More

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ಕೊಚ್ಚಿ: ಕಲಾವಿದರಿಗೇನು ಕೈತುಂಬಾ ದುಡ್ಡು ಸಿಗುತ್ತದೆ ಎಂದು ಅನೇಕರು ಭಾವಿಸಿರುತ್ತಾರೆ. ಅದರಲ್ಲೂ ಸ್ಟಾರ್​ ನಟರ ಜತೆ ತೆರೆಹಂಚಿಕೊಂಡ ನಟಿಯರಿಗೆ ದುಡ್ಡಿನ ಕೊರತೆ ಇರಲು ಸಾಧ್ಯವೇ ಇಲ್ಲ ಅಂದುಕೊಂಡವರಿಗೆ ಈ ಸ್ಟೋರಿ ಅಚ್ಚರಿಯಾಗುವುದು ಖಂಡಿತ. ಏಕೆಂದರೆ, ಒಂದಾನೊಂದು ಕಾಲದಲ್ಲಿ ನಟಿಯಾಗಿ ಸುಖದ ಸುಪ್ಪತ್ತಿಗೆ ತೇಲಾಡಿದ್ದ ನಟಿ ಇಂದು ಟಾಯ್ಲೆಟ್​ ತೊಳೆಯುವ ಕೆಲಸವನ್ನಾದರೂ ನೀಡಿ ಎನ್ನವ ಮಟ್ಟಕ್ಕೆ ಬಂದಿರುವ ಚಿತ್ರರಂಗದ ಮತ್ತೊಂದು ಮಜಲನ್ನು ನಮಗೆ ಪರಿಚಯಿಸುತ್ತದೆ.

    ನಿಮಗೆಲ್ಲ ನಟಿ ಐಶ್ವರ್ಯಾ ಅಲಿಯಾಸ್​ ಐಶ್ವರ್ಯಾ ಭಾಸ್ಕರ್ ಗೊತ್ತಿರಬಹುದು. ಇವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್​ ನಟ ಜತೆಯಲ್ಲೇ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಪಾಂಡವರು ಮತ್ತು ಒಗ್ಗರಣೆ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವರಿಗೆ ಇವರು ಮುಖ ಪರಿಚಯವೂ ಇದೆ.

    ಐಶ್ವರ್ಯಾ ಅವರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಟರ್​ಫ್ಲೈಸ್​, ನರಸಿಂಹಂ ಮತ್ತು ಪ್ರಜಾ ಸಿನಿಮಾಗಳಲ್ಲಿ ಮಲಯಾಳಂ ಸೂಪರ್​ಸ್ಟಾರ್​ ಮೋಹನ್​ ಲಾಲ್​ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಜಾಕ್​ಪಾಟ್​, ಸತ್ಯಮೇವ ಜಯತೆ, ಶಾರ್ಜಾ ಮತ್ತು ನೋಟ್​ಬುಕ್​ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ.

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕಿರಿತೆಯ ಅನೇಕ ಧಾರಾವಾಹಿಗಳಲ್ಲೂ ಐಶ್ವರ್ಯಾ ಬಣ್ಣ ಹಚ್ಚಿದ್ದಾರೆ. ಆದರೆ, ಇತ್ತೀಚಿನ ದಿನಗಳಿಂದ ಐಶ್ವರ್ಯಾ ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ. ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳಲು ಕಾರಣ ಏನೆಂಬುದನ್ನು ಇತ್ತೀಚೆಗೆ ತಮಿಳು ಮಾಧ್ಯಮ ಸಂದರ್ಶನವೊಂದರಲ್ಲಿ ಐಶ್ವರ್ಯಾ ತಿಳಿಸಿದ್ದಾರೆ.

    ಸದ್ಯ ನನಗೆ ಯಾವುದೇ ಕೆಲಸ ಇಲ್ಲ. ಹಣವು ಇಲ್ಲ. ಹೀಗಾಗಿ ಬೀದಿ ಬೀದಿಗಳಲ್ಲಿ ಸಾಬೂನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇನೆ. ಸಿನಿಮಾದಿಂದ ಯಾವುದೇ ಅವಕಾಶಗಳು ಬರುತ್ತಿಲ್ಲ. ಯಾರಾದರೂ ಕರೆದು ಅವಕಾಶ ಕೊಡುತ್ತಾರೇನೋ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ.

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ನನಗೆ ಯಾವುದೇ ಸಾಲವಿಲ್ಲ. ನನ್ನ ಕುಟುಂಬದಲ್ಲಿ ನಾನೋಬ್ಬಳೆ ಸದಸ್ಯಳು. ನಾನು ಏಕಾಂಗಿ. ನನ್ನ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾಳೆ. ಯಾವುದೇ ಕೆಲಸ ಮಾಡಲು ನಾನು ಹಿಂಜರಿಯುವುದಿಲ್ಲ. ನಿಮ್ಮ ಕಚೇರಿಯಲ್ಲಿ ನನಗೆ ಯಾವುದಾದರೂ ಕೆಲಸ ನೀಡಿದರೆ, ನಾನದನ್ನು ಒಪ್ಪಿಕೊಳ್ಳಲು ತಯಾರಿದ್ದೇನೆ. ಟಾಯ್ಲೆಟ್​ ಶುಚಿಗೊಳಿಸುವ ಕೆಲಸಕ್ಕೂ ಸೈ. ಶೌಚಗೃಹ ಶುಚಿಗೊಳಿಸಿ, ಸಂತೋಷದಿಂದ ಮನೆಗೆ ಹಿಂತಿರುತ್ತೇನೆ ಎಂದು ಐಶ್ವರ್ಯಾ ಹೇಳಿದರು.

    1994ರಲ್ಲಿ ತನ್ವೀರ್​ ಅಹ್ಮದ್​ ಎಂಬುವರನ್ನು ಐಶ್ವರ್ಯಾ ಮದುವೆಯಾಗಿದ್ದರು. ಆದರೆ, ಮದುವೆಯಾದ ಮೂರೇ ವರ್ಷಕ್ಕೆ ದಂಪತಿ ವೈಮನಸ್ಸಿನಿಂದ ಬೇರ್ಪಟ್ಟರು. ಡಿವೋರ್ಸ್​ ಮಾಡುವುದು ಅನಿವಾರ್ಯವಾಗಿತ್ತು. ಮದುವೆಯಾದ ಆರೇ ತಿಂಗಳಿಗೆ ಅವನ ಜತೆಗಿನ ಸಂಬಂಧ ಹಳಸಿತ್ತು. ಮಗು ಒಂದೂವರೆ ವರ್ಷ ಇರುವಾಗಲೇ ನಾವಿಬ್ಬರು ಡಿವೋರ್ಸ್​ ಪಡೆದುಕೊಂಡೆವು. ಇದೀಗ ಮಾಜಿ ಪತಿ ಮತ್ತು ಆತನ ಪತ್ನಿಯ ಜತೆಗೆ ಒಳ್ಳೆಯ ಬಾಂದವ್ಯ ಇದೆ ಎಂದು ಐಶ್ವರ್ಯಾ ಹೇಳಿದ್ದಾರೆ.

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ನಾನು ಮದ್ಯಕ್ಕಾಗಲಿ ಅಥವಾ ನನಗಾಗಲಿ ಹಣವನ್ನು ಖರ್ಚು ಮಾಡಿಲ್ಲ. ನಾನು ನನ್ನ ಕುಟುಂಬಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ. ನನ್ನ ವೃತ್ತಿ ಜೀವನದ ಅವಧಿ ಕೇವಲ ಮೂರೇ ವರ್ಷ ಇತ್ತು. ನಾನು ನಟಿಸಲು ಪ್ರಾರಂಭಿಸಿದ ಮೂರು ವರ್ಷಗಳಲ್ಲೇ ನನ್ನ ಮದುವೆಯು ಆಯಿತು. ಹೀಗಾಗಿ ನಾನು ಚಿತ್ರರಂಗವನ್ನು ತೊರೆದಿದ್ದೆ. ಪ್ರತಿಯೊಬ್ಬರೂ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ನಯನತಾರಾ ರೀತಿ ಸ್ಟಾರ್​ ನಾಯಕಿಯಾಗಿ ಹೊರ ಹೊಮ್ಮುವ ಅದೃಷ್ಟ ಇರುವುದಿಲ್ಲ. ನನಗೂ ಎರಡನೇ ಇನ್ನಿಂಗ್ಸ್​ ಕೈ ಹಿಡಿಯಲಿಲ್ಲ. ಸದ್ಯ ನನ್ನ ಮಗಳಿಗೆ ಉತ್ತಮವಾದದ್ದನ್ನು ನೀಡಲು ನಾನು ಬಯಸುತ್ತೇನೆ. ನಾನು ಅದಕ್ಕಾಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಬಳಿ ಯೂಟ್ಯೂಬ್ ಚಾನೆಲ್ ಇದೆ. ಅದರ ಕೆಲಸ ಮುಗಿದ ಬಳಿಕ ಸೋಪ್ ಮಾರಾಟ ಮಾಡುತ್ತೇನೆ. ನನ್ನ ಮಗಳಿಗಾಗಿ ನಾನು ಬದುಕುತ್ತಿದ್ದೇನೆ. ಸ್ವತಂತ್ರ ವ್ಯಕ್ತಿಯಾಗಿ ಇರಲು ಹೆಮ್ಮೆ ಇದೆ ಎಂದು ಐಶ್ವರ್ಯಾ ತಿಳಿಸಿದರು. (ಏಜೆನ್ಸೀಸ್​)

    ಬಿಕಿನಿ ಫೋಟೋ-ವಿಡಿಯೋ ಹರಿಬಿಟ್ಟ ನಟಿ ಶ್ವೇತಾ ಪ್ರಸಾದ್​! ನೆಟ್ಟಿಗರ ಕಾಮೆಂಟ್ ಹೀಗಿದೆ ನೋಡಿ

    ಬಾಲಕಿಯರಿಬ್ಬರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ ಹಿರಿಯರು: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಸವಿನಿದ್ದೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ಕೊಟ್ಟ ಎಸಿಬಿ: ರಾಜ್ಯದ 80 ಕಡೆಗಳಲ್ಲಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts