More

    ವೈರಲ್​ ಆಗ್ತಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!

    ಮುಂಬೈ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಬಾಲಿವುಡ್ ಹಿರಿಯ​ ನಟಿ ರೇಖಾ ಕುರಿತ ಆಸಕ್ತಿಕರ ಸುದ್ದಿಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಭಾರತ ಮತ್ತು ಪಾಕಿಸ್ತಾನ ಪಾಲಿಗೆ ಈ ಸುದ್ದಿ ವಿಶೇಷ ಎನಿಸದೇ ಇರದು.

    ಇಮ್ರಾನ್​ ಖಾನ್​ ಪಾಕ್​ ಕಂಡ ಶ್ರೇಷ್ಠ ಆಲ್​ರೌಂಡರ್​ ಆಟಗಾರ. 1992ರ ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ತಂಡವನ್ನು ಮುನ್ನಡೆಸಿ ಮೊದಲ ಬಾರಿಗೆ ಟ್ರೋಫಿ ಗೆದ್ದುಕೊಟ್ಟಂತಹ ಶ್ರೇಷ್ಠ ನಾಯಕ. ಕ್ರಿಕೆಟ್​ ದಿನಗಳಲ್ಲಿ ಭಾರತೀಯರು ಸೇರಿದಂತೆ ಸುಂದರ ಯುವತಿಯರು ಇಮ್ರಾನ್​ಗೆ ಫಿದಾ ಆಗಿದ್ದರಂತೆ.

    ಈ ಹಿಂದೆ ಪಾಕಿಸ್ತಾನ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಚೆನ್ನಾಗಿಯೇ ಇತ್ತು. ಈ ವೇಳೆ ನಿಯಮಿತವಾಗಿ ಉಭಯ ತಂಡಗಳ ನಡುವೆ ಸರಣಿಗಳು ನಡೆಯುತ್ತಿದ್ದವು. ಬಾಲಿವುಡ್​ ಮತ್ತು ಕ್ರಿಕೆಟರ್ಸ್​ ನಡುವೆ ಹೆಚ್ಚು ಮಾತುಕತೆಗಳು ಸಹ ಆಗುತ್ತಿದ್ದವು.

    ಇದೇ ಅವಕಾಶವನ್ನು ಬಳಸಿಕೊಳ್ಳುತ್ತಿದ್ದ ಇಮ್ರಾನ್​ ಹೆಚ್ಚು ಬಾಲಿವುಡ್​ ನಟಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರಂತೆ. ಇದೀಗ ಇಮ್ರಾನ್​ಗೆ ಸಂಬಂಧಪಟ್ಟ ಹಳೆಯ ಲೇಖನವವೊಂದು ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದ್ದು, ಅನೇಕ ಭಾರತೀಯ ಮತ್ತು ಪಾಕಿಸ್ತಾನಿಗರ ಹುಬ್ಬೇರಿಸಿದೆ.

    ವೈರಲ್​ ಆಗಿರುವ ಲೇಖನ ಪ್ರಕಾರ ಇಮ್ರಾನ್​ ಖಾನ್​ ಮತ್ತು ನಟಿ ರೇಖಾ ಬಹುತೇಕ ಮದುವೆ ಆಗುವ ಹಂತಕ್ಕೆ ಹೋಗಿದ್ದರಂತೆ. ಈ ವಿಚಾರ ರೇಖಾಗೂ ಸಹ ಇಷ್ಟವಾಗಿತ್ತಂತೆ. ಇಮ್ರಾನ್​ ಖಾನ್​ ಸುಮಾರು 1 ತಿಂಗಳ ಕಾಲ ರೇಖಾ ಜತೆ ಮುಂಬೈನಲ್ಲಿ ಉತ್ತಮ ಕ್ಷಣಗಳನ್ನು ಕಳೆದಿದ್ದರಂತೆ. ಹತ್ತಿರದ ಬೀಚ್​ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರಂತೆ.

    ಅನೇಕ ಜನರು ಇಮ್ರಾನ್​-ರೇಖಾರನ್ನು ಒಟ್ಟಿಗೆ ನೋಡಿದ್ದಾರೆಂದು ಹೇಳಿಕೊಂಡಿದ್ದಾರೆ. ಇಬ್ಬರು ಪರಸ್ಪರರನ್ನು ಆಳವಾಗಿ ಮತ್ತು ಉತ್ಸಾಹದಿಂದ ಪ್ರೀತಿಸುತ್ತಿದ್ದರು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

    ನಟಿಯ ಜತೆಗಿನ ಡೇಟಿಂಗ್​ ಬಗ್ಗೆ ಆ ವೇಳೆಯೇ ಸ್ಪಷ್ಟನೆ ನೀಡಿರುವ ಇಮ್ರಾನ್​, ನಟಿಯರ ಒಡನಾಟ ಅಲ್ಪಾವಧಿಗೆ ಮಾತ್ರ ಒಳ್ಳೆಯದು. ನಾನು ಅವರ ಒಡನಾಟವನ್ನು ಸ್ವಲ್ಪ ಸಮಯದವರೆಗೆ ಆನಂದಿಸುತ್ತೇನೆ ಮತ್ತು ನಂತರ ನನ್ನ ಪಾಡಿಗೆ ನಾನು ಮುಂದುವರಿಯುತ್ತೇನೆ. ಚಲನಚಿತ್ರ ನಟಿಯನ್ನು ಮದುವೆಯಾಗುವ ಬಗ್ಗೆ ಯೋಚಿಸಲು ಸಹ ನನಗೆ ಸಾಧ್ಯವಿಲ್ಲ ಎಂದು ಹೇಳಿರುವುದು ಲೇಖನದಲ್ಲಿ ಪ್ರಕಟವಾಗಿದೆ.

    View this post on Instagram

    A post shared by Sanam Maher (@topbastard)

    ವರದಿಗಳ ಪ್ರಕಾರ, ಇಮ್ರಾನ್ ಖಾನ್​ ಬಾಲಿವುಡ್ ನಟಿಯರಾದ ಶಬಾನಾ ಅಜ್ಮಿ ಮತ್ತು ಜೀನತ್ ಅಮನ್ ಅವರೊಂದಿಗೂ ಸುತ್ತಾಡಿದ್ದರೂ ಎಂದು ಹೇಳಲಾಗಿದೆ.

    1992ರಲ್ಲೇ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಇಮ್ರಾನ್​ ಖಾನ್​ ಅಂದಿನಿಂದಲೂ ಪಾಕಿಸ್ತಾನ ವಿಶೇಷ ವ್ಯಕ್ತಿಯಾಗಿಯೇ ಉಳಿದಿದ್ದಾರೆ. ನಿವೃತ್ತಿ ಬಳಿಕ ರಾಜಕೀಯಕ್ಕೆ ಪ್ರವೇಶ ಪಡೆದ ಇಮ್ರಾನ್​ 2018ರ ಚುನಾವಣೆಯಲ್ಲಿ ಪಾಕ್​ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್​)

    ಕರೊನಾ ವಾರಿಯರ್ಸ್ ಆಗ್ತಾರಂತೆ ಸ್ಪರ್ಧಿಗಳು; ಬಿಗ್ ಬಾಸ್ ಸ್ಪರ್ಧಿ ಶುಭಾ ಪೂಂಜಾ ಲೈವ್ ಚಾಟ್

    ಟಾಲಿವುಡ್ ಮೇಕರ್ಸ್​ಗೆ ಬೇಡವಾದ್ರಾ ಕಿಯಾರಾ? ಹಾರುವಂತಿದೆ ಅಡ್ವಾಣಿಯ ಸಂಭಾವನೆ

    ಬಿಗ್​ಬಾಸ್​ನಿಂದ ಹೊರಬಂದ ಮೇಲೆ ಉಡುಪಿ ಹೋಟೆಲ್​ ಆರಂಭಿಸ್ತಾರಾ ಅರವಿಂದ್​-ದಿವ್ಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts