More

    ಮೊಸಳೆ ಜಿಗಿಯುವುದನ್ನು ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

    ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲುಗಳು ಒಮ್ಮೆ ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್​ ಇರ್ವಿನ್​ ಮಾತ್ರ ಮೊಸಳೆ ಪದ ಕೇಳಿದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಆದರೆ, ಬಹುತೇಕರು ಅದನ್ನು ನೋಡಿ ಹೆದರುವವರೇ ಹೆಚ್ಚು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಲೇ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ.

    ಇನ್ನು ಮೊಸಳೆ ನೀರಿನಲ್ಲಿ ವೇಗವಾಗಿ ಈಜುವುದನ್ನು ಮತ್ತು ನೆಲದ ಮೇಲೆ ಓಡಾಡುವುದನ್ನು ನೋಡಿದ್ದೇವೆ. ಆದರೆ, ಮೊಸಳೆ ಮೇಲಕ್ಕೆ ಜಿಗಿಯುವುದನ್ನು ಎಂದಾದರೂ ನೋಡಿದ್ದೀರಾ? ಮೊಸಳೆಗಳು ಸಹ ಜಿಗಿಯುತ್ತವೆ ಎಂಬುದನ್ನು ಈ ವಿಡಿಯೋ ನಿರೂಪಿಸಿದೆ.

    ವಿಡಿಯೋದಲ್ಲಿ ಏನಿದೆ?
    ಹೊಳೆ ಅಥವಾ ನದಿಯೊಂದರಲ್ಲಿ ಡ್ರೋನ್ ಕ್ಯಾಮೆರಾ​ ಒಂದು ಹಾರುತ್ತಾ ಮೊಸಳೆ ಇರುವ ಕಡೆ ಬರುತ್ತದೆ. ಅದನ್ನು ನೋಡುವ ಮೊಸಳೆ ನೀರಿನಿಂದ ಮೇಲಕ್ಕೆ ಜಿಗಿದು ಡ್ರೋನ್ ಬೇಟೆಯಾಡಲು ಯತ್ನಿಸುತ್ತದೆ. ಆದರೆ, ಅದು ಸಾಧ್ಯವಾಗದೇ ಮೊಸಳೆ ಮತ್ತೆ ನೀರಿಗೆ ಬೀಳುತ್ತದೆ.

    ಸಂತೋಷ್​ ಸಾಗರ್​ ಎಂಬುವರು ತಮ್ಮ ಟ್ವಿಟರ್​ನಲ್ಲಿ ಮೊಸಳೆ ಜಿಗಿಯುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ವನ್ಯ ಜೀವಿ ಛಾಯಾಚಿತ್ರಗಾರರಿಂದ ವನ್ಯಜೀವಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಯನ್ನು ನಿಲ್ಲಿಸಬೇಕೇ? ಎಂದು ಪ್ರಶ್ನೆ ಮಾಡಿದ್ದು, ಭಾರತೀಯ ಅರಣ್ಯಾಧಿಕಾರಿ (ಐಎಫ್​ಎಸ್​) ಸುಶಾಂತ್​ ನಂದ ಅವರ ಟ್ವಿಟ್ಟರ್​ಗೆ ಟ್ಯಾಗ್​ ಮಾಡಿದ್ದಾರೆ.

    ವಿಡಿಯೋ ನೋಡಿದ ನೆಟ್ಟಿಗರು ಡ್ರೋನ್​ ಹಾರಾಡಲು ಬಿಟ್ಟವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಾಣಿಗಳನ್ನು ಅವರ ಪಾಡಿಗೆ ಬದಕಲು ಬಿಡಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ನಾನು ಊಟ ಮಾಡ್ಬೇಕು ಹೊರ ಹೋಗಿ: ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಲೇಡಿ ಕಂಡಕ್ಟರ್​

    ಪಿಯು ವಿದ್ಯಾರ್ಥಿಯ ಜೀವ ಕಸಿದ ಐಫೋನ್​: ಮಾತಿಗೆ ತಪ್ಪಿದ್ದಕ್ಕೆ ಸ್ನೇಹಿತನಿಂದಲೇ ಗುಂಡೇಟು

    ರಸ್ತೆಯಲ್ಲಿ ಸಿಕ್ಕ 45 ಸಾವಿರ ರೂ. ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ತುಮಕೂರು ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts