More

    ನಕಲಿ ದಾಖಲೆ ಕೊಟ್ಟು ಶಿಕ್ಷಕರಾಗಿ ನೇಮಕಗೊಂಡಿದ್ದ 2,494 ಮಂದಿಗೆ ಗೇಟ್​ ಪಾಸ್ ಕೊಟ್ಟ ಸರ್ಕಾರ!

    ಲಖನೌ: ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ 2,494 ಶಿಕ್ಷಕರು ನಕಲಿ ದಾಖಲೆಗಳನ್ನು ನೀಡಿ ನೇಮಕವಾಗಿರುವ ಸಂಗತಿ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯ ಪಡೆ (ಎಸ್​ಟಿಎಫ್​) ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ.

    ಈ ಬಗ್ಗೆ ಎಸ್​ಟಿಎಫ್​ ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಇದು ಒಂದು ಸಣ್ಣ ಭಾಗವಷ್ಟೇ ಇಡೀ ರಾಜ್ಯಾದ್ಯಂತ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ 10 ಸಾವಿರಕ್ಕೂ ಹೆಚ್ಚು ನಕಲಿ ಶಿಕ್ಷಕರು ಸಿಗುತ್ತಾರೆ ಎಂದರು.

    ಶಿಕ್ಷಣ ಇಲಾಖೆಯ ನೇಮಕಾತಿ ಹಗರಣ ಭಾರೀ ಸುದ್ದಿಯಾದ ಬೆನ್ನಲ್ಲೇ 2020ರಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್​ಟಿಎಫ್​ ತಂಡವನ್ನು ರಚಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡತ್ತು. ಅಂದಿನಿಂದ ತನಿಖೆ ಕೈಗೆತ್ತಿಕೊಂಡ ಎಸ್​ಟಿಎಫ್​, ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿದೆ ಮತ್ತು ಎಫ್‌ಐಆರ್ ನೋಂದಣಿ, ಸೇವೆಯಿಂದ ವಜಾಗೊಳಿಸುವುದು, ವೇತನದ ಹಣ ವಸೂಲಿ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ, ತನಿಖಾ ವೇಳೆ 2,461 ನಕಲಿ ಶಿಕ್ಷಕರನ್ನು ವಜಾಗೊಳಿಸಲಾಗಿದೆ.

    ನಮ್ಮ ಮಾನವ ಸಂಪನ್ಮೂಲ ಪೋರ್ಟಲ್‌ನಲ್ಲಿ ಡೇಟಾಬೇಸ್‌ಗಳನ್ನು ರಚಿಸಿದ್ದೇವೆ. 10 ರಿಂದ 12 ಹಾಗೂ ಪದವಿ ಶಿಕ್ಷಣ (BEd) ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳನ್ನು ಅಪ್‌ಲೋಡ್ ಮಾಡಿದ್ದೇವೆ. ಜಿಲ್ಲೆಯಲ್ಲಿನ ನಮ್ಮ ಸಮಿತಿಯು ಇಂತಹ ಸಾಕಷ್ಟು ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ ಮತ್ತು ಸಾಕಷ್ಟು ಪರಿಶ್ರಮದ ನಂತರ ನಾವು ಹಲವು ಶಿಕ್ಷಕರನ್ನು ನಕಲಿ ಎಂದು ಕಂಡುಕೊಂಡಿದ್ದೇವೆ ಎಂದರು. ನಕಲಿ ಶಿಕ್ಷಕರ ವಿರುದ್ಧ ಎಫ್‌ಐಆರ್, ವಸೂಲಾತಿ ನೋಟೀಸ್ ಮತ್ತು ಅಮಾನತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅನಾಮಿಕಾ ಶುಕ್ಲಾ ಅವರ ನಿಗೂಢ ಪ್ರಕರಣವು ನೇಮಕಾತಿ ಹಗರಣದ ತನಿಖೆಗೆ ಪ್ರಮುಖ ತಿರುವು ನೀಡಿತು. 2020ರ ಜೂನ್ ತಿಂಗಳಲ್ಲಿ “ಅನಾಮಿಕಾ ಶುಕ್ಲಾ” ಎಂಬುವರ ಶಿಫಾರಸು ಪತ್ರವನ್ನು ಬಳಸಿಕೊಂಡು ಹಲವಾರು ಮಹಿಳೆಯರು ಸರ್ಕಾರಿ ಶಾಲೆಗಳಿಗೆ ನೇಮಕವಾಗಿರುವುದು ಪತ್ತೆಯಾದ ನಂತರ ಯುಪಿ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಅನಾಮಿಕಾ ಶುಕ್ಲಾ ಶಿಫಾರಸು ಮೇಲೆ ನೇಮಕಗೊಂಡ ಹಲವಾರು ಶಿಕ್ಷಕರನ್ನು ರಾಜ್ಯದ ಹಲವು ಜಿಲ್ಲೆಗಳಿಂದ ಬಂಧಿಸಲಾಯಿತು. (ಏಜೆನ್ಸೀಸ್​)

    ಮೋದಿಜೀ 19 ವರ್ಷ ಎಲ್ಲವನ್ನೂ ಮೌನವಾಗೇ ಸಹಿಸಿಕೊಂಡ್ರು: ಗುಜರಾತ್​ ಗಲಭೆ ತೀರ್ಪಿನ ಬಗ್ಗೆ ಅಮಿತ್​ ಷಾ ಮಾತು

    ಪ್ರತಿಭಟನೆ ಬಿಸಿ: ರೋಹಿತ್ ಚಕ್ರತೀರ್ಥಗೆ ಇಂದು ನಡೆಯಬೇಕಿದ್ದ ‘ನಾಗರಿಕ ಸನ್ಮಾನ’ ಮುಂದೂಡಿಕೆ

    ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts