More

    ಕೈದಿ 2ನೇ ಭಾಗದಲ್ಲಿ ದಿಲ್ಲಿ ಎದುರು ಅಬ್ಬರಿಸಲಿದ್ದಾರಾ ರೋಲೆಕ್ಸ್ ಸರ್​? ನಟ ಸೂರ್ಯ ಉತ್ತರ ಹೀಗಿತ್ತು….

    ಚೆನ್ನೈ: ಸೂಪರ್​ ಸ್ಟಾರ್​ ಸೂರ್ಯ, ಇತ್ತೀಚೆಗೆ ಬಿಡುಗಡೆಗೊಂಡು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಿದ ಹಿರಿಯ ನಟ ಕಮಲ್​ ಹಾಸನ್​ ಅಭಿನಯದ ವಿಕ್ರಮ್​​ ಸಿನಿಮಾ ಮೂಲಕ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರ ಸಿನಿ ಯೂನಿವರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಖಡಕ್​​ ವಿಲನ್​ ಆಗಿ ಕ್ಲೈಮ್ಯಾಕ್ಸ್​ನಲ್ಲಿ ಕೇಲವೇ ನಿಮಿಷ ಕಾಣಿಸಿಕೊಂಡರು ಅವರ ಪಾತ್ರ ಎಲ್ಲರ ಮನದಲ್ಲಿ ಉಳಿದಿದೆ.

    ರೋಲೆಕ್ಸ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರ್ಯ, ತಮ್ಮ ಸ್ಕ್ರೀನ್​ ಪ್ರಸೆನ್ಸ್​ ಮೂಲಕ ಎಲ್ಲರಿಗೂ ಇಷ್ಟವಾಗಿದ್ದಾರೆ. ರೋಲೆಕ್ಸ್​ ಎಂದೇ ಇದೀಗ ಎಲ್ಲ ಕಡೆ ಗುರುತಿಸಿಕೊಳ್ಳುತ್ತಿದ್ದಾರೆ. ಅಷ್ಟು ಅಚ್ಚುಕಟ್ಟಾಗಿ ಸೂರ್ಯ ನಟಿಸಿದ್ದಾರೆ. ಯಾವಾಗ ಸೂರ್ಯ ಅವರು ವಿಕ್ರಮ್​​ ಸಿನಿಮಾದಲ್ಲಿ ನಟಿಸಿದರೋ ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಸೂಪರ್​ ಹಿಟ್ ಸಿನಿಮಾ “ಕೈದಿ”ಯಲ್ಲಿ ಸೂರ್ಯ ಕಾಣಿಸಿಕೊಳ್ತಾರಾ? ಏಕೆಂದರೆ, ಕೈದಿ ಮತ್ತು ವಿಕ್ರಮ್​ ಸಿನಿಮಾಗೂ ಒಂದು ಲಿಂಕ್​ ಇದೆ. ಎರಡು ಸಿನಿಮಾ ಕೂಡ ಡ್ರಗ್ಸ್​ ಮಾಫಿಯಾ ಬಗ್ಗೆ ಇದೆ. ವಿಕ್ರಮ್​ನಲ್ಲಿ ಸೂರ್ಯ ದೊಡ್ಡ ವಿಲನ್​. ಕೈದಿಯಲ್ಲೂ ಸೂರ್ಯ ವಿಲನ್​ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ವಿರುಮಾನ್​ ಸಿನಿಮಾ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಸೂರ್ಯ ಸುಳಿವು ನೀಡಿದ್ದಾರೆ.

    ಅಂದಹಾರೆ ವಿರುಮಾನ್​ ಸಿನಿಮಾದಲ್ಲಿ ನಟ ಕಾರ್ತಿಕ್​ ನಟಿಸಿದ್ದಾರೆ. ಕಾರ್ತಿಕ್​ ಮತ್ತು ಸೂರ್ಯ ಸಹೋದರರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಮದುರೈನಲ್ಲಿ ನಿನ್ನೆ (ಆ.04) ವಿರುಮಾನ್​ ಆಡಿಯೋ ಲಾಂಚ್​ ಕಾರ್ಯಕ್ರಮ ನಡೆಯಿತು. ಸೂರ್ಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಲೋಕೇಶ್​ ಕನಗರಾಜ್​ ನಿರ್ದೇಶನದ ಕೈದಿ ಚಿತ್ರದ ಮುಂದುವರಿದ ಭಾಗದಲ್ಲಿ ಸೂರ್ಯ ವಿಲನ್​ ಆಗಿ ನಟಿಸುವ ಸಾಧ್ಯತೆ ಇದೆ.

    ಆಡಿಯೋ ಕಾರ್ಯಕ್ರಮದಲ್ಲಿ ರೋಲೆಕ್ಸ್​ ಎಂದೇ ಅಭಿಮಾನಿಗಳು ಸೂರ್ಯರನ್ನು ಹುರಿದುಂಬಿಸಿದರು. ಈ ವೇಳೆ ಅಭಿಮಾನಿಗಳನ್ನು ಪ್ರಶ್ನಿಸಿದ ಸೂರ್ಯ ರೋಲೆಕ್ಸ್ ಮತ್ತು ದಿಲ್ಲಿ ಏನು ಮಾಡಬೇಕೆಂದು ನೀವು ಬಯಸುತ್ತೀರಿ? ಎಂದರು. ಮನೆಯಲ್ಲಿ ರೋಲೆಕ್ಸ್​ ಮತ್ತು ದಿಲ್ಲಿ ಪರಸ್ಪರ ಸಾಕಷ್ಟು ಜಗಳವಾಡಿದ್ದಾರೆ ಎಂದು ಕಾರ್ತಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ಸೂರ್ಯ, “ಸಮಯ ಹೇಳುತ್ತದೆ. ಅದಕ್ಕಾಗಿ ಕಾಯೋಣ” ಎಂದು ಹೇಳಿದರು.

    ವಿಕ್ರಮ್ ಚಿತ್ರದಲ್ಲಿ ಸೂರ್ಯ ರೋಲೆಕ್ಸ್ ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಸೂರ್ಯ ಅಭಿನಯದಿಂದ ಪ್ರಭಾವಿತರಾದ ಕಮಲ್ ಹಾಸನ್, ಸೂರ್ಯರಿಗೆ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದರು. ಇದೀಗ ಆಡಿಯೋ ಲಾಂಚ್​ನಲ್ಲಿ ಸೂರ್ಯ ಅವರ ಭರವಸೆಯ ಹೇಳಿಕೆ ಅಭಿಮಾನಿಗಳಿಗೆ ಖುಷಿ ತರಿಸಿದೆ. ಆದರೆ, ಅಧಿಕೃತ ಪ್ರಕಟಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲವು ಅಂದುಕೊಂಡತೆ ನಡೆದರೆ, ಕೈದಿ ಸಿನಿಮಾದಲ್ಲಿ ಮತ್ತೆ ರೋಲೆಕ್ಸ್​ ಎದುರಾಗಲಿದ್ದಾರೆ. (ಏಜೆನ್ಸೀಸ್​)

    ಮಂಡ್ಯದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ ಕೇಸ್​: 2 ತಿಂಗಳ ನಂತ್ರ ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ ಬಯಲು

    ಲೋಕದ ಡೊಂಕಿನತ್ತ ಗಮನ: ಸಮುದಾಯ, ಸಮಷ್ಟಿ ಸಮಸ್ಯೆಗಳ ಕಡೆಗೆ ಲೋಕಾಯುಕ್ತ ಚಿತ್ತ

    ಯಾದಗಿರಿಯಲ್ಲಿ ಕಾರು-ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts