More

    ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ

    ನವದೆಹಲಿ: ಮುಂಬರುವ ಪುರುಷರ ಟಿ20 ವಿಶ್ವಕಪ್​ ಟೂರ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ)ಯು ಶುಕ್ರವಾರ ಬಹುಮಾನದ ಮೊತ್ತವನ್ನು ಘೋಷಣೆ ಮಾಡಿದೆ. ಟೂರ್ನಿಯಲ್ಲಿ ವಿಜಯ ಸಾಧಿಸುವ ತಂಡವು ತಮ್ಮ ಜತೆಗೆ 1.6 ಮಿಲಿಯನ್​ ಅಮೆರಿಕ ಡಾಲರ್ ತೆಗೆದುಕೊಂಡು ಹೋಗಲಿದೆ. ಭಾರತೀಯ ಕರೆನ್ಸಿ ಪ್ರಕಾರ 13,02,24,080 ರೂಪಾಯಿ ಬಹುಮಾನ ಮೊತ್ತ ಸಿಗಲಿದೆ.

    ಬಹುಮಾನದ ವಿಷಯವಾಗಿ ಉನ್ನತ ಕ್ರಿಕೆಟ್​ ಮಂಡಳಿಯು ಇಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ನವೆಂಬರ್​ 13ರಂದು ಮೆಲ್ಬೋರ್ನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಗೆಲುವ ಸಾಧಿಸುವ ತಂಡವು 13 ಕೋಟಿ ರೂ. ಬಹುಮಾನ ಪಡೆದರೆ, ರನ್ನರ್​ ಅಪ್​ ತಂಡಕ್ಕೆ ಅದರ ಅರ್ಧದಷ್ಟು ಹಣ ಬಹುಮಾನವಾಗಿ ಸಿಗಲಿದೆ.

    ಸೆಮಿಫೈನಲಿಸ್ಟ್​ಗಳಿಗೆ 4 ಲಕ್ಷ ಡಾಲರ್​ ಸಿಗಲಿದೆ. ಅಂದರೆ, ಭಾರತೀಯ ಕರೆನ್ಸಿ ಪ್ರಕಾರ 3 ಕೋಟಿ ರೂಪಾಯಿ ಬಹುಮಾನ ದೊರೆಯಲಿದೆ. ಇಡೀ ಟೂರ್ನಿಯ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್​ ಡಾಲರ್ (45,46,38,800 ರೂಪಾಯಿ)​ ಆಗಿದೆ.

    ಸೂಪರ್​ 12 ಹಂತದಲ್ಲಿ ಟೂರ್ನಿಯಿಂದ ಹೊರ ಬೀಳುವ 8 ತಂಡಕ್ಕೆ ತಲಾ 70 ಸಾವಿರ ಡಾಲರ್​ (56,81,949 ರೂಪಾಯಿ) ಸಿಗಲಿದೆ. ಸದ್ಯಕ್ಕೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್​, ನ್ಯೂಜಿಲೆಂಡ್​, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನೇರವಾಗಿ ಸೂಪರ್​ 12 ಹಂತಕ್ಕೆ ತಲುಪಿವೆ.

    ಉಳಿದ ಎಂಟು ತಂಡಗಳಲ್ಲಿ ಗ್ರೂಪ್​ ಎನಲ್ಲಿ ನಮಿಬಿಯಾ, ಶ್ರೀಲಂಕಾ, ನೆದರ್​ಲೆಂಡ್​, ಯುಎಇ ಮತ್ತು ಗ್ರೂಪ್​ ಬಿನಲ್ಲಿ ವೆಸ್ಟ್​ಇಂಡೀಸ್​, ಸ್ಕಾಟ್​ಲೆಂಡ್​, ಐರ್ಲೆಂಡ್​ ಮತ್ತು ಜಿಂಬಾಬ್ವೆ ಮೊದಲ ಅರ್ಹತಾ ಸುತ್ತಿನಲ್ಲಿ ಸೆಣಸಾಡಲಿವೆ. ಇದು ನಾಕೌಟ್​ ಮಾದರಿಯ ಪಂದ್ಯಗಳಾಗಿದ್ದು, ಇಲ್ಲಿ ಯಾರು ಗೆಲ್ಲುತ್ತಾರೋ ಅವರು ಟೂರ್ನಿಗೆ ಅವಕಾಶ ಪಡೆಯಲಿದ್ದಾರೆ. ಮೊದಲ ಸುತ್ತಿನಲ್ಲಿ ಗೆದ್ದ ತಂಡಕ್ಕೆ ತಲಾ 40 ಸಾವಿರ ಡಾಲರ್​ (32,52,380 ರೂಪಾಯಿ) ಸಿಗಲಿದೆ. ಮೊದಲ ಸುತ್ತಿನಲ್ಲಿ ಟೂರ್ನಿಯಿಂದ ಹೊರ ಬೀಳುವ ತಂಡಕ್ಕೂ ತಲಾ 40 ಸಾವಿರ ಡಾಲರ್​ (32,52,380 ರೂಪಾಯಿ) ಸಿಗಲಿದೆ.

    ಟೂರ್ನಿಯಲ್ಲಿ ಒಟ್ಟು 16 ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಅಕ್ಟೋಬರ್​ 16 ರಿಂದ ಆರಂಭವಾಗಲಿರುವ ವಿಶ್ವಕಪ್​ ನವೆಂಬರ್​ 16ಕ್ಕೆ ಅಂತ್ಯವಾಗಲಿದೆ. ಈ ಬಾರಿ ಟಿ20 ವಿಶ್ವಕಪ್​ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿದೆ. ಕಳೆದ ಬಾರಿಯ ವಿಶ್ವಕಪ್​ನಂತೆಯೇ ಈ ಬಾರಿಯು ಟೀಮ್​ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಎದುರಿಸಲಿದೆ. ಅಕ್ಟೋಬರ್​​ 23ರಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕ್ರಿಕೆಟ್​ ಕದನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಮೆಲ್ಬೋರ್ನ್​ ಸ್ಟೇಡಿಂಯಲ್ಲಿ ಪಂದ್ಯ ನಡೆಯಲಿದೆ.

    ಒಟ್ಟು 16 ತಂಡಗಳು ಭಾಗವಹಿಸಲಿದ್ದು, 45 ಪಂದ್ಯಗಳು ನಡೆಯಲಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪುರುಷರ ಆವೃತ್ತಿಯ ಟಿ20 ವಿಶ್ವಕಪ್​ ಆತಿಥ್ಯವನ್ನು ವಹಿಸಿದೆ. ಈ ಹಿಂದೆ ಅಂದರೆ, 2020ರ ಫೆಬ್ರವರಿ-ಮಾರ್ಚ್​ನಲ್ಲಿ ಮಹಿಳಾ ಟಿ20 ವಿಶ್ವಕಪ್​ ಆತಿಥ್ಯ ವಹಿಸಿತ್ತು. ಟಿ20 ಪಂದ್ಯಗಳು ಆಸ್ಟ್ರೇಲಿಯಾದ ಅಡಿಲೇಡ್​, ಬ್ರಿಸ್ಬೇನ್​, ಗೀಲಾಂಗ್​, ಹೋಬರ್ಟ್​, ಮೆಲ್ಬೋರ್ನ್​, ಪರ್ತ್​ ಮತ್ತು ಸಿಡ್ನಿ ಮೈದಾನಗಳಲ್ಲಿ ನಡೆಯಲಿವೆ.

    ಭಾರತದ ವೇಳಾಪಟ್ಟಿ ಹೀಗಿದೆ…
    1. ಅಕ್ಟೋಬರ್​ 23: ಎದುರಾಳಿ ಪಾಕಿಸ್ತಾನ, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​
    2. ಅಕ್ಟೋಬರ್​ 27: ಎದುರಾಳಿ ಗ್ರೂಪ್​ ಎ ರನ್ನರ್​ ಅಪ್​, ಸಿಡ್ನಿ ಕ್ರಿಕೆಟ್​ ಗ್ರೌಂಡ್​
    3. ಅಕ್ಟೋಬರ್ 30: ಎದುರಾಳಿ ದಕ್ಷಿಣ ಆಫ್ರಿಕಾ, ಪರ್ತ್​ ಸ್ಟೇಡಿಯಂ
    4. ನವೆಂಬರ್​ 02: ಎದುರಾಳಿ ಬಾಂಗ್ಲಾದೇಶ, ಅಡಿಲೇಡ್​ ಓವಲ್​
    5. ನವೆಂಬರ್​ 06: ಎದುರಾಳಿ ಗ್ರೂಪ್​ ಬಿ ವಿನ್ನರ್​, ಮೆಲ್ಬೋರ್ನ್​ ಕ್ರಿಕೆಟ್​ ಗ್ರೌಂಡ್​

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    PHOTO GALLERY| ಗುಂಡ್ಲುಪೇಟೆಯಲ್ಲಿ ಭಾರತ್​ ಜೋಡೋ ಯಾತ್ರೆ ಅಬ್ಬರ

    ಹಾಸನದಲ್ಲಿ ಇಸ್ಪೀಟ್​ ಅಡ್ಡೆ ಮೇಲೆ ದಾಳಿ: ಠಾಣೆಗೆ ನುಗ್ಗಿ ಮಹಿಳಾ ಪಿಎಸ್​ಐ ಮೇಲೆ ಹಲ್ಲೆಗೆ ಯತ್ನಿಸಿದ ಗ್ರಾಪಂ ಸದಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts