More

    ಸಿಂಹವನ್ನು ಬೆಕ್ಕಿನಂತೆ ಹೊತ್ತು ಸಾಗಿದ ಮಹಿಳೆ! ಎದೆ ಝಲ್​ ಎನಿಸುವ ವಿಡಿಯೋ ವೈರಲ್​

    ಕುವೈತ್​: ಕುವೈತ್​ ನಗರದ ಬೀದಿಯಲ್ಲಿ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಕಾಡಿನ ರಾಜ ಸಿಂಹವನ್ನು ಹೊತ್ತು ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರ ಎದೆ ಒಮ್ಮೆ ಝಲ್​ ಎನಿಸುವಂತಿದೆ.

    ಮಿಡಲ್​ ಈಸ್ಟ್​ ಮಾನಿಟರ್​ ಮಾಧ್ಯಮದ ಪ್ರಕಾರ ಸಾಕಿದ ಸಿಂಹವು ಬೋನ್​ನಿಂದ ತಪ್ಪಿಸಿಕೊಂಡು ವಸತಿ ಪ್ರದೇಶದಲ್ಲಿ ಅಡ್ಡಾಡುವ ಮೂಲಕ ಕುವೈತ್​ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿತು. ಈ ಬಗ್ಗೆ ಕುವೈತ್​ನ ಸಬಾಹಿಯಾ ಏರಿಯಾದ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

    ಇದಾದ ಬಳಿಕ ಅಧಿಕಾರಿಗಳ ನೆರವಿನಿಂದ ಮಾಲಕಿ ತನ್ನ ಮುದ್ದಿನ ಸಿಂಹವನ್ನು ಹೊತ್ತೊಯ್ದಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್​ ಕೂಡ ಆಗಿದೆ. ವಿಡಿಯೋದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ತನ್ನ ತೋಳುಗಳಲ್ಲಿ ಸಿಂಹವನ್ನು ಹೊತ್ತುಕೊಂಡು ಕುವೈತ್​ ನಗರದ ಬೀದಿಯಲ್ಲಿ ನಡೆದು ಹೋಗುತ್ತಿರುವ ಹಾಗೂ ಸಿಂಹ ಮಹಿಳೆಯಿಂದ ಬಿಡಿಸಿಕೊಳ್ಳಲು ಯತ್ನಿಸಿ, ಗರ್ಜಿಸುತ್ತಿರುವ ದೃಶ್ಯವಿದೆ.

    ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 4.5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಅನೇಕ ಮಂದಿ ಅಚ್ಚರಿ ವ್ಯಕ್ತಪಡಿಸಿ ಕಮೆಂಟ್​ ಮಾಡಿದ್ದಾರೆ. ಸಿಂಹವನ್ನು ಬೆಕ್ಕಿನ ರೀತಿ ಹೊತ್ತು ಸಾಗುತ್ತಿರುವುದು ನಿಜಕ್ಕೂ ಶಾಕ್​ ಆಗುವಂತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಮುಂದಿನ ಬಾರಿ ಈ ರೀತಿ ಮೃಗಾಯದಲ್ಲಿ ಮಾಡಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪರಿಸರ ಪೊಲೀಸ್, ಸಿಂಹವೂ ಮಹಿಳೆ ಮತ್ತು ಆಕೆಯ ತಂದೆಗೆ ಸೇರಿದ್ದಾಗಿದೆ. ಅದನ್ನು ಮಾಲೀಕರಿಗೆ ಹಿಡಿದುಕೊಡಲು ಅಧಿಕಾರಿಗಳು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಸಿಂಹ ಮತ್ತು ಹುಲಿಯಂತಹ ಕಾಡು ಮೃಗಗಳನ್ನು ಸಾಕುವುದು ಕುವೈತ್​ನಲ್ಲಿ ಅಕ್ರಮವಾದರೂ, ಆ ಅಭ್ಯಾಸ ಸಾಮಾನ್ಯವಾಗಿ ಮುಂದುವರಿದುಕೊಂಡು ಬಂದಿದೆ. ಸಿಂಹಗಳು, ಚಿರತೆಗಳು, ಹುಲಿಗಳು ಮತ್ತು ಇತರ ಪರಭಕ್ಷಕಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವ ಕುವೈತ್​ ಪ್ರವೃತ್ತಿಯು ವಿಶ್ವಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.

    2018 ರಲ್ಲಿ, ಕುವೈತ್‌ನ ಅಧಿಕಾರಿಗಳು ದೊಡ್ಡ ಸಿಂಹವೊಂದು ಬೀದಿಗಳಲ್ಲಿ ಅಲೆದಾಡುವ ದೃಶ್ಯಗಳನ್ನು ಹಂಚಿಕೊಂಡಿದ್ದರು. ಅದನ್ನು ಅರವಳಿಕೆಯ ಸಹಾಯದಿಂದ ಸೆರೆಹಿಡಿದು ಮೃಗಾಲಯಕ್ಕೆ ಒಪ್ಪಿಸಲಾಗಿತ್ತು. (ಏಜೆನ್ಸೀಸ್​)

    ಹಣದ ಬದಲು RTO ಅಧಿಕಾರಿಗಳು ಸ್ವೀಕರಿಸುತ್ತಿರೋ ಲಂಚದ ಮತ್ತೊಂದು ವಿಧಾನ ತಿಳಿದ್ರೆ ಶಾಕ್​ ಆಗ್ತೀರಾ!

    ದೂರು ಕೊಟ್ಟವನೇ ಅಪರಾಧಿ: ಪತ್ನಿ ಜತೆ ಸೇರಿ ರೈಲ್ವೆ ಟಿಕೆಟ್​ ಕ್ಲರ್ಕ್ ರೂಪಿಸಿದ್ದ ಸಂಚು ಕೇಳಿ ಪೊಲೀಸರೇ ಶಾಕ್​

    ವಿಶೇಷತೆಗಳಿಂದ ಕೂಡಿರುವ ಕತ್ರಿನಾ ಕೈಫ್ ಧರಿಸಿರೋ ಮಂಗಳಸೂತ್ರದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಕರೊನಾ ಭೀತಿಗೆ ಒಮಿಕ್ರಾನ್​ನಿಂದಲೇ ಅಂತಿಮ ಮೊಳೆ? ಸರಣಿ ಅಧ್ಯಯನದಿಂದ ಹೊರಬಂತು ಗುಡ್​ನ್ಯೂಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts