More

    ಮತಯಂತ್ರ ಹ್ಯಾಕ್​ ಎಚ್ಚರಿಕೆ: ಮುಂದಿನ ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ವಿಳಂಬ

    ಲಂಡನ್​: ಮುಂದಿನ ಯುನೈಟೆಡ್​ ಕಿಂಗ್​ಡಮ್​ ಪ್ರಧಾನಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯು ವಿಳಂಬವಾಗಲಿದೆ ಎಂಬ ಮಾಹಿತಿ ಬಂದಿದೆ. ಸೈಬರ್​ ದಾಳಿಕೋರರು ಮತಯಂತ್ರವನ್ನು ಹ್ಯಾಕ್​ ಮಾಡಿ ಸದಸ್ಯರ ಮತವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಜಿಸಿಎಚ್​ಕ್ಯೂ ಬೇಹುಗಾರಿಕಾ ಸಂಸ್ಥೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಲಿದೆ.

    ಹ್ಯಾಕ್​ ಮಾಡುವ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ ಮತದಾನ ಪ್ರಕ್ರಿಯೆ ಮತ್ತು ಅದರ ದೋಷಗಳ ಬಗ್ಗೆ ಸಾಕಷ್ಟು ಸಲಹೆಗಳು ಬಂದಿವೆ. ಈ ಆತಂಕದ ಪರಿಣಾಮ ಸ್ಪರ್ಧೆಯ ನಂತರದಲ್ಲಿ ಸದಸ್ಯರು ತಮ್ಮ ಮತವನ್ನು ಮುಂದಿನ ನಾಯಕನಿಗೆ ಬದಲಾಯಿಲು ಇರುವ ಅವಕಾಶದ ಯೋಜನೆಯನ್ನು ಕೈಬಿಡುವಂತೆ ಕನ್ಸರ್ವೇಟಿವ್​ ಪಕ್ಷ ಒತ್ತಾಯಿಸಿದೆ.

    ಪಕ್ಷದ ಸುಮಾರು 160,000 ಸದಸ್ಯರಿಗೆ ಅಂಚೆ ಮತಪತ್ರಗಳನ್ನು ಇನ್ನೂ ನೀಡಿಲ್ಲ. ಇದರಿಂದ ಅವರು ಆಗಸ್ಟ್​ನಲ್ಲಿ ತಡವಾಗಿ ಆಗಮಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಆದರೆ, ಮತಪತ್ರಗಳನ್ನು ಸೋಮವಾರದಿಂದ ಎಲ್ಲರಿಗೂ ಕಳುಹಿಸಲಾಗುವುದು ಎಂದು ಪಕ್ಷ ಹೇಳಿದೆ. ಹ್ಯಾಕಿಂಗ್​ ಬೆದರಿಕೆ ಹಿನ್ನೆಲೆಯಲ್ಲಿ ಮತಯಂತ್ರದ ಬದಲು ಮತಪತ್ರದ ಮೊರೆಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಬೋರಿಸ್​​ ಜಾನ್ಸನ್​​ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಅಂತಿಮ ಸುತ್ತಿನ ಚುನಾವಣೆ ಬಾಕಿ ಇದೆ. ಕಣದಲ್ಲಿ ಮಾಜಿ ಹಣಕಾಸು ಸಚಿವ ಹಾಗೂ ಇನ್ಫೋಸಿಸ್​ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್​ ಮತ್ತು ವಿದೇಶಾಂಗ ಕಾರ್ಯದರ್ಶಿ ಲೀಸ್​ ಟ್ರಾಸ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    ಕನ್ಸರ್ವೇಟಿವ್ ಪಕ್ಷದ ಸದಸ್ಯರ ಅಭಿಪ್ರಾಯ ಸಂಗ್ರಹಣೆಯಲ್ಲಿ ಟ್ರಾಸ್ ಮುಂಚೂಣಿಯಲ್ಲಿದ್ದು, ವಾರಗಳ ಮತದಾನದ ನಂತರ ಸೆಪ್ಟೆಂಬರ್ 5 ರಂದು ಯಾರು ಮುಂದಿನ ಪ್ರಧಾನಿಯಾಗಬೇಕೆಂದು ನಿರ್ಧರಿಸುತ್ತಾರೆ. (ಏಜೆನ್ಸೀಸ್​)

    ಅಮೆರಿಕ ಸ್ಪೀಕರ್ ಭೇಟಿಗೆ ಕೆರಳಿದ ಚೀನಾ: ತೈವಾನ್​ ವಾಯುರಕ್ಷಣಾ ವಲಯಕ್ಕೆ 21 ಯುದ್ಧ ವಿಮಾನ ಎಂಟ್ರಿ

    ಭಾರೀ ಮಳೆಗೆ ಧರೆಗುರುಳಿ ಕಾರಿನ ಮೇಲೆ ಬಿದ್ದ ಮರ: ಕರೆ ಮಾಡಿ ತಿಳಿಸಿದ್ರು ಕ್ಯಾರೆ ಎನ್ನದ ಬಿಬಿಎಂಪಿ ಸಿಬ್ಬಂದಿ

    ಸಮಾವೇಶ.. ಹಲವು ಸಂದೇಶ: ಸಿದ್ದರಾಮಯ್ಯ ಕೇಂದ್ರಬಿಂದು; ಬಿಜೆಪಿ, ಜೆಡಿಎಸ್​ಗೂ ತಳಮಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts