More

    ಮುಸ್ಲಿಮರೇ ಹೆಚ್ಚಾಗಿ ಕಾಂಡೋಮ್​ ಬಳಸುತ್ತಿರುವುದು: ಮೋಹನ್​ ಭಾಗವತ್​ ಹೇಳಿಕೆಗೆ ಓವೈಸಿ ತಿರುಗೇಟು

    ಹೈದರಾಬಾದ್​: ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಮತ್ತು ಕಾಂಡೋಮ್​​ ಬಳಸುವುದರಲ್ಲಿ ಮುಸ್ಲಿಮರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನುವ ಮೂಲಕ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರ ಜನಸಂಖ್ಯಾ ನಿಯಂತ್ರಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಹೈದರಾಬಾದ್​ನಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದನ್ನು ಓವೈಸಿ ಟ್ವೀಟ್​ ಮಾಡಿದ್ದು, ದೇಶದಲ್ಲಿ ಮುಸ್ಲಿಮರ ಜನಸಖ್ಯೆ ಹೆಚ್ಚಾಗುತ್ತಿಲ್ಲ, ಬದಲಾಗಿ ಕುಸಿಯುತ್ತಿದೆ. ಮುಸ್ಲಿಮರಲ್ಲೂ ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಹೆಚ್ಚಾಗಿ ಕಾಂಡೋಮ್ ಬಳಸುತ್ತಿರುವವರು ಯಾರು? ನಾವುಗಳು. ಆದರೆ, ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ವಿಡಿಯೋದಲ್ಲಿ ಓವೈಸಿ ಹೇಳಿದ್ದಾರೆ.

    ಈ ಹಿಂದೆ ಆರ್​ಎಸ್​ಎಸ್​ ವಾರ್ಷಿಕ ದಸರಾ ಸಮಾವೇಶದಲ್ಲಿ ಮಾತನಾಡಿದ್ದ ಮೋಹನ್​ ಭಾಗವತ್​, ಎಲ್ಲರಿಗೂ ಅನ್ವಯಿಸುವ ಜನಸಂಖ್ಯಾ ನಿಯಂತ್ರಣ ನೀತಿ ಭಾರತಕ್ಕೆ ಅಗತ್ಯವಿದೆ ಎಂದಿದ್ದರು. ಅಲ್ಲದೆ, ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಧಾರ್ಮಿಕ ಆಧಾರದ ಮೇಲಿನ ಸಮತೋಲನವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದರು.

    ಮೋಹನ್​ ಭಾಗವತ್​ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ್ದನ್ನು ವಿರೋಧಿಸಿರುವ ಓವೈಸಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5 ವರದಿಯನ್ನು ಉಲ್ಲೇಖಿಸಿ, ಒಟ್ಟು ಫಲವತ್ತತೆ ದರ (ಟಿಎಫ್​ಆರ್​) ಮುಸ್ಲಿಮರಲ್ಲೇ ಹೆಚ್ಚಾಗಿ ಕುಸಿದಿದೆ ಎಂದರು. ಅಲ್ಲದೆ, 2000 ದಿಂದ 2019ರವರೆಗೆ ಲಕ್ಷಾಂತರ ಹಿಂದು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಇದರು ಕೂಡ ಸರ್ಕಾರವೇ ನೀಡಿರುವ ಅಂಕಿ-ಅಂಶವಾಗಿದೆ. ಆದರೆ, ಮೋಹನ್​ ಭಾಗವತ್​ ಅವರು ಈ ಬಗ್ಗೆ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.

    ನೆನಪಿಡಿ, ಹಿಂದು ರಾಷ್ಟ್ರವು ಭಾರತೀಯ ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಇದು ಭಾರತದ ವಿರುದ್ಧವಾಗಿದೆ ಎಂದು ಓವೈಸಿ ಹೇಳಿದರು. (ಏಜೆನ್ಸೀಸ್​)

    VIDEO| ಗಂಧದ ಗುಡಿ ಟ್ರೈಲರ್​ಗೆ ಮೋದಿ ಮೆಚ್ಚುಗೆ: ಅಪ್ಪುವಿನ ಕೊನೆಯ ಪ್ರಯತ್ನಕ್ಕೆ ಶುಭಕೋರಿದ ಪ್ರಧಾನಿ

    ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಸಸ್ಪೆಂಡ್​!

    VIDEO| ಗಂಧದ ಗುಡಿ ಟ್ರೈಲರ್​ ಬಿಡುಗಡೆ: ಅ. 28ಕ್ಕೆ ತೆರೆಯ ಮೇಲೆ ರಾರಾಜಿಸಲಿದೆ ಅಪ್ಪುವಿನ ಅದ್ಭುತ ಕನಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts