More

    ಯುದ್ಧ ಕಾರ್ಮೋಡ ಸನ್ನಿಹಿತ: ಯೂಕ್ರೇನ್​ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ

    ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಕದನ ಕಾರ್ಮೋಡ ಸನ್ನಿಹಿತವಾಗಿದೆ. ತಾಜಾ ಬೆಳವಣಿಗೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ಯೂಕ್ರೇನ್​ ವಿರುದ್ಧ ಗುರುವಾರ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಣೆ ಮಾಡಿದೆ.

    ಯೂಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ ಯೂಕ್ರೇನ್​ ರಾಜಧಾನಿ ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಸ್ಫೋಟಗಳು ಕೇಳಿಬಂದಿವೆ. ಅಮೆರಿಕ ಮೂಲದ BNO ನ್ಯೂಸ್ ವೀಡಿಯೋ ತುಣುಕೊಂದನ್ನು ಪ್ರದರ್ಶಿಸಿದ್ದು, ಕತ್ತಲೆ ಆವರಿಸಿರುವುದರ ನಡುವೆ ಬೆಳಕಿನ ಜ್ವಾಲೆ ಕಾಣಿಸುತ್ತಿರುವುದು ಪೂರ್ವ ಯೂಕ್ರೇನ್‌ನ ಮೇಲಿನ ರಷ್ಯಾದ ದಾಳಿಯ ಭಾಗವಾಗಿದೆ ಎಂದು ಹೇಳಲಾಗಿದೆ.

    ಯೂಕ್ರೇನ್​ ವಿರುದ್ಧ ಯುದ್ಧ ಘೋಷಿಸಿ ಮಾತನಾಡಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಯೂಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಈ ಸೇನಾ ಕಾರ್ಯಾಚರಣೆಯು ಯೂಕ್ರೇನ್​ ಅನ್ನು ಸೈನ್ಯೀಕರಣಗೊಳಿಸಲು ಪ್ರಯತ್ನಿಸುತ್ತದೆ ಮತ್ತು ಯೂಕ್ರೇನ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದಿದೆ ಎಂದು ಹೇಳಿದ್ದಾರೆ.

    ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ
    ರಷ್ಯಾ ಮತ್ತು ಯೂಕ್ರೇನಿಯನ್ ಪಡೆಗಳ ನಡುವಿನ ಘರ್ಷಣೆಗಳು ಸದ್ಯ ಅನಿವಾರ್ಯ ಎಂದಿರುವ ಪುತಿನ್, ಯೂಕ್ರೇನಿಯನ್ ಸೇವಾ ಸದಸ್ಯರಿಗೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಕರೆ ನೀಡಿದ್ದಾರೆ. ಈ ವಿಚಾರದಲ್ಲಿ ಹೊರಗಿನಿಂದ ಹಸ್ತಕ್ಷೇಪ ಮಾಡುವವರಿಗೂ ಎಚ್ಚರಿಕೆಯ ಸಂದೇಶವನ್ನು ಪುತಿನ್​ ರವಾನಿಸಿದ್ದಾರೆ. ಯಾರಾದರೂ ಹಸ್ತಕ್ಷೇಪ ಮಾಡಿದರೆ, ಇತಿಹಾಸದಲ್ಲೇ ಎಂದಿಗೂ ಎದುರಿಸದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲ ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ನಾನು ಹೇಳುವುದನ್ನು ನೀವು ಕೇಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಯೂಕ್ರೇನ್ ನ್ಯಾಟೋಗೆ ಸೇರುವುದನ್ನು ತಡೆಯಲು ಮತ್ತು ಮಾಸ್ಕೋ ಭದ್ರತಾ ಖಾತರಿಗಳನ್ನು ನೀಡುವ ರಷ್ಯಾದ ಬೇಡಿಕೆಯನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ನಿರ್ಲಕ್ಷಿಸುತ್ತಿವೆ ಎಂದು ಪುತಿನ್​ ಆರೋಪ ಮಾಡಿದ್ದಾರೆ.

    ಮೊನ್ನೆಯಷ್ಟೇ (ಫೆ.22) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅನೇಕ ರಾಷ್ಟ್ರಗಳು ರಷ್ಯಾಗೆ ಛೀಮಾರಿ ಹಾಕಿದ್ದವು. ಶಾಂತಿ ಕಾಪಾಡುವಂತೆ ರಷ್ಯಾಗೆ ಒತ್ತಾಯ ಮಾಡಿದರು ಕೂಡ ರಷ್ಯಾ ತನ್ನ ನಿಲುವು ಬದಲಿಸದೇ ಇದೀಗ ಯುದ್ಧವನ್ನು ಘೋಷಿಸಿದೆ. ರಷ್ಯಾ ನಡೆಯಿಂದ ಬೇಸತ್ತಿರುವ ಬ್ರಿಟನ್​, ಜರ್ಮನಿ ಮತ್ತು ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರಿವೆ. ಆದರೂ ರಷ್ಯಾ ಮಾತ್ರ ಯುದ್ಧಕ್ಕೆ ಅಂಟಿಕೊಂಡು ಕುಳಿತಿದೆ. ಇದರ ಪರಿಣಾಮ ಜಗತ್ತಿನ ಮೇಲೆ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಕರೊನಾದಿಂದ ಜಗತ್ತು ಕಂಗೆಟ್ಟಿ ಕುಳಿತಿರುವು ಸಂದರ್ಭದಲ್ಲಿ ಈ ಯುದ್ಧ ಗಾಯದ ಮೇಲೆ ಬರೆ ಎಳೆದಂತಾಗಲಿದೆ. (ಏಜೆನ್ಸೀಸ್​)

    ಸೇವೆಯಲ್ಲಿರುವಾಗಲೇ ಹಿಮಪಾತದಲ್ಲಿ ಸಿಲುಕಿ ಹುತಾತ್ಮನಾದ ಕೊಡಗಿನ ಯೋಧ

    ಕಚೇರಿ ಬಿಟ್ಟು ಮನೆಯಲ್ಲೇ ಕೆಲಸ: ಲಂಚಕ್ಕೆ ಕೈವೊಡ್ಡಿ ಸ್ಥಳೀಯರ ಮೊಬೈಲ್​ನಲ್ಲಿ ಸಿಕ್ಕಿಬಿದ್ದ ಲಂಚಾವತಾರಿ PDO

    ತಮಿಳುನಾಡು ದೇವಸ್ಥಾನದಿಂದ 2012ರಲ್ಲಿ ಕಳುವಾಗಿದ್ದ 500 ವರ್ಷದ ಹಿಂದಿನ ಹನುಮನ ವಿಗ್ರಹ ಮರಳಿ ಭಾರತಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts