More

    ಆರೋಗ್ಯದಲ್ಲಿ ನಿರಂತರ ಏರುಪೇರು: ಪತ್ನಿಯ ಗೆಳತಿಯ ನೆರವು ಪಡೆದ ವ್ಯಕ್ತಿಗೆ ಗೊತ್ತಾಯ್ತು ಘನ ಘೋರ ಸತ್ಯ!

    ಕೊಟ್ಟಾಯಂ: ಕಳೆದ 6 ವರ್ಷಕ್ಕೂ ಹೆಚ್ಚು ಕಾಲ ಪತಿಯ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ​ ಆರೋಪದಡಿಯಲ್ಲಿ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಕೊಟ್ಟಾಯಂನಲ್ಲಿ ಬಂಧಿಸಿದ್ದು, ಪ್ರಕರಣ ಕುರಿತು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ.

    ಬಂಧಿತ ಮಹಿಳೆಯನ್ನು ಪಲಾ ನಿವಾಸಿ ಆಶಾ ಸುರೇಶ್​ (36) ಎಂದು ಗುರುತಿಸಲಾಗಿದೆ. ಈಕೆ ತಿರುವನಂತಪುರಂ ಮೂಲದ ಸತೀಶ್​ (38) ಜತೆ 2006ರಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಪಲಾದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ಸತೀಶ್​ ತನ್ನ ಬಿಜಿನೆಸ್​ನಲ್ಲಿ ತುಂಬಾ ಹೋರಾಟ ನಡೆಸಬೇಕಾಯಿತು. ಯಾವಾಗ ಐಸ್​ ಕ್ರೀಮ್​ ವ್ಯವಹಾರವನ್ನು ಶುರು ಮಾಡಿದರೂ ಸತೀಶ್​ ಜೀವನ ಕೂಡ ಬದಲಾಯಿತು. ಒಳ್ಳೆಯ ಲಾಭ ದೊರೆತಿದ್ದರಿಂದ 2012ರಲ್ಲಿ ಸತೀಶ್​ ಪಲಕ್ಕಾಡ್​ನಲ್ಲಿ ಒಂದು ಮನೆಯನ್ನು ಖರೀದಿಸಿದರು.

    ಪೊಲೀಸರ ಪ್ರಕಾರ ಪತ್ನಿ ಆಶಾ, ಕ್ಷುಲ್ಲಕ ಕಾರಣಗಳಿಗೆ ಪತಿಯೊಂದಿಗೆ ಆಗಾಗ ಕ್ಯಾತೆ ತೆಗೆಯುತ್ತಿದ್ದಳಂತೆ. ಇದರ ನಡುವೆ ಸಮಯ ಕಳೆದಂತೆ ಸತೀಶ್​ ತನ್ನ ಆರೋಗ್ಯದಲ್ಲಿ ಏರುಪೇರಾಗುವುದನ್ನು ಗಮನಿಸಿದ್ದಾರೆ. ಹೆಚ್ಚು ಸುಸ್ತು ಮತ್ತು ಸಂಕಟವಾಗುವುದನ್ನು ಕಂಡ ಸತೀಶ್​ ವೈದ್ಯರನ್ನು ಸಂಪರ್ಕಿಸುತ್ತಾರೆ. ಕಡಿಮೆ ಸಕ್ಕರೆ ಮಟ್ಟವೇ ನಿಮ್ಮ ಆರೋಗ್ಯ ಏರುಪೇರಿಗೆ ಕಾರಣ ಎಂದು ಪರೀಕ್ಷಿಸಿದ ವೈದ್ಯರು ತಿಳಿಸುತ್ತಾರೆ. ಬಳಿಕ ಔಷಧಿ ತೆಗೆದುಕೊಂಡರು ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರುವುದಿಲ್ಲ.

    2021ರ ಸೆಪ್ಟೆಂಬರ್​​ ತಿಂಗಳಲ್ಲಿ ಸತೀಶ್​ ಮನೆಯಲ್ಲಿ ಊಟವುದನ್ನು ಕೆಲ ದಿನಗಳ ತಪ್ಪಿಸಿದಾಗ ಆರೋಗ್ಯ ಸುಧಾರಿಸುತ್ತಿರುವುದನ್ನು ಗಮನಿಸುತ್ತಾರೆ. ಇದಾದ ಬಳಿಕ ಆತನ ಪತ್ನಿಯ ಗೆಳತಿಯನ್ನು ಭೇಟಿ ಮಾಡಿ ಊಟದಲ್ಲಿ ಏನಾದರೂ ಬೆರಸಿ ಕೊಡುತ್ತಿದ್ದಾಳಾ ಒಮ್ಮೆ ನೋಡಿ ಹೇಳಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಸ್ನೇಹಿತೆಯೊಂದಿಗೆ ಮಾತನಾಡುವಾಗ ಆಶಾ ಎಲ್ಲವನ್ನು ಬಾಯಿ ಬಿಡುತ್ತಾಳೆ. ಪ್ರತಿದಿನ ಊಟದಲ್ಲಿ ಡ್ರಗ್ಸ್​ ಬೆರೆಸುತ್ತಿರುವುದಾಗಿ ಹೇಳುತ್ತಾಳೆ. ಅಲ್ಲದೆ, ಮೆಡಿಸಿನ್​ನ ಫೋಟೋವನ್ನು ಕೂಡ ಸ್ನೇಹಿತೆಗೆ ರವಾನಿಸುತ್ತಾಳೆ. ಇದಾದ ಬಳಿಕ ಸತೀಶ್​ಗೆ ಪತ್ನಿಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಬಳಿಕ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿ ಪತ್ನಿಯ ಕೃತ್ಯವಿರುವ ದೃಶ್ಯದ ಸಮೇತ ಪೊಲೀಸ್​ ಠಾಣೆಗೆ ತೆರಳಿ ಸತೀಶ್​ ದೂರು ನೀಡುತ್ತಾನೆ.

    ಇದೀಗ ಸತೀಶ್​ ಪತ್ನಿ ಆಶಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ಈ ಕೃತ್ಯದ ಹಿಂದಿನ ಉದ್ದೇಶ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಆದರೆ, ಮಹಿಳೆಯು ನೀಡಿರುವ ಹೇಳಿಕೆ ಪ್ರಕಾರ ತನ್ನ ಹೆಸರಲ್ಲಿ ಯಾವುದೇ ಆಸ್ತಿಯನ್ನು ಬರೆಯದೆ ಎಲ್ಲವನ್ನು ತನ್ನ ಕುಟುಂಬ ಮತ್ತು ಸಹೋದರರಿಗೆ ಪತಿ ಬರೆದಿದ್ದ. ಅದಕ್ಕೆ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸತ್ಯದ ಅನ್ವೇಷಣೆಗಾಗಿ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    U19 World Cup Final: ಇಂಗ್ಲೆಂಡ್​ ವಿರುದ್ಧ ವಿರೋಚಿತ ಗೆಲುವು: 5ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟ ಭಾರತ

    ಫೇಸ್​ಬುಕ್​ ಮೆಟಾಗೆ ಎದುರಾಗಿದೆ ಸಂಕಟ?

    ಸಂದೇಶ್ ಚಿತ್ರಕ್ಕೆ ಪ್ರಭುದೇವ; ಐದು ಭಾಷೆಗಳ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts