More

    ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿದ ರಾಮ್​ಚರಣ್​ ಪತ್ನಿ ಉಪಾಸನ: ಟಾಲಿವುಡ್​ನಲ್ಲೇ ಇದು ಮೊದಲು!

    ಹೈದರಬಾದ್​: ವಿದೇಶಗಳಿಗೆ ಪ್ರಯಾಣಿಸಬೇಕಾದರೆ ವೀಸಾ ಖಂಡಿತವಾಗಿ ಬೇಕೇ ಬೇಕು. ಕೆಲವೊಂದು ದೇಶಗಳಿಗೆ ವೀಸಾ ಸುಲಭವಾಗಿ ಸಿಕ್ಕರೆ, ಇನ್ನು ಕೆಲವು ದೇಶಗಳ ವೀಸಾ ಪಡೆದುಕೊಳ್ಳುವುದು ತುಂಬಾನೇ ಕಷ್ಟ. ಭಾರತೀಯರು ಹೆಚ್ಚಾಗಿ ಭೇಟಿ ನೀಡುವ ದೇಶಗಳಲ್ಲಿ ದುಬೈ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ನಿಯಮಿತವಾಗಿ ದುಬೈಗೆ ಭೇಟಿ ನೀಡುವ ಸೆಲೆಬ್ರಿಟಿ ಅಥವಾ ದುಬೈನಲ್ಲಿ ಬಂಡವಾಳ ಹೂಡುವ ಮಂದಿಗೆ ಅಲ್ಲಿನ ಸರ್ಕಾರ ವಿಶೇಷ ವೀಸಾವನ್ನು ನೀಡಿ ಗೌರವಿಸುತ್ತದೆ.

    ಈ ವಿಶೇಷ ವೀಸಾವನ್ನು ಕೆಲವೇ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ವಿಶೇಷ ವೀಸಾವನ್ನು “ಗೋಲ್ಡನ್​ ವೀಸಾ” ಎಂದು ಕರೆಯಲಾಗುತ್ತದೆ. ನಿಮ್ಮ ಬಳಿ ಗೋಲ್ಡನ್​ ವೀಸಾ ಇದ್ದರೆ, ಯಾವುದೇ ವೀಸಾ ಪ್ರಕ್ರಿಯೆಯಿಲ್ಲದೆ ದುಬೈಗೆ ಎಷ್ಟು ಬಾರಿ ಬೇಕಾದರೂ ಹೋಗಿ ಬರಬಹುದು. ಭಾರತದಲ್ಲೂ ಕೆಲವೇ ಮಂದಿಗೆ ಈ ವೀಸಾವನ್ನು ನೀಡಲಾಗಿದೆ. ಬಾಲಿವುಡ್​, ಕಾಲಿವುಡ್​ ಮತ್ತು ಮಲಯಾಳಂ ಸಿನಿ ಸೆಲೆಬ್ರಿಟಿಗಳಿಗೆ ಈ ಗೋಲ್ಡನ್​ ವೀಸಾ ಲಭಿಸಿದೆ. ಇತ್ತೀಚೆಗಷ್ಟೇ ಮಲಯಾಂಳ ಮೋಹನ್​ ಲಾಲ್​, ಮುಮ್ಮಟ್ಟಿ ಹಾಗೂ ದುಲ್ಕರ್​ ಸಲ್ಮಾನ್​ ಕೂಡ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.

    ಇನ್ನು ಟಾಲಿವುಡ್​ ಅಥವಾ ತೆಲುಗು ಚಿತ್ರರಂಗದಲ್ಲಿ ಇದುವರೆಗೂ ಗೋಲ್ಡನ್​ ವೀಸಾವನ್ನು ಯಾರಿಗೂ ನೀಡಿರಲಿಲ್ಲ. ಆದರೆ, ಈಗ ಸ್ಟಾರ್​ ನಟ-ನಟಿಯರನ್ನೇ ಹಿಂದಿಕ್ಕಿ ಮೆಗಾಸ್ಟಾರ್​ ಚಿರಂಜೀವಿ ಸೊಸೆ ಹಾಗೂ ನಟ ರಾಮ್​ಚರಣ್​ ಪತ್ನಿ ಉಪಾಸನ ಅವರು ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಅಪೋಲೋದ ಉಪಾಧ್ಯಕ್ಷೆಯಾಗಿ ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ)ನ ಗೋಲ್ಡನ್​ ವೀಸಾವನ್ನು ಉಪಾಸನ ಸ್ವೀಕರಿಸಿದ್ದಾರೆ. ಈ ಮೂಲಕ ಟಾಲಿವುಡ್​ನಲ್ಲಿ ಗೋಲ್ಡನ್​ ವೀಸಾ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

    ಈ ವಿಚಾರವನ್ನು ಸ್ವತಃ ಉಪಾಸನ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಗೋಲ್ಡನ್​ ವೀಸಾ ಫೋಟೋ ಪೋಸ್ಟ್​ ಮಾಡಿರುವ ಉಪಾಸನ, ಕ್ರಿಸ್​ಮಸ್​ ವೇಳೆ ಅತ್ಯದ್ಭುತ ಉಡುಗೊರೆಯನ್ನು ಸ್ವೀಕರಿಸಿದೆ. ಯುಎಇ ಗೋಲ್ಡನ್​ ವೀಸಾ ಪಡೆದು ತುಂಬಾ ಖುಷಿಯಾಗಿದ್ದೇನೆ. ನಾನೀನ ಜಾಗತಿಕ ನಾಗರಿಕಳು. ಇಡೀ ವಿಶ್ವವೇ ಒಂದು ಕುಟುಂಬ ಎಂದು ಬರೆದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    VIDEO| ಹೆಬ್ಬೆರಳಿನ ಗುರುತಿನಂತಿರುವ ದ್ವೀಪ: ಈ ಸುಂದರ ತಾಣದ ಬಗ್ಗೆ ತಿಳಿದರೆ ಅಚ್ಚರಿ ಖಂಡಿತ!

    ಮಲ್ಲ 2 ಮಾಡೋಣ್ವಾ?; ರಾಮು ಅನ್ನೋದೇ ಒಂದು ಬ್ರ್ಯಾಂಡ್ ಎಂದ ರವಿಚಂದ್ರನ್​

    ಮುತ್ತಿನ ಹಾರ ಹೆಣೆದಿದ್ದೇ ರೋಚಕ!; ಇಂದು ವಿಷ್ಣುವರ್ಧನ್ 12ನೇ ಪುಣ್ಯಸ್ಮರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts