More

    ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್​ಗಾಗಿ ಪರದಾಡುವುದನ್ನು ತಪ್ಪಿಸುತ್ತಿದೆ UTS ಮೊಬೈಲ್ ಆ್ಯಪ್​!

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕ ಸ್ನೇಹಿಯಾಗುತ್ತಿದೆ. ಪ್ರಯಾಣಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ರೈಲ್ವೆ ಇಲಾಖೆಗಳ ಚಿತ್ರಣ ಬದಲಾಯಿಸುತ್ತಿದೆ ಭಾರತೀಯ ಇಲಾಖೆ. ಕುಡಿಯುವ ನೀರು, ಆಹಾರ, ಟಿಕೆಟ್ ಬುಕ್ಕಿಂಗ್ ಹೀಗೆ ಪ್ರತಿಯೊಂದರಲ್ಲೂ ಪ್ರಯಾಣಿಕರ ಕ್ಷೇಮ, ಕುಶಲತೆ, ಅನುಕೂಲತೆಯನ್ನು ಬಯಸುತ್ತಿದೆ.

    ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಯುಟಿಎಸ್​ (Unreserved Ticketing System ಕಾಯ್ದಿರಿಸದ ಟಿಕೆಟ್ ವ್ಯವಸ್ಥೆ) ಆಪ್ ಬಿಡುಗಡೆಗೊಳಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಗಾಗಿ ಪರದಾಡಬೇಕಿಲ್ಲ. ನೈಋತ್ಯ ರೈಲ್ವೆ ಇಲಾಖೆ ಸ್ಮಾರ್ಟ್ ಫೋನ್ ಬಳಕೆದಾರರರಿಗೆ ಈ ಸೇವೆ ಲಭ್ಯವಾಗುವಂತೆ ಮಾಡಿದೆ. ಈ ಮೂಲಕ ಪ್ರಯಾಣಿಕರು ಫ್ಲ್ಯಾಟ್ ಫಾರ್ಮ್ ಟಿಕೆಟ್ ಅನ್ನು ಸಹ ಫೋನಿನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಯುಟಿಎಸ್ ಟಿಕೆಟ್ ಗಳು 375 ಸ್ಥಳಗಳಲ್ಲಿ ಹರಡಿರುವ ರೈಲ್ವೇ ಕೌಂಟರ್‌ಗಳಲ್ಲಿ ಮತ್ತು ಸೆಂಟ್ರಲ್ ರೈಲ್ವೇಯ 5 ವಿಭಾಗಗಳಾದ ಮುಂಬೈ, ಪುಣೆ, ಶೋಲಾಪುರ, ಭೂಸಾವಲ್ ಮತ್ತು ನಾಗ್ಪುರದಲ್ಲಿ 862 ಟರ್ಮಿನಲ್‌ಗಳಲ್ಲಿ ಲಭ್ಯವಿದೆ.

    ಯುಟಿಎಸ್ ಟಿಕೆಟ್​ಗಳ ವಿತರಣೆ ಹೇಗೆ?
    * ಪ್ರಯಾಣಿಕರು 200 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ಪ್ರಯಾಣಕ್ಕಾಗಿ ಮೂರು ದಿನಗಳ ಮುಂಚಿತವಾಗಿ (ಪ್ರಯಾಣದ ದಿನವನ್ನು ಹೊರತುಪಡಿಸಿ) ಕಾಯ್ದಿರಿಸದ ಟಿಕೆಟ್ ಖರೀದಿಸಬಹುದು.
    * ಪ್ರಯಾಣಿಕರು ಅದೇ ದಿನದಲ್ಲಿ ಯಾವುದೇ ದೂರದ ಪ್ರಯಾಣವನ್ನು ಒಳಗೊಂಡಿರುವ ಕಾಯ್ದಿರಿಸದ ಟಿಕೆಟ್ ಗಳನ್ನು ಖರೀದಿಸಬಹುದು.
    * ಪ್ರಯಾಣಿಕರು ಈಗ ಅರ್ಧ ವಾರ್ಷಿಕ (HST) ಮತ್ತು ವಾರ್ಷಿಕ (YST) ಸೀಸನ್ ಟಿಕೆಟ್‌ಗಳನ್ನು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಖರೀದಿಸಬಹುದು.

    ಯುಟಿಎಸ್ ಮೊಬೈಲ್ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡುವುದು ಹೇಗೆ?
    ಮೊಬೈಲ್ ಅಪ್ಲಿಕೇಶನ್ ಅನ್ನು OEMs ಅಪ್ಲಿಕೇಶನ್ ಸ್ಟೋರ್‌ನಲ್ಲಿ ಅಂದರೆ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ವಿಂಡೋಸ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಪ್ರಯಾಣಿಕರು ಸೂಕ್ತವಾದ ಅಪ್ಲಿಕೇಶನ್ ಸ್ಟೋರ್‌ನಿಂದ ಮೊಬೈಲ್ ಟಿಕೆಟಿಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಅಪ್ಲಿಕೇಶನ್ ಡೌನ್‌ಲೋಡಿಂಗ್ ಉಚಿತ.

    ಯುಟಿಎಸ್ ಯಾವ ಸೇವೆಯನ್ನು ನೀಡುತ್ತದೆ?
    * ಸಬ್ ಅರ್ಬನ್ ಟಿಕೆಟ್ ಬುಕಿಂಗ್
    * ಸಬ್ ಅರ್ಬನ್ ಟಿಕೆಟ್ ರದ್ದತಿ
    * ಪ್ಲಾಟ್‌ಫಾರ್ಮ್ ಟಿಕೆಟ್ ಬುಕ್ಕಿಂಗ್
    * ಆರ್-ವ್ಯಾಲೆಟ್ ಬ್ಯಾಲೆನ್ಸ್ ಪರಿಶೀಲನೆ
    * ಬಳಕೆದಾರರ ಪ್ರೊಫೈಲ್ ನಿರ್ವಹಣೆ
    * ಬುಕಿಂಗ್ ಇತಿಹಾಸ

    ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್​ಗಾಗಿ ಪರದಾಡುವುದನ್ನು ತಪ್ಪಿಸುತ್ತಿದೆ UTS ಮೊಬೈಲ್ ಆ್ಯಪ್​!

    ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ, ಟಿಕ್​ಟಾಕ್​ ಸ್ಟಾರ್​ ಸೊನಾಲಿ ಪೋಗಟ್​ ಹೃದಯಾಘಾತದಿಂದ ನಿಧನ

    ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

    ಪ್ರೇಯಸಿ ಹೇಳಿದ ಆ ಒಂದು ಮಾತಿಗೆ 139 ಕೆಜಿ ದೇಹದ ತೂಕವನ್ನು 69ಕ್ಕೆ ಇಳಿಸಿದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts