಮಾರಾಟ ಮಾಡಿದ್ದಾರೆ. ಇದನ್ನು 2000ರಲ್ಲಿ ಮಡೋನಾ ಎಂಬುವರು 7.5 ಮಿಲಿಯನ್‌ ಡಾಲರ್​ಗೆ ಖರೀದಿಸಿದ್ದರು ಮತ್ತು ಈಗ 238 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

    ಟಸ್ಕನ್ ವಿಲ್ಲಾವು ಒಂಬತ್ತು ಮಲಗುವ ಕೋಣೆಗಳು, ಎಂಟು ಸ್ನಾನಗೃಹಗಳು ಮತ್ತು ಹೊರಾಂಗಣ ಈಜುಕೊಳವನ್ನು ಹೊಂದಿದೆ. ದಿ ಅಜೋಲಿನ್ ತಂಡದ ಭಾಗವಾಗಿರುವ ರೂಥಿ ಮತ್ತು ಎಥಾನ್ ಅಸ್ಸೌಲಿನ್ ಮನೆಯನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ಕಂಪನಿಯ ಮ್ಯಾನೇಜರ್ ರೂಥಿ ಪ್ರಕಾರ, “ಈ ಬೃಹತ್ ಮಹಲಿನ ಮಾಲೀಕ ನಾಯಿ ಎಂದು ನಾನು ಆಶ್ಚರ್ಯಚಕಿತನಾಗಿದ್ದೆ, ನಿಜವಾಗಿ, ನನಗೆ ಮೊದಲು ನಂಬಲಾಗಲಿಲ್ಲ. ನಾವು ಮೊದಲು ಗುಂಥರ್ VI ಅನ್ನು ಭೇಟಿಯಾದಾಗ, ಅವರು ಓಡಿ ಬಂದು ನನಗೆ ಮುತ್ತಿಟ್ಟರು. ಅವರು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದಾರೆ ಎಂದು ನಾನು ಭಾವಿಸಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಹುತಾತ್ಮ ಪತಿಯ ಮುಂದೆ ಮಾಡಿದ ಪ್ರತಿಜ್ಞೆ ಈಡೇರಿಸಿದ ವೀರನಾರಿ: ಅಮ್ಮನ ಮುಂದೆ 11 ವರ್ಷದ ಪುತ್ರಿ ಮಾಡಿದಳೊಂದು ಶಪಥ…

    ಮಾಡೆಲ್​ಗಳಿಬ್ಬರ ದುರಂತ ಸಾವು: ಪಾರ್ಟಿಯಲ್ಲಿ ಡ್ರಗ್ಸ್​ ಅಮಲು, ಖಾಸಗಿ ವಿಡಿಯೋ ಬೆನ್ನತ್ತ ಪೊಲೀಸರು!

    ಪೇಜಾವರ ಶ್ರೀಗಳ ಪಾದದ ಧೂಳಿಗೂ ನೀವು ಸಮವಲ್ಲ: ಹಂಸಲೇಖ ವಿರುದ್ಧ ಶಿವರಾಣಿ ಆಕ್ರೋಶ

    ನಿನ್ನಿಂದಲೇ ನಾನು ಹುಷಾರಾಗಿದ್ದು… ‘ಕರ್ನಾಟಕದ ಅಳಿಯ’ನಿಗೂ ನೀನೇ ಕಾರಣ… ರಾಘವೇಂದ್ರ ರಾಜ್‌ಕುಮಾರ್‌ ಭಾವನಾತ್ಮ ಟ್ವೀಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts