More

    ಯುಕೆ​ ನೂತನ ಪ್ರಧಾನಿಯಾಗಿ ಲಿಜ್​ ಟ್ರಸ್​; ತೀವ್ರ ಸ್ಪರ್ಧೆಯೊಡ್ಡಿದ್ದ ರಿಷಿ ಸುನಕ್ ಪರಾಭವ

    ನವದೆಹಲಿ: ಯುನೈಟೆಡ್​ ಕಿಂಗ್​ಡಮ್​ (ಯುಕೆ)​ ಪ್ರಧಾನಿ ಸ್ಥಾನಕ್ಕೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹಣಾಹಣಿಗೆ ಇದೀಗ ತೆರೆ ಬಿದ್ದಿದ್ದು, ನೂತನ ಪ್ರಧಾನಿಯಾಗಿ ಲಿಜ್​ ಟ್ರಸ್​ ಆಯ್ಕೆ ಆಗಿದ್ದಾರೆ. ಯುಕೆ ವಿದೇಶ ಸಚಿವೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್​ ಟ್ರಸ್​​ ನೂತನ ಪ್ರಧಾನಿ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಬೋರಿಸ್ ಜಾನ್ಸನ್​ ಅವರ ಉತ್ತರಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

    ಇನ್​ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಎನ್​.ಆರ್​. ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿಯ ಪತಿ, ಬ್ರಿಟನ್​ನ ಸಂಸದ ರಿಷಿ ಸುನಕ್​ ಮತ್ತು ಲಿಜ್​ ಟ್ರಸ್​​ ಮಧ್ಯೆ ತೀವ್ರ ಪೈಪೋಟಿ ಇದ್ದು, ಕಳೆದ ಕೆಲವು ವಾರಗಳಿಂದ ಹಣಾಹಣಿ ನಡೆಯುತ್ತಿತ್ತು. ಪ್ರಧಾನಿಯಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಅದು ಸಫಲವಾಗದ್ದರಿಂದ ರಿಷಿ ಪರಾಭವಗೊಂಡಿದ್ದಾರೆ.

    ಈ ಕುರಿತು ಅಧಿಕೃತ ಘೋಷಣೆ ಇನ್ನೇನು ಆಗಲಿದ್ದು, 47 ವರ್ಷದ ಲಿಜ್​ ಟ್ರಸ್​ ಬ್ರಿಟನ್​ನ ಮೂರನೇ ಮಹಿಳಾ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.

    62 ವರ್ಷಗಳ ಹಿಂದೆ ಕಳವಾಗಿದ್ದ ನಟರಾಜ ಮೂರ್ತಿ ನ್ಯೂಯಾರ್ಕ್​ನಲ್ಲಿ ಪತ್ತೆ!

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts