More

    ಯೂಕ್ರೇನ್‌-ರಷ್ಯಾ ಯುದ್ಧ: ನಾನು ಸುರಕ್ಷಿತವಾಗಿದ್ದೇನೆ ಎಂದು ತಂದೆಗೆ ಕರೆ ಮಾಡಿ ಧೈರ್ಯ ಹೇಳಿದ ನವ್ಯಶ್ರೀ

    ನೆಲಮಂಗಲ: ಇಲ್ಲಿ ನನಗೆ ಯಾವುದೇ ತೊಂದರೆಯಾಗಿಲ್ಲ ನಾನು ಸದ್ಯಕ್ಕೆ ಸುರಕ್ಷಿತವಾಗಿದ್ದೇನೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ನಗರದ ಪರಮಣ್ಣ ಬಡಾವಣೆ ನಿವಾಸಿ ನಿವೃತ್ತ ಯೋಧ ನಂದಕುಮಾರ್ ಎಂಬುವರ ಪುತ್ರಿ ನವ್ಯಶ್ರೀ ಉಕ್ರೇನ್‌ನಿಂದ ಕರೆ ಮಾಡಿದ್ದಾಗಿ ನಂದಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಉಕ್ರೇನ್‌ನ ಕಾರ್ ಕೀವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನವ್ಯಶ್ರೀ ಉಕ್ರೇನ್‌ನ ಕಾರ್ ಕೀವ್ ಪ್ರದೇಶದಲ್ಲಿ ವಾಸವಾಗಿದ್ದಾರೆ.

    2014 ರಿಂದಲೂ ಇಲ್ಲಿ ಇದೇ ಬಗೆಯ ವಾತಾವರಣವಿದೆ, ಆದ್ದರಿಂದ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಟಿಎಂ, ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಬರುತ್ತಿದ್ದಾರೆ. ಒಂದು ರೀತಿ ಕಾರ್ ಕೀವ್ ಪ್ರದೇಶದಲ್ಲಿ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಬುಧವಾರದವರೆಗೆ ಎಂದಿನಂತೆ ಕಾಲೇಜಿನ ತರಗತಿ ನಡೆದಿತ್ತು. ಗುರುವಾರದಿಂದ ಬಂದ್ ಆಗಿದೆಯಷ್ಟೇ ಯಾವುದೇ ಆತಂಕಪಡಬೇಕಿಲ್ಲ ಎಂದು ನವ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.

    ಮೆಟ್ರೋ ನಿಲ್ದಾಣಗಳತ್ತ ದೌಡು:
    ಉಕ್ರೇನ್ ಸರ್ಕಾರ ಕಾರ್‌ಕೀವ್ ನಿವಾಸಿಗಳಿಗೆ ತುರ್ತು ಸೂಚನೆ ನೀಡಿದೆ. ಬಹುಮಹಡಿಕಟ್ಟಡ ನಿವಾಸಿಗಳಿಗೆ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚನೆ ನೀಡಿದೆ, ಸುರಕ್ಷತಾ ದೃಷ್ಟಿಯಿಂದ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ನಿರ್ದೇಶನ ನೀಡಿದೆ. ಈಗಾಗಲೇ ಸಾಕಷ್ಟು ಮಂದಿ ಬಹುಮಹಡಿಕಟ್ಟಡ ತೊರೆದು ಮೆಟ್ರೋ ನಿಲ್ದಾಣಗಳಿಗೆ ತೆರಳುತ್ತಿದ್ದಾರೆ ಎಂದು ಪುತ್ರಿ ತಿಳಿಸಿದ್ದಾಳೆ, ಬೆಳಗ್ಗೆಯಿಂದಲೂ ಮಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಅಲ್ಲಿ ಯಾವುದೇ ಆತಂಕಪಡುವ ಸನ್ನಿವೇಶವಿಲ್ಲ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾಳೆ, ಅಲ್ಲಿನ ಸರ್ಕಾರ ಎಲ್ಲ ವಿದ್ಯಾರ್ಥಿಗಳ ರಕ್ಷಣೆಗೆ ಎಲ್ಲ ಬಗೆಯ ಸುರಕ್ಷತಾಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾಗಿ ನಿವೃತ್ತ ಯೋಧ ನಂದಕುಮಾರ್ ತಿಳಿಸಿದ್ದಾರೆ.

    ಸೈನಿಕ ರಕ್ತ ಹೆದರೊಲ್ಲ:
    ವಿದ್ಯಾರ್ಥಿಗಳ ಪಾಲಕರು ಧೈರ್ಯಗುಂದಬೇಕಿಲ್ಲ, ಉಕ್ರೇನ್ ಸರ್ಕಾರ ನಮ್ಮ ದೇಶ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದೆ. ನನ್ನ ಮಗಳ ಮೈಯಲ್ಲಿ ಹರಿಯುತ್ತಿರುವುದು ಸೈನಿಕನ ರಕ್ತ, ಆದ್ದರಿಂದ ನನ್ನ ಮಗಳು ಧೈರ್ಯವಾಗಿ ಪರಿಸ್ಥಿತಿ ಎದುರಿಸಲಿದ್ದಾಳೆ ಎಂದು ನಂದಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕನ್ನಡದ ಕ್ಲಾಸಿಕ್​ಗಳಿಗೆ 52ರ ಸಂಭ್ರಮ: ಟ್ರೆಂಡ್ ಸೆಟ್ ಮಾಡಿದ ಶ್ರೀ ಕೃಷ್ಣದೇವರಾಯ ಮತ್ತು ಗೆಜ್ಜೆ ಪೂಜೆ

    ಕ್ಯಾಸಿನೊ ವಿರುದ್ಧ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಾನೂನು ಸಮರ; ಕಾರಣವೇನು ಗೊತ್ತೇ?

    VIDEO: ಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ‘ಪುಷ್ಪ’ ಸ್ಟೈಲ್‌ನಿಂದ ಗಮನಸೆಳೆದ ರವೀಂದ್ರ ಜಡೇಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts