More

    ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಮುಂಬೈ: ತಾರಾ ದಂಪತಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮುಂಬೈನ ಅಲಿಬಾಗ್ ಏರಿಯಾದಲ್ಲಿ 8 ಎಕರೆಯ ಫಾರ್ಮ್​ ಹೌಸ್​ ಅನ್ನು ಕೊಂಡುಕೊಂಡಿದ್ದಾರೆ.

    ಅಲಿಬಾಗ್​ ಬಳಿಯಿರುವ ಜಿರಾದ್​ ಗ್ರಾಮದಲ್ಲಿ ಈ ಎಂಟು ಎಕರೆ ಫಾರ್ಮ್​ ಹೌಸ್​ ಕಂಡುಬರುತ್ತದೆ. ವಿರುಷ್ಕಾ ದಂಪತಿ ಬರೋಬ್ಬರಿ 19.24 ಕೋಟಿ ರೂಪಾಯಿ ಕೊಟ್ಟು ಫಾರ್ಮ್​ ಹೌಸ್​ ಖರೀದಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಸರ್ಕಾರದ ಖಜಾನೆ ದಂಪತಿ ಈಗಾಗಲೇ 1.15 ಕೋಟಿ ರೂಪಾಯಿ ಡೆಪಾಸಿಟ್​ ಮಾಡಿದ್ದು, ವಿರಾಟ್​ ಸಹೋದರ ವಿಕಾಸ್​ ಕೊಹ್ಲಿ, ಗಣೇಶ ಚತುರ್ಥಿಗು ಮುನ್ನವೇ ಹಣವನ್ನು ವರ್ಗಾವಣೆ ಮಾಡಿದ್ದಾರೆ.

    ಸದ್ಯ ಕೊಹ್ಲಿ ದುಬೈನಲ್ಲಿ ಏಷ್ಯಾ ಕಪ್​ನಲ್ಲಿ ಭಾಗವಹಿಸಿದ್ದಾರೆ. ಹಣ ವರ್ಗಾವಣೆಯನ್ನು ಪ್ರಖ್ಯಾತ ರಿಯಲ್​ ಎಸ್ಟೇಟ್​ ಕಂಪನಿ ಸಮಿರಾ ಹ್ಯಾಬಿಟಟ್ಸ್​ ಮೂಲಕ ಮಾಡಿರುವುದಾಗಿ ತಿಳಿದುಬಂದಿದೆ. ಆರು ತಿಂಗಳ ಹಿಂದೆಯೇ ವಿರುಷ್ಕಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಕ್ರಿಕೆಟ್​ನಲ್ಲಿ ಬಿಜಿಯಾಗಿದ್ದರಿಂದ ಸ್ವತಃ ಅವರು ಬಂದು ವ್ಯವಹರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಹೋದರ ವಿಕಾಸ್​ ಕೊಹ್ಲಿ ಎಲ್ಲ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.

    ಉದ್ಯಮಿಗಳ ಜೊತೆಗೆ, ಚಲನಚಿತ್ರ ನಟರು ಮತ್ತು ಕ್ರಿಕೆಟಿಗರು ಅಲಿಬಾಗ್‌ನ ರಮಣೀಯ ಪರಿಸರದಲ್ಲಿ ಭೂಮಿಯನ್ನು ಖರೀದಿಸುವುದು ಸಾಮಾನ್ಯವಾಗಿದ್ದು, ಅಲ್ಲಿ ಅವರು ಹಳ್ಳಿಗಾಡಿನ ಮನೆಗಳನ್ನು ನಿರ್ಮಿಸುತ್ತಿದ್ದಾರೆ. (ಏಜೆನ್ಸೀಸ್​)

    ಯಾರಾಗಲಿದ್ದಾರೆ ಬಿಗ್​ಬಾಸ್​ ಒಟಿಟಿ ಸೀಸನ್​ ವಿನ್ನರ್? ನೆಟ್ಟಿಗರ ಈ ಊಹೆ ನಿಜವಾಗುತ್ತಾ?

    ಅಂಬೇಡ್ಕರ್ ಭಾವಚಿತ್ರದ ಮುಂದೆ ಮದ್ವೆಯಾದ ಪ್ರೇಮಿಗಳು

    ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts