More

    ಪತಿಯ ಸರ್ಕಾರದ ಉಳಿವಿಗೆ ರಾಜಕೀಯ ಅಖಾಡಕ್ಕಿಳಿದ ಉದ್ಧವ್​ ಠಾಕ್ರೆ ಪತ್ನಿ: ಈ ಪ್ಲಾನ್​ ವರ್ಕೌಟ್​ ಆಗುತ್ತಾ?

    ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ, ಕಾಂಗ್ರೆಸ್​ ಮತ್ತು ಎನ್​ಸಿಪಿ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರು ಪ್ರಬಲ ನಾಯಕ ಏಕನಾಥ್​ ಶಿಂಧೆ ನೇತೃತ್ವದಲ್ಲಿ ರಾಜ್ಯವನ್ನು ತೊರೆದು ಅಸ್ಸಾಂನ ಗುವಾಹಟಿಯ ಹೋಟೆಲ್​ನಲ್ಲಿ ಬೀಡು ಬಿಟ್ಟಿದ್ದಾರೆ. ಹೇಗಾದರೂ ಮಾಡಿ ಶಾಸಕರ ಮನವೊಲಿಸಬೇಕೆಂದು ಸಿಎಂ ಉದ್ಧವ್​ ಠಾಕ್ರೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಉದ್ಧವ್​ ಠಾಕ್ರೆ ನೆರವಿಗೆ ಅವರ ಪತ್ನಿ ರಶ್ಮಿ ಠಾಕ್ರೆ ಧಾವಿಸಿದ್ದಾರೆ.

    ಶಾಸಕರು ಅಸ್ಸಾಂನಲ್ಲಿ ಬೀಡು ಬಿಟ್ಟಿದ್ದರೆ, ರಶ್ಮಿ ಅವರು ಶಾಸಕರ ಪತ್ನಿಯನ್ನು ಸಂಪರ್ಕಿಸಿ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ತಮ್ಮ ತಮ್ಮ ಗಂಡಂದಿರೊಂದಿಗೆ ಮಾತನಾಡಿ ವಾಪಸ್​ ಬರುವಂತೆ ಮನವೊಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಶ್ಮಿ ಅವರ ಈ ಪ್ಲಾನ್​ ವರ್ಕೌಟ್​ ಆಗುತ್ತಾ ಎಂಬುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಶನಿವಾರ ಸಿಎಂ ಉದ್ಧವ್ ಠಾಕ್ರೆ ಅವರು ಶಿವಸೇನಾ ನಾಯಕರೊಂದಿಗೆ ರಾಷ್ಟ್ರೀಯ ಕಾರ್ಯಕಾರಿ ಸಭೆಯನ್ನು ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿದ ಉದ್ಧವ್​ ಠಾಕ್ರೆ, ಶಿವಸೇನೆ ಮತ್ತು ಅದರ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಯಾವುದೇ ರಾಜಕೀಯ ಸಂಘಟನೆ ಅಥವಾ ರಾಜಕೀಯ ಬಣ ಬಳಸದಂತೆ ನಿರ್ಬಂಧಿಸಲು ನಿರ್ಣಯಗಳನ್ನು ಅಂಗೀಕರಿಸಿದರು ಮತ್ತು ಈ ವಿಚಾರವಾಗಿ ಚುನಾವಣಾ ಆಯೋಗದ ಮೆಟ್ಟಿಲೇರುವುದಾಗಿ ನಿರ್ಧರಿಸಿದರು.

    ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಮಹಾ ವಿಕಾಸ್​ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದಿರುವ 40 ಶಿವಸೇನಾ ಶಾಸಕರು ಅವರ ನಾಯಕ ಏಕನಾಥ್​ ಶಿಂಧೆ ಜೊತೆಯಲ್ಲಿ ಈ ಹಿಂದೆ ಗುಜರಾತ್​ನ ಸೂರತ್​ನಲ್ಲಿ ಬೀಡುಬಿಟ್ಟಿದ್ದರು. ಇದೀಗ ಅಸ್ಸಾಂನ ಗುವಾಹಟಿಗೆ ಎಲ್ಲರು ತಲುಪಿದ್ದು, ಅಸ್ಸಾಂನ ಆಡಾಳಿತಾರೂಢ ಬಿಜೆಪಿ ಪಕ್ಷದ ನಾಯಕರು ಬಂಡಾಯ ಶಾಸಕರಿಗೆ ಆತಿಥ್ಯವನ್ನು ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಪತನ ಹಂಚಿನಲ್ಲಿದೆ.

    ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಬಲ 287. ವಿಶ್ವಾಸಮತ ಸಾಬೀತು ಪಡಿಸಲು 144 ಸದಸ್ಯರ ಬಲ ಬೇಕಾಗಿದೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಆಡಳಿತಾರೂಢ ಒಕ್ಕೂಟವು 169 ಸ್ಥಾನಗಳನ್ನು ಹೊಂದಿದೆ. ಒಂದು ವೇಳೆ ಶಿಂಧೆ ನೇತೃತ್ವದ ಶಾಸಕರು ರಾಜೀನಾಮೆ ನೀಡಿದರೆ, ಮಹಾ ವಿಕಾಸ್ ಅಘಾಡಿ ಬಲವು ಬಹುಮತಕ್ಕಿಂತ ಕೆಳಗಿಳಿಯುತ್ತದೆ, ಇದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ. (ಏಜೆನ್ಸೀಸ್​)

    ತಮ್ಮ ಶ್ವಾನದ ಜತೆ 777 ಚಾರ್ಲಿ ಸಿನಿಮಾ ನೋಡಿ ಭಾವುಕರಾದ ಜನಾರ್ದನ ರೆಡ್ಡಿ ಹೇಳಿದ್ದು ಹೀಗೆ…

    ಮೊದಲ ಬಾರಿಗೆ ಅಶ್ಲೀಲ ದೃಶ್ಯದಲ್ಲಿ ನಟನೆ: ನಟಿ ಇಶಾ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಬಾಬಿ ಡಿಯೋಲ್​

    ಅದು ಹೇಗೆ ಬೇಕಾದರೂ ಆಗಬಹುದು: ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್​​​ಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts