ಕ್ಯಾಸಿನೊ ವಿರುದ್ಧ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಾನೂನು ಸಮರ; ಕಾರಣವೇನು ಗೊತ್ತೇ?

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕಾಗಿ ತಮ್ಮ ಚಿತ್ರವನ್ನು ತಿರುಚಿ ಬಳಸಿಕೊಂಡಿರುವ ಕ್ಯಾಸಿನೊ ಒಂದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮುಂದಾಗಿದ್ದಾರೆ. ಸಚಿನ್ ಅನುಮತಿ ಇಲ್ಲದೆ ಅವರ ಚಿತ್ರವನ್ನು ಬಳಸಿರುವ ಗೋವಾದ ‘ಬಿಗ್ ಡ್ಯಾಡಿ’ ಕ್ಯಾಸಿನೊ ಎನ್ನಲಾಗಿದೆ. ಕ್ಯಾಸಿನೊದಂಥ ಜೂಜು ಮಾತ್ರವಲ್ಲದೆ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳಿಗೂ ತಾನೆಂದೂ ಪ್ರಚಾರ ಮಾಡುವುದಿಲ್ಲ ಎಂಬುದನ್ನೂ ಸಚಿನ್ ತೆಂಡುಲ್ಕರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ‘ನನ್ನ ತಂಡ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಇದೇ ವೇಳೆ ನಾನು … Continue reading ಕ್ಯಾಸಿನೊ ವಿರುದ್ಧ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಾನೂನು ಸಮರ; ಕಾರಣವೇನು ಗೊತ್ತೇ?