More

    78ರ ವೃದ್ಧನನ್ನು ವರಿಸಿದ 18ರ ಯುವತಿ! ಇವರಿಬ್ಬರ ಲವ್​ ಸ್ಟೋರಿ ಓದಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಮನಿಲಾ: ಹದಿನೆಂಟರ ಯುವತಿ ಮತ್ತು ಎಪ್ಪತೆಂಟರ ಮುದುಕನ ನಡುವಿನ ಅಸಾಮಾನ್ಯ ಪ್ರೇಮಕತೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇನ್ನೂ ಮದುವೆಯಾಗದೆ ಹೆಣ್ಣಿಗಾಗಿ ಪರಿತಪಿಸುತ್ತಿರುವ ಗಂಡು ಮಕ್ಕಳ ಹೊಟ್ಟೆ ಬೆಂಕಿಯಿಟ್ಟಂತಾಗಿದೆ. ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸ ಇರುವ ಇಬ್ಬರ ಲವ್​ ಸ್ಟೋರಿಯನ್ನು ಕೇಳಿದ್ರೆ ನಿಮ್ಮ ಹುಬ್ಬೇರುವುದರಲ್ಲಿ ಯಾವುದೇ ಸಂಶಯವಿಲ್ಲ.

    ಅಂದಹಾಗೆ ಈಗ ನಾವು ಹೇಳುತ್ತಿರುವುದು 18 ವರ್ಷದ ಹಲಿಮಾ ಅಬ್ದುಲ್ಲಾ ಮತ್ತು 78 ವರ್ಷದ ರಶಾದ್ ಮಂಗಕೋಪ್ ಅವರ ಲವ್​ ಸ್ಟೋರಿಯ ಬಗ್ಗೆ. ಇಬ್ಬರು ಈಗಾಗಲೇ ಮದುವೆ ಸಹ ಆಗಿದ್ದಾರೆ. ಇವರು ಫಿಲಿಪ್ಪೈನ್ಸ್​ ದೇಶದವರು. ಫಿಲಿಪ್ಪೈನ್ಸ್​ ಅಂದಮೇಲೆ ಕೇಳಬೇಕಾ, ಅಲ್ಲಿ ವಯಸ್ಸಿನ ಭಾರಿ ಅಂತರದ ಮದುವೆಗಳು ಸರ್ವೇ ಸಾಮಾನ್ಯ.

    ಇನ್ನು ಹಲಿಮಾ ಮತ್ತು ರಶಾದ್ ಅವರದ್ದು ಲವ್​ ಅಟ್​ ಫಸ್ಟ್​ ಸೈಟ್. ಮೊದಲ ಬಾರಿಗೆ ಇಬ್ಬರು ಮದುವೆ ಸಮಾರಂಭದ ಡಿನ್ನರ್​ ಪಾರ್ಟಿಯಲ್ಲಿ ಭೇಟಿಯಾದರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಯಿತಂತೆ. ಬಳಿಕ ಇಬ್ಬರು ಡೇಟಿಂಗ್​ ಆರಂಭಿಸಿದರು. ಮೂರು ವರ್ಷಗಳ ಕಾಲ ಡೇಟಿಂಗ್​ ನಡೆಸಿದ ಅಸಾಮಾನ್ಯ ಜೋಡಿ, ಇದೀಗ ಕುಟುಂಬದವರ ಒಪ್ಪಿಗೆಯನ್ನು ಪಡೆದು ಮದುವೆ ಆಗಿದ್ದಾರೆ.

    ಇಬ್ಬರ ನಡುವೆ 60 ವರ್ಷ ವಯಸ್ಸಿನ ಅಂತರವಿದೆ. ಇಬ್ಬರು ಇದುವರೆಗೂ ಒಮ್ಮೆಯು ಪ್ರೀತಿಯ ಬಲೆಯಲ್ಲಿ ಬಿದ್ದಿಲ್ಲ ಎಂದು ಹೇಳಿಕೊಂಡಿದ್ದಾರೆ. ಮೂಲಗಳ ಪ್ರಕಾರ ಹಲಿಮಾಳೇ ರಶಾದ್​ ಪ್ರೀತಿಯ ಬಲೆಯಲಿ ಬಿದ್ದಳಂತೆ. ರಶಾದ್​ಗೆ ಈವರೆಗೂ ಮದುವೆ ಆಗಿಲ್ಲದಿರುವುದು ಸಹ ಆತನ ಮೇಲಿನ ಪ್ರೀತಿಗೆ ಕಾರಣವಂತೆ. ಇಬ್ಬರ ಮದುವೆಗೆ ಮನೆಯವರು ಒಪ್ಪಿಕೊಳ್ಳಲು ಕೂಡ ಇದೇ ಕಾರಣವಂತೆ.

    ಇವರಿಬ್ಬರ ಲವ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಇಸ್ಲಾಮಿಕ್ ಪದ್ಧತಿಯಂತೆ ಈ ಅಸಾಮಾನ್ಯ ಜೋಡಿ ವಿವಾಹವಾದರು. (ಏಜೆನ್ಸೀಸ್​)

    ಸೆಟ್ಟೇರಿತು ನಿರ್ದೇಶಕ ಪವನ್ ಒಡೆಯರ್ ಅವರ ಮೊದಲ ಹಿಂದಿ ಸಿನಿಮಾ: ಚಿತ್ರಕ್ಕೆ ‘ನೋಟರಿ’ ಟೈಟಲ್

    ಸತ್ತವನನ್ನೇ ಮದ್ವೆಯಾದ ಖತರ್ನಾಕ್​ ಬಾರ್​ ಗರ್ಲ್​! ಪಾದ್ರಿ ನೀಡಿದ ಸಾಥ್​: 20 ಕೋಟಿ ರೂ. ಗುಳುಂ

    ಅಮೆರಿಕದಲ್ಲಿ ಕಿಡ್ನ್ಯಾಪ್ ಆಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts