More

    ಪ್ರೀತಿಸಿ ಮದ್ವೆಯಾಗುವ ಮುನ್ನ ಯೋಚಿಸಿ… ಸೆಲ್ಫಿ ವಿಡಿಯೋದಲ್ಲಿ ಅತ್ತೆ ಮನೆಯವರ ಕೃತ್ಯ ನೆನೆದು ಯುವತಿ ಕಣ್ಣೀರು

    ವಾರಂಗಲ್​: ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಸೆಲ್ಫಿ ವಿಡಿಯೋದಲ್ಲಿ ತನ್ನ ಅಂತರಾಳದ ನೋವನ್ನು ರೆಕಾರ್ಡ್​ ಮಾಡಿಟ್ಟು, ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದ ವಾರಂಗಲ್​ ಖಾನಾಪುರ್​ನಲ್ಲಿ ಮಂಗಳವಾರ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ನೂರ್​ ಜಹಾನ್​ ಎಂದು ಗುರುತಿಸಲಾಗಿದೆ. ಅತ್ತೆ ಮನೆಯ ವರದಕ್ಷಿಣೆ ಕಿರುಕುಳವನ್ನು ಸಹಿಸಲಾಗದೇ ನೂರ್​ ಜಹಾನ್​ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದರು.

    ಮೂಲಗಳ ಪ್ರಕಾರ ನೂರ್​ ಜಹಾನ್​ ಖಾನಾಪುರ್​ ಗ್ರಾಮದವಳು. ಅದೇ ಗ್ರಾಮದ ಶರತ್​ ಎಂಬಾತನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಕುಟುಂಬಸ್ಥರ ವಿರೋಧದ ನಡುವೆಯೂ ಹಿಂದು ಸಂಪ್ರದಾಯದಂತೆಯೇ ಜಹಾನ್​, ಶರತ್​ನನ್ನು ವರಿಸಿದ್ದಳು. ಇಬ್ಬರು ಹೈದರಾಬಾದ್​ನಲ್ಲಿ ನೆಲೆಸಿದ್ದರು.

    ಮದುವೆಯಾದ 5 ತಿಂಗಳ ನಂತರ ಜಹಾನ್​ ಅವರ ಅತ್ತೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ವರದಕ್ಷಿಣೆಗೆ ತರುವಂತೆ ಪೀಡಿಸಿದ್ದಾಳೆ. ಕಟ್ಟಿಕೊಂಡ ಗಂಡನು ಕೂಡ ಪ್ರೀತಿಯನ್ನು ಗಾಳಿ ತೂರಿ ವರದಕ್ಷಿಣೆಗಾಗಿ ಪಾಲಕರ ಜೊತೆಗೂಡಿ ತನ್ನನ್ನೇ ನಂಬಿ ಬಂದ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಕಿರುಕುಳ ಸಹಿಸದ ಜಾಹನ್​, ವಾರಂಗಲ್​ನ ಸುಬೇದರಿಯಲ್ಲಿರುವ ಮಹಿಳಾ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಆದರೆ, ಪೊಲೀಸರು ಕೂಡ ಜಾಹನ್​ ದೂರನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇದ್ದುದ್ದರಿಂದ ಮನನೊಂದು ಜಹಾನ್​ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡಿದ್ದ ಜಹಾನ್​ಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಇದೀಗ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ. ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಆ ನಿರ್ಧಾರದ ಹಿಂದಿನ ಕಾರಣ ಏನು ಎಂಬುದನ್ನು ಜಹಾನ್ ಸೆಲ್ಫಿ ವಿಡಿಯೋದಲ್ಲಿ​ ಹಂಚಿಕೊಂಡಿದ್ದರು. ತನ್ನ ಸಾವಿಗೆ ತನ್ನ ಪತಿ ಮತ್ತು ಅತ್ತೆಯನ್ನು ದೂಷಿಸಿದ್ದರು.

    ನನ್ನ ಸಾವಿಗೆ ಕಾರಣ ನನ್ನ ಪತಿ, ನನ್ನ ಸೋದರ ಮಾವ ಹಾಗೂ ನನ್ನ ಅತ್ತೆ. ನನ್ನದು ಪ್ರೇಮವಿವಾಹ. ನಾನು ಕೆಳಜಾತಿಯಿಂದ ಬಂದಿದ್ದೇನೆ ಎಂದು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಹಾಯ ಕೋರಿ ಹಲವು ಪೊಲೀಸ್ ಠಾಣೆಗಳಿಗೆ ಹೋದರೂ ಪ್ರಯೋಜನವಾಗಲಿಲ್ಲ. ನಾನು ಮಹಿಳಾ ಪೊಲೀಸ್ ಠಾಣೆಗೆ ಹೋದೆ, ನನ್ನ ಅತ್ತಿಗೆ ಲಂಚ ಕೊಟ್ಟಿದ್ದರಿಂದ ಸಿಐ ನನ್ನ ದೂರಿಗೆ ಕಿವಿಗೊಟ್ಟರು. ಪೊಲೀಸರಿಂದ ನನಗೆ ನ್ಯಾಯ ಸಿಗಲಿಲ್ಲ, ಹಾಗಾಗಿ ನಾನು ಸಾಯುತ್ತಿದ್ದೇನೆ. ಬೇರೆ ಹುಡುಗಿಯರು ಇದೇ ರೀತಿ ಮಾಡಿಕೊಳ್ಳಬೇಡಿ. ಪ್ರೀತಿಸುವ ಮುನ್ನ ಯೋಚಿಸಿ ಎಂದು ನೂರ್ ಜಹಾನ್ ಅವರು ಸೆಲ್ಫಿ ವಿಡಿಯೋದಲ್ಲಿ ಕಣ್ಣಿರಿಟ್ಟಿದ್ದಾರೆ. (ಏಜೆನ್ಸೀಸ್​)

    ಸರ್ಕಾರಿ ಪ್ರಾಯೋಜಿತ ಬೈಕ್​ ಸವಾರಿ ವೇಳೆ ದುರಂತ ಸಾವಿಗೀಡಾದ ಭಾರತದ ಖ್ಯಾತ ಯೂಟ್ಯೂಬರ್​!

    ಬ್ಯಾನ್​ ಆದೇಶ ಬೆನ್ನಲ್ಲೇ ಪಿಎಫ್​ಐಗೆ ಮತ್ತೊಂದು ಶಾಕ್: 2 ವಾರಗಳು ಗಡುವು ಕೊಟ್ಟ ಕೇರಳ ಹೈಕೋರ್ಟ್​

    VIDEO: ಇರಾನ್​ ಬಳಿಕ ಟರ್ಕಿಯಲ್ಲೂ ಹಿಜಾಬ್​ಗೆ ಪ್ರತಿರೋಧ- ವೇದಿಕೆಯಲ್ಲಿ ಗಾಯಕಿ ಮಾಡಿದ್ದೇನು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts