More

    ಹೈದರಾಬಾದ್​ನಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಡೆವಿಲ್​ ಫಿಶ್ ನೋಡಲು ಮುಗಿಬಿದ್ದ ಜನರು!

    ಹೈದರಾಬಾದ್​: ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೈದರಾಬಾದ್​ನ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ತುಂಬಿ ಹರಿಯುತ್ತಿರುವ ಮಳೆ ನೀರಿನಲ್ಲಿ ದೆವ್ವದ ಮೀನು (ಡೆವಿಲ್​ ಫಿಶ್)​ ಎಂದೇ ಪರಿಚಿತವಾಗಿರುವ ಸಕರ್​ಮೌತ್​ ಕ್ಯಾಟ್​ಫಿಶ್ ಪತ್ತೆಯಾಗಿದ್ದು, ಅದನ್ನು ನೋಡಲು ಸಾಕಷ್ಟು ಜನರು ಮುಗಿಬಿದ್ದಿದ್ದಾರೆ.

    ನಗರದ ರಾಮಂತಪುರ ಏರಿಯಾದ ನಿವಾಸಿಗಳು ಪ್ರವಾಹದ ನೀರಿನಲ್ಲಿ ಈ ಅಪರೂಪದ ಮೀನನ್ನು ಪತ್ತೆ ಹಚ್ಚಿದ್ದಾರೆ. ಭಾರಿ ಮಳೆಯಿಂದಾಗಿ ಹತ್ತಿರದ ನದಿ, ತುಂಬಿ ಹರಿಯುತ್ತಿರುವ ಪರಿಣಾಮ ಪ್ರವಾಹ ಸೃಷ್ಟಿಯಾಗಿದ್ದು, ಚರಂಡಿ ಮತ್ತು ಕಾಲುವೆಗಳಲ್ಲಿ ನೀರು ತುಂಬಿದೆ. ನೀರಿನಲ್ಲಿ ಮೀನು ಕೂಡ ಕೊಚ್ಚಿ ಬಂದಿದ್ದು, ಅದನ್ನು ನೋಡಿ ಸ್ಥಳೀಯರಲ್ಲಿ ಅಚ್ಚರಿ ಉಂಟಾಗಿದೆ.

    ಸ್ಥಳೀಯ ನಿವಾಸಿಗಳು ತಮ್ಮ ಕೈಯಲ್ಲಿ ಮೀನು ಹಿಡಿದುಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಡೆವಿಲ್​ ಫಿಶ್​ ಚೂಪಾದ ರೆಕ್ಕೆಗಳು ಮತ್ತು ಬೆನ್ನುಮೂಳೆಗಳನ್ನು ಹೊಂದಿದ್ದು, ನೋಡಲು ವಿಚಿತ್ರವಾಗಿರುವ ಮೀನನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.

    ದೆವ್ವದ ಮೀನು ಇತರ ಮೀನು ಪ್ರಭೇದಗಳನ್ನು ತಿನ್ನುವುದರಿಂದ ವಾಣಿಜ್ಯ ಮೀನುಗಾರಿಕೆ ಚಟುವಟಿಕೆಗಳಿಗೆ ಹಾನಿ ಮಾಡುತ್ತದೆ ಮತ್ತು ಮೀನುಗಾರರಿಗೆ ನಷ್ಟವನ್ನು ಉಂಟುಮಾಡುತ್ತದೆ. ಇದು ತೆಲಂಗಾಣ ರಾಜ್ಯಕ್ಕೆ ಪರಕೀಯವಾಗಿದ್ದರೂ ಇದು ರಾಜ್ಯದ ನದಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿವೆ. ನೋಡಲು ವಿಕಾರವಾಗಿರುವುದರಿಂದ ಇದನ್ನು ದೆವ್ವದ ಮೀನು ಎಂದು ಕರೆಯಲಾಗುತ್ತದೆ.

    ಇದೇ ಸಂದರ್ಭದಲ್ಲಿ ನಿರಂತರ ಮಳೆಯ ನಡುವೆ ಗೋದಾವರಿ ನದಿ ಪ್ರವಾಹದ ಎಚ್ಚರಿಕೆಯನ್ನು ಜನರಿಗೆ ನೀಡಲಾಗಿದೆ. (ಏಜೆನ್ಸೀಸ್​)

    ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜಕೀಯಕ್ಕೆ ಎಂಟ್ರಿ ಕೊಡಲು ಸ್ಯಾಂಡಲ್​ವುಡ್​ ನಟಿ ತಯಾರಿ!

    PHOTOS| ಬಿಕಿನಿ ಧರಿಸಿ ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ನಟಿ ಪ್ರಣೀತಾ

    ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts