More

    ಹೊಟ್ಟೆ ಪಾಡಿಗಾಗಿ ಬೀದಿ ಬದಿಯಲ್ಲಿ ತಿಂಡಿ ತಿನಿಸು ಮಾರಾಟ ಮಾಡುತ್ತಿರುವ ಟಿವಿ ನಿರೂಪಕ!

    ಕಾಬೂಲ್​: ತಾಲಿಬಾನಿಗಳ ಆಡಳಿತ ಶುರುವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅದಕ್ಕೆ ತಾಜಾ ನಿದರ್ಶನ ಎಂಬಂತೆ ಟಿವಿ ನಿರೂಪಕನೊಬ್ಬ ಹೊಟ್ಟೆ ಪಾಡಿಗಾಗಿ ಬೀದಿ ಬದಿಯಲ್ಲಿ ತಿಂಡಿ-ತಿನಿಸು ಮಾರಾಟ ಮಾತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

    ಈ ಹಿಂದೆ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ ಕಬೀರ್ ಹಕ್ಮಲ್ ಎಂಬುವರ ಇತ್ತೀಚಿನ ಟ್ವಿಟರ್ ಪೋಸ್ಟ್, ಆಫ್ಘಾನ್​ನಲ್ಲಿ ಎಷ್ಟು ಪ್ರತಿಭಾವಂತ ವೃತ್ತಿಪರರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.

    ಹಕ್ಮಲ್​ ಅವರು ಮೂಸಾ ಮೊಹಮ್ಮದಿ ಎಂಬ ಆಫ್ಘಾನ್​ ಪತ್ರಕರ್ತನ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮೊಹಮ್ಮೊದಿ ಅವರು ಹಲವು ವರ್ಷಗಳಿಂದ ಮಾಧ್ಯಮ ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಆದಾಗ್ಯೂ ತಾಲಿಬಾನ್​ ಆಡಳಿತದ ನಂತರ ಆಫ್ಘಾನ್​ನಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಕೆಲಸ ಕಳೆದುಕೊಂಡು ತುತ್ತು ಊಟಕ್ಕೂ ಪರದಾಡುತ್ತಿರುವ ಮೊಹಮ್ಮದಿ ಜೀವನ ಸಾಗಿಸಲು ರಸ್ತೆ ಬದಿಯಲ್ಲಿ ತಿಂಡಿ-ತಿನಿಸು ಮಾರಾಟ ಮಾಡುತ್ತಿದ್ದಾರೆ ಎಂದು ಹಕ್ಮಲ್​ ಅವರು ಅಡಿಬರಹವನ್ನು ನೀಡಿದ್ದಾರೆ.

    ಅಂದಹಾಗೆ ಮೊಹಮ್ಮದಿ ಅವರು ಆಫ್ಘಾನ್​ನ ವಿವಿಧ ಟಿವಿ ಚಾನೆಲ್​ಗಳಲ್ಲಿ ನಿರೂಪಕ ಮತ್ತು ವರದಿಗಾರನಾಗಿ ಹಲವು ವರ್ಷಗಳವರೆಗೆ ಕೆಲಸ ಮಾಡಿದ್ದಾರೆ. ಆದರೆ, ಈಗ ಅವರ ಕುಟುಂಬವನ್ನು ಸಾಕಲು ಆದಾಯವೇ ಇಲ್ಲ. ಹೀಗಾಗಿ ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರಾಟ ಮಾಡಿ ಒಂದಿಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಹಿಂದೆಂದೂ ಕಾಣದ ಬಡತನವನ್ನು ಅನುಭವಿಸುತ್ತಿದ್ದಾರೆ ಎಂದು ಹಕ್ಮಲ್​ ಅವರು ತಿಳಿಸಿದ್ದಾರೆ.

    ಇದೀಗ ಮೊಹಮ್ಮದಿ ಅವರ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದು ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನವನ್ನು ಸೆಳೆದಿದ್ದು, ಮಾಜಿ ಟಿವಿ ನಿರೂಪಕ ಮತ್ತು ವರದಿಗಾರನನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ಭರವಸೆ ನೀಡಿದ್ದಾರೆ.

    ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಾಗಿನಿಂದ, ದೇಶವು ಮಾನವೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಕರ್ತರು, ವಿಶೇಷವಾಗಿ ಮಹಿಳೆಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ತಾಲಿಬಾನ್​ ಸಂಕುಚಿತ ಆಡಳಿತ ಮನೋಭಾವದಿಂದ ಆಫ್ಘಾನ್​ ಹಿಂದೆಂದೂ ಕಾಣದ ದುಸ್ಥಿತಿಗೆ ಬಂದು ತಲುಪಿದೆ. (ಏಜೆನ್ಸೀಸ್​)

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ಬಿಕಿನಿ ಫೋಟೋ-ವಿಡಿಯೋ ಹರಿಬಿಟ್ಟ ನಟಿ ಶ್ವೇತಾ ಪ್ರಸಾದ್​! ನೆಟ್ಟಿಗರ ಕಾಮೆಂಟ್ ಹೀಗಿದೆ ನೋಡಿ

    ಬಾಲಕಿಯರಿಬ್ಬರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ ಹಿರಿಯರು: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts