More

    ನಾಗಚೈತನ್ಯರ ಮೊದಲ ಪತ್ನಿ ಮತ್ತು ಬೆಡ್​ರೂಮ್​ ರಹಸ್ಯಗಳ ಬಗ್ಗೆ ಬೋಲ್ಡ್​ ಆಗಿ ಮಾತನಾಡಿದ್ದರು ಸಮಂತಾ..!

    ಹೈದರಾಬಾದ್​: ಕಳೆದ ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಇಬ್ಬರು ಭಾರೀ ಸುದ್ದಿಯಾಗುತ್ತಲೇ ಇದ್ದಾರೆ. ಮಾಜಿ ತಾರಾದಂಪತಿ ಏನೇ ಮಾಡಿದರು, ಏನೇ ಮಾತನಾಡಿದರೂ ಸುದ್ದಿಯಾಗುತ್ತಿದೆ. ಇದೀಗ ಸಮಂತಾ ಹೇಳಿರುವ ಮಾತೊಂದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಸದ್ಯ ಸಮಂತಾ ಮತ್ತು ನಾಗಚೈತನ್ಯ ಸಿನಿಮಾ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿಲ್ಲ. ಆದರೆ, ಹಳೆಯ ವಿಚಾರಗಳೇ ಹೆಚ್ಚಾಗಿ ಸುದ್ದಿಯಾಗುತ್ತಿವೆ. ಇದೀಗ ಸಮಂತಾ ಅವರ ಹಳೆಯ ಸಂದರ್ಶನವೊಂದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಕೆಲವು ರಹಸ್ಯಗಳನ್ನು ಬಹಿರಂಗವಾಗಿಯೇ ಮಾತನಾಡಿದ್ದು, ಆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

    ಸ್ಯಾಮ್​-ಚಾಯ್​ ಮದುವೆಯಾದಾಗ, ಸಮಂತಾ ಲಕ್ಷ್ಮಿ ಮಂಚು ಅವರ ಶೋ ಫೀಟ್ ಅಪ್ ವಿತ್ ದಿ ಸ್ಟಾರ್ಸ್‌ ಶೋನಲ್ಲಿ ಕಾಣಿಸಿಕೊಂಡು, ನಿರೂಪಕರೊಂದಿಗೆ ಸೂಪರ್ ಕ್ಯಾಂಡಿಡ್ ಚಾಟ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಸಮಂತಾ ತಮ್ಮ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ವಿವರಗಳನ್ನು ಬಹಿರಂಗಪಡಿಸಿದರು. ಸಮಂತಾ ಮತ್ತು ನಾಗಚೈತನ್ಯ ಮದುವೆಯಾಗುವ ಮುನ್ನ ಲಿವ್-ಇನ್-ರಿಲೇಷನ್​ಶಿಪ್​​ನಲ್ಲಿದ್ದೆವು ಎಂದು ಶೋನಲ್ಲಿ ಬಹಿರಂಗಪಡಿಸಿದ್ದರು.

    ಈ ಶೋನಲ್ಲಿ ಬೆಡ್​ರೂಮ್​ ಕುರಿತು ಸಮಂತಾಗೆ ಲಕ್ಷ್ಮಿ ಅವರು ಪ್ರಶ್ನೆ ಮಾಡಿದ್ದರು. ನೀವು ಮದುವೆಗೂ ಮೊದಲು ಲಿವಿಂಗ್​ ರಿಲೇಷನ್​ಶಿಪ್​ನಲ್ಲಿದ್ದಿದ್ದು ಗೊತ್ತಾಯ್ತು. ನೀವು ಏಕಾಂಗಿಯಾಗಿದ್ದಾಗ ಮತ್ತು ಒಬ್ಬ ವ್ಯಕ್ತಿಯ ಜತೆ ಇರುವಾಗ ನಿಮ್ಮ ಬೆಡ್​ರೂಮ್​ನಲ್ಲಾದ ಮೂರು ವ್ಯತ್ಯಾಸಗಳನ್ನು ತಿಳಿಸುವಂತೆ ಲಕ್ಷ್ಮಿ ಪ್ರಶ್ನೆ ಮಾಡಿದರು.

    ಈ ಪ್ರಶ್ನೆಗೆ ಸ್ವಲ್ಪವೂ ಹಿಂಜರಿಯದೇ ಉತ್ತರ ನೀಡಿದ್ದ ಸಮಂತಾ, ನಾಗಚೈತನ್ಯಗೆ ಮೊದಲ ಪತ್ನಿ ತಲೆದಿಂಬು. ನಾನು ಕಿಸ್​ ಮಾಡಬೇಕೆಂದರು ತಲೆದಿಂಬು ನಮ್ಮಿಬ್ಬರ ನಡುವೆ ಇತ್ತು. ಇಷ್ಟೇ ಸಾಕು ಏಕೆಂದರೆ, ಈಗಾಗಲೇ ನಾನು ಬಹಳಷ್ಟು ವಿಷಯಗಳನ್ನು ಹೇಳಿದ್ದೇನೆಂದು ಭಾವಿಸುತ್ತೇನೆಂದು ಸಮಂತಾ ಹೇಳಿದ್ದರು.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ಶಾಕುಂತಲ ಚಿತ್ರವನ್ನು ಮುಗಿಸಿದ್ದು, ಯಶೋಧ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್​ಗೆ ಹೆಜ್ಜೆ ಹಾಕುವ ಮೂಲಕ ಭಾರಿ ಸುದ್ದಿಯಾಗಿದ್ದು, ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ. ಇನ್ನು ನಾಗಚೈತನ್ಯ ಬಂಗಾರರಾಜು ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಅಲ್ಲದೆ, ಆಮೀರ್​ ಖಾನ್​ ನಟನೆಯ ಲಾಲ್​ ಸಿಂಗ್​ ಛಡ್ಡ ಸಿನಿಮಾದಲ್ಲೂ ನಾಗಚೈತನ್ಯ ನಟಿಸಿದ್ದು, ಮೊದಲ ಬಾರಿಗೆ ಬಾಲಿವುಡ್​ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಏಪ್ರಿಲ್​ 14ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಪುತಿನ್​ಗೆ ಬೈಡೆನ್​ ಗಂಭೀರ ಎಚ್ಚರಿಕೆ: ದೂರವಾಣಿ ಮೂಲಕ ಒಂದು ತಾಸು ಮಾತುಕತೆ

    ಪಂಜಾಬ್​ ಚುನಾವಣೆ ಕಣದಲ್ಲಿ ನಶೆಯದ್ದೇ ಸದ್ದು: ಪ್ರಭಾವಿಗಳಿಂದ ಮಾಫಿಯಾಗೆ ರಕ್ಷಣೆ- ಆರೋಪ

    ಪುಲ್ವಾಮಾ ದಾಳಿಗೆ ಮೂರು ವರ್ಷ: ರಕ್ತಸಿಕ್ತ ಚರಿತ್ರೆಯಲ್ಲಿ ಘೋರ ಅಧ್ಯಾಯ- ‘ಪಾಪಿ’ಸ್ತಾನಕ್ಕೆ ಪ್ರತ್ಯುತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts