More

    ಯೂಕ್ರೇನ್​ನಲ್ಲಿ ಸಿಲುಕಿ ಸಹಾಯದ ನಿರೀಕ್ಷೆಯಲ್ಲಿರುವ ಚಾ.ನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು

    ಚಾಮರಾಜನಗರ: ಯೂಕ್ರೇನ್​ ಮತ್ತು ರಷ್ಯಾ ನಡುವೆ ಎರಡು ದಿನವೂ ಯುದ್ಧ ಮುಂದುವರಿದಿದ್ದು, ವಿಮಾನ ಸೇವೆಗಳು ಸ್ಥಗಿತಗೊಂಡಿರುವ ಪರಿಣಾಮ ಕರ್ನಾಟಕದ ವಿದ್ಯಾರ್ಥಿಗಳು ಯೂಕ್ರೇನ್​ನಲ್ಲಿ ಸಿಲುಕಿ ಜೀವ ಭಯದಲ್ಲಿ ಕಾಲ ದೂಡುತ್ತಿದ್ದಾರೆ.

    ರಾಜ್ಯದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಯೂಕ್ರೇನ್​ನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಇದೀಗ ಎದುರಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದ ನಾಲ್ವರು ವಿದ್ಯಾರ್ಥಿಗಳು ಕೂಡ ಯೂಕ್ರೇನ್​​ನಲ್ಲಿ ಸಿಲುಕಿದ್ದಾರೆ.‌ ಹನೂರು ಹಾಗೂ‌ ಕೊಳ್ಳೇಗಾಲ ತಾಲೂಕಿನ ನಾಲ್ವರು ವಿದ್ಯಾರ್ಥಿಗಳು ಸಹಾಯ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

    ಹನೂರು ತಾಲೂಕಿನ ಒಡೆಯರ್ ಪಾಳ್ಯದ ವೈದ್ಯಕೀಯ ವಿದ್ಯಾರ್ಥಿ ಸಿದ್ದೇಶ್, ಹನೂರು ಪಟ್ಟಣ, ಅಜ್ಜೀಪುರ ಮತ್ತು ಕೊಳ್ಳೇಗಾಲದ ನಾಲ್ವರು ಉಕ್ರೇನ್ ನಲ್ಲಿದ್ದಾರೆ‌ ಎಂದು ತಿಳಿದು ಬಂದಿದೆ.

    ಇವರನ್ನು ಭಾರತಕ್ಕೆ ಕರೆತರಬೇಕೆಂದು ಹನೂರು ಬಿಜೆಪಿ ಮುಖಂಡ ವೆಂಕಟೇಶ್, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಸಚಿವೆ ಶೋಭಾ ಕರಂದ್ಲಾಜೆ ಬಳಿ ಮನವಿ ಮಾಡಿದ್ದಾರೆ. ಹನೂರು ಬಿಜೆಪಿ ಘಟಕದಿಂದ ಸಹಾಯವಾಣಿ ಆರಂಭಿಸಿ ಯಾರಾದ್ರೂ ಉಕ್ರೇನ್​​ನಲ್ಲಿ ನೆಲೆಸಿದ್ದರೆ ಮಾಹಿತಿ ಕೊಡುವಂತೆ ಕೋರಲಾಗಿದೆ.

    ಯೂಕ್ರೇನ್​ನಲ್ಲಿ ಸಿಲುಕಿ ಸಹಾಯದ ನಿರೀಕ್ಷೆಯಲ್ಲಿರುವ ಚಾ.ನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು

    ಹಾಸ್ಟೆಲ್​ ಪಕ್ಕದಲ್ಲೇ ಸ್ಫೋಟ: ಭಯಾನಕ ಅನುಭವ ಬಿಚ್ಚಿಟ್ಟ ಯೂಕ್ರೇನಲ್ಲಿ ಸಿಲುಕಿರುವ ಕಲಬುರಗಿಯ ವಿದ್ಯಾರ್ಥಿಗಳು

    ಯೂಕ್ರೇನ್​-ರಷ್ಯಾ ಕದನ ಕಾರ್ಮೋಡ: ಯೂಕ್ರೇನಲ್ಲಿ ಸಿಲುಕಿರುವ ರಾಯಚೂರಿನ 6 ವಿದ್ಯಾರ್ಥಿಗಳು, ಪಾಲಕರಿಗೆ ಆತಂಕ

    ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಮೂಹಿಕ ನಾಯಕತ್ವ ಪಾಠ; ರಾಜ್ಯಕ್ಕೆ ಆಗಮಿಸಲಿದ್ದಾರೆ ರಾಹುಲ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts