More

    BBK 9: ಜನರ ಗಮನ ಸೆಳೆಯಲು ಬಿಗ್​ಬಾಸ್​ ತಂಡ ಮಾಡಿರುವ ಹೊಸ ಪ್ಲಾನ್​ ಹೀಗಿದೆ…

    ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಬಿಗ್​ಬಾಸ್​ ಮನೆಯ ನವೀಕರಣ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್​ ಅವರು ಪ್ರೋಮೋ ಶೂಟ್​ ಸಹ ಪೂರ್ಣಗೊಳಿಸಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಕಲರ್ಸ್​ ಕನ್ನಡದ ಬಿಜಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಅವರು ಬಿಗ್​ಬಾಸ್​ ಮನೆ ಒಂದು ಭಾಗದ ಫೋಟೋವೊಂದನ್ನು ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದರು. ಕಿಚ್ಚ ಸುದೀಪ್​ ಅವರು ಪ್ರೋಮೋ ಶೂಟ್​ನಲ್ಲಿ ಭಾಗಿಯಾಗಿ ಬಂದ ಬಳಿಕ ಅವರು ಸಹ ಟ್ವೀಟ್​ ಮಾಡಿದ್ದಾರೆ. ಬಿಗ್​ಬಾಸ್​ ಹೊಸ ಸೀಸನ್​ಗಾಗಿ ಅತ್ಯಾಕರ್ಷಕ ಪ್ರೋಮೋ ಶೂಟ್​ ಮಾಡಲಾಗಿದೆ. ಇಡೀ ತಂಡದ ಶ್ರಮಕ್ಕೆ ಹಾಗೂ ಈ ಶೂಟ್​ನಲ್ಲಿ ಭಾಗವಹಿಸಿದ್ದ ಎಲ್ಲ ಪ್ರೀತಿಯ ಜನರಿಗೆ ಧನ್ಯವಾದಗಳು. ನೀವೆಲ್ಲ ಆದಷ್ಟು ಬೇಗ ಪ್ರೋಮೋವನ್ನು ಎದುರು ನೋಡಲಿದ್ದೀರಿ. ಇದು ಸೂಪರ್​ ಘೋಷಣೆ ಎಂದಿದ್ದಾರೆ.

    ಬಿಗ್​ಬಾಸ್​-9 ಆರಂಭವಾಗುವುದು ಖಚಿತವಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ತಾಜಾ ವಿಚಾರ ಏನೆಂದರೆ, ಮೂಲಗಳ ಪ್ರಕಾರ ಬಿಗ್​ಬಾಸ್​ ಆಯೋಜಕರು ಈ ಬಾರಿ ಹೊಸ ಪ್ರಯತ್ನದೊಂದಿಗೆ ಜನರ ಗಮನ ಸೆಳೆಯಲು ಪ್ಲಾನ್​ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಬಿಗ್​ಬಾಸ್​ ಸೀಸನ್​ 8ರಲ್ಲಿ ಅನೇಕ ಹೊಸ ಟಾಸ್ಕ್​ಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಇದು ವೀಕ್ಷಕರಿಗೆ ಬಹಳ ಖುಷಿಯನ್ನು ತಂದುಕೊಟ್ಟಿತ್ತು. ಇದನ್ನು ನೋಡಿ ತೆಲುಗು ಬಿಗ್​ಬಾಸ್​ ಕೂಡ ಒಂದಿಷ್ಟು ಟಾಸ್ಕ್​ಗಳನ್ನು ಕಾಪಿ ಮಾಡಿತ್ತು.

    ಇದೀಗ ಬಿಗ್​ಬಾಸ್​-9ನೇ ಸೀಸನ್​ನಲ್ಲಿ ಒಂದಿಷ್ಟು ಹೊಸ ಟಾಸ್ಕ್​ಗಳನ್ನು ಅಳವಡಿಸಿಕೊಳ್ಳಲು ಕಲರ್ಸ್​ ಕನ್ನಡ ಮುಂದಾಗಿದೆ. ಹಿಂದಿ ಬಿಗ್​ಬಾಸ್​ನಲ್ಲಿ ಹೆಚ್ಚು ಗಮನ ಸೆಳೆದ ಟಾಸ್ಕ್​ಗಳನ್ನು ಅಳವಡಿಸಿಕೊಳ್ಳಲು ಆಯೋಜಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಎಂದಿನಂತೆ ಈ ಬಾರಿಯೂ ಕೂಡ ಕಳಪೆ ಮತ್ತು ಉತ್ತಮ ಪ್ರದರ್ಶನ ಟಾಸ್ಕ್​ ಇರಲಿದೆ. ಏಕೆಂದರೆ, ಈ ಟಾಸ್ಕ್​ ವೀಕ್ಷಕರಿಗೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿತ್ತು.

    ಈ ಬಾರಿ ಬಿಗ್​ಬಾಸ್​ ಮನೆಗೆ ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​, ನಟ ನವೀನ್​ ಕೃಷ್ಣ, ನಿರ್ದೇಶಕ ರವಿ ಶ್ರೀವಾಸ್ತವ, ನಟ ತರುಣ್​ ಚಂದ್ರ, ಕಿರುತೆರೆ ನಟಿ ನಮ್ರತಾ ಗೌಡ, ನಟ ದಿಲೀಪ್​ ರಾಜ್​, ಹಿರಿಯ ನಟಿ ಪ್ರೇಮಾ, ಸೋಶಿಯಲ್​ ಮೀಡಿಯಾ ಸ್ಟಾರ್​ ಭೂಮಿಕಾ, ನಟಿ ರೇಖಾ ವೇದವ್ಯಾಸ್​, ಮಿಮಿಕ್ರಿ ಗೋಪಿ ಮತ್ತು ಟಿವಿ ನಿರೂಪಕ ಚಂದನ್​ ಶರ್ಮಾ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​…

    ಮಹಾರಾಷ್ಟ್ರದ ಮಾಜಿ ಸಿಎಂ ಮೊಮ್ಮಕ್ಕಳ ಜೊತೆಗಿನ ಸಾರಾ-ಜಾಹ್ನವಿ ಸಂಬಂಧ ಬಟಾಬಯಲು!

    ರಿಷಿ ಬಿಟ್ಟು ಯಾರನ್ನಾದ್ರೂ ಬೆಂಬಲಿಸಿ! ಬೋರಿಸ್​ ಜಾನ್ಸನ್​ಗೆ ಇನ್ಫಿ ಮೂರ್ತಿ ಅಳಿಯನ ಮೇಲೆ ಯಾಕಿಷ್ಟು ಕೋಪ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts