More

    ಏಲಿಯನ್​ನಿಂದ ಗರ್ಭಿಣಿಯಾದ ಮಹಿಳೆ! ಯುಎಸ್​ ರಕ್ಷಣಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

    ವಾಷಿಂಗ್ಟನ್​: ಏಲಿಯನ್​ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.

    ಏಲಿಯನ್​ಗಳು ಮಹಿಳೆಯರ ಜತೆ ಲೈಂಗಿಕ ಸಂಪರ್ಕ ನಡೆಸಿ ಅವರನ್ನು ಗರ್ಭಿಣಿಯರನ್ನಾಗಿ ಮಾಡಿವೆ ಎಂದು ಅನೇಕರು ಹೇಳಿದ್ದಾರೆ. ಈ ಹಿಂದೆ ಮಹಿಳೆಯೊಬ್ಬಳು ಸಹ ಇದೇ ವಾದವನ್ನು ಮಾಡಿದ್ದಳು. ಇದೀಗ ನಂಬಲು ಅಸಾಧ್ಯವಾಗಿದ್ದರೂ ಯುಸ್​ ಡಿಫೆನ್ಸ್​ ನೀಡಿರುವ ವರದಿ ಎಲ್ಲರನ್ನೂ ಅಚ್ಚರಿಗೆ ದೂಡಿದೆ.

    ಮಾನವ ಮತ್ತು ಜೈವಿಕ ಅಂಗಾಂಶಗಳ ಮೇಲೆ ಅಸಹಜ ತೀವ್ರ ಮತ್ತು ಸಬಾಕ್ಯೂಟ್ ಫೀಲ್ಡ್ ಪರಿಣಾಮಗಳು ಎಂಬ ಶೀರ್ಷಿಕೆಯ ಮೇಲೆ ಯುಎಸ್​ ಡಿಫೆನ್ಸ್​ ವರದಿಯೊಂದು ಬಹಿರಂಗವಾಗಿದ್ದು, ಅಸಾಮಾನ್ಯ (ಪ್ಯಾರಾನಾರ್ಮಲ್​) ಅನುಭವಗಳನ್ನು ಹೊಂದಿರುವ ಮಾನವರ ಮೇಲೆ ಆರೋಗ್ಯ ಪರಿಣಾಮದ ಕುರಿತು ತನಿಖೆ ಮಾಡಲಾಗಿದೆ.

    ಯುಎಸ್​ ಮೂಲದ ನಾಗರಿಕ ಸಂಶೋಧನಾ ಸಂಸ್ಥೆ MUFON ಒಂದು ಪಟ್ಟಿಯನ್ನು ಮಾಡಿದ್ದು, ವರದಿಯ “ಉಪಯುಕ್ತ ದತ್ತಾಂಶ”ವನ್ನು ಸಂಗ್ರಹಿಸಿದೆ. ಮಾನವರ ಮೇಲೆ ಏಲಿಯನ್​ಗಳ ಜೈವಿಕ ಪರಿಣಾಮಗಳು ಮತ್ತು ಅವುಗಳ ಆವರ್ತನವನ್ನು ಸಂಸ್ಥೆ ಪಟ್ಟಿ ಮಾಡಿದೆ. ಸಹಜ ಅಪಹರಣ, ಲೆಕ್ಕಕ್ಕೆ ಸಿಗದ ಗರ್ಭಧಾರಣೆ, ಲೈಂಗಿಕ ಮುಖಾಮುಖಿಗಳು, ಟೆಲಿಪತಿಯ ಅನುಭವ ಮತ್ತು ಗ್ರಹಿಸಿದ ಟೆಲಿಪೋರ್ಟೇಶನ್‌ನಂತಹ ವಿಚಿತ್ರ ಘಟನೆಗಳನ್ನು ತನಿಖಾ ವರದಿಯಲ್ಲಿ ಸೇರಿಸಲಾಗಿದೆ.

    ಏಲಿಯನ್​ ಮತ್ತು ಮಾನವರ ನಡುವೆ ವರದಿಯಾದ ಐದು ಲೈಂಗಿಕ ಸಂಪರ್ಕದ ಬಗ್ಗೆ ಈ ಅಧ್ಯಯನವು ಹೇಳುತ್ತದೆ. ಏಲಿಯನ್​ ಸಂಪರ್ಕಕ್ಕೆ ಬಂದವರು ಗಾಯಗೊಳ್ಳುವುದು ಅಥವಾ ವಿಕಿರಣ ಸುಟ್ಟಗಾಯಗಳಿಂದ ಬಳಲುವುದು, ಮೆದುಳಿನ ಸಮಸ್ಯೆಗಳು ಮತ್ತು ನರ ಹಾನಿ ಸಮಸ್ಯೆಗಳಿಂದ ಬಳಲಬಹುದು ಎಂದು ವರದಿ ಹೇಳುತ್ತದೆ.

    ವರದಿಯಲ್ಲಿನ ಒಂದು ಹೇಳಿಕೆಯ ಪ್ರಕಾರ ಅಸಹಜ ವಾಹನಗಳು ಅದರಲ್ಲೂ ವಿಶೇಷವಾಗಿ ವಾಯುಮಂಡಲದಲ್ಲಿ ಇರುವಾಗ ಮತ್ತು ಅಸಹಜ ವಾಹನಗಳ ಹತ್ತಿರದಲ್ಲಿದ್ದಾಗ ಮಾನವರು ಗಾಯಗೊಂಡಿದ್ದಾರೆ ಎಂದು ಕಂಡುಬಂದಿದೆ. ಗಾಯಗಳು ವಿದ್ಯುತ್ಕಾಂತೀಯ ವಿಕಿರಣಕ್ಕೆ ಸಂಬಂಧಿಸಿವೆ ಮತ್ತು ಅವುಗಳನ್ನು “ಶಕ್ತಿ ಸಂಬಂಧಿತ ಪ್ರೊಪಲ್ಷನ್ ಸಿಸ್ಟಮ್ಸ್”ಗೆ ಜೋಡಿಸಲಾಗಿದೆ ಎಂದು ವರದಿಯಾಗಿದೆ. ವಿಕಿರಣದಿಂದ ಬಿಸಿಯಾಗುವುದು ಮತ್ತು ಸುಟ್ಟ ಗಾಯಗಳು, ಮೆದುಳಿಗೆ ಹಾನಿ ಮತ್ತು ನರಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಸಂಭವನೀಯ ಗಾಯಗಳಾಗಿ ಪಟ್ಟಿಮಾಡಲಾಗಿದೆ. ಇವೆಲ್ಲವು ಅಗೋಚರ ಅಥವಾ ಏಲಿಯನ್​ ಸಂಪರ್ಕಕ್ಕೆ ಬಂದಾಗ ನಡೆದಿವೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಕಾಲುಗಳಿಲ್ಲದೇ ಹುಟ್ಟಿದ ಈ ವಿದ್ಯಾರ್ಥಿಗೆ ಸ್ನೇಹಿತರೇ ಆತ್ಮಬಲ: ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts