ಹೈದರಾಬಾದ್: ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಸಂಗತಿ 2021ರಲ್ಲಿ ಭಾರೀ ಸುದ್ದಿಯಾಯಿತು. ದಾಂಪತ್ಯ ಜೀವನಕ್ಕೆ ಕಳೆದ ಅಕ್ಟೋಬರ್ 2ರಂದು ಇಬ್ಬರು ಅಂತ್ಯವಾಡಿದ್ದು, ಅಂದಿನಿಂದ ಇಬ್ಬರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಸಮಂತಾ ಮತ್ತು ನಾಗಚೈತನ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ನಡುವೆ ನಾಗಚೈತನ್ಯ ಎರಡನೇ ಮದುವೆ ರೆಡಿಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದು ನಿಜನಾ? ಅಥವಾ ಸುಳ್ಳಾ? ಎಂಬ ಅಭಿಮಾನಿಗಳ ಗೊಂದಲಕ್ಕೆ ಉತ್ತರ ಇಲ್ಲಿದೆ.
ಈ ಬಾರಿ ಸಿನಿಮಾ ನಟಿಯರ ಸಹವಾಸವೇ ಬೇಡವೆಂಬ ನಿರ್ಧಾರಕ್ಕೆ ಬಂದಿರುವ ನಾಗಚೈತನ್ಯ ನಟಿಯಲ್ಲದ, ಹೊರಗಿನ ಸಂಬಂಧ ಬೆಳೆಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ಅದಕ್ಕೆಲ್ಲ ತಯಾರಿಯು ನಡೆಯುತ್ತಿದೆ ಎಂಬ ಸುದ್ದಿ ಟಾಲಿವುಡ್ ಗಲ್ಲಿಯಿಂದ ಕೇಳಿಬರುತ್ತಿದೆ.
ಈ ಸುದ್ದಿ ನಿಜನಾ? ಅಥವಾ ವದಂತಿನಾ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವವಾಗಿದೆ. ಆದರೆ, ತೆಲುಗಿನ ಮುಂಚೂಣಿ ವೆಬ್ಪೋರ್ಟಲ್ ಒಂದರ ಪ್ರಕಾರ ಈ ಸುದ್ದಿ ನಿಜ. ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಕೇಸ್ ಇನ್ನು ನ್ಯಾಯಾಲಯದಲ್ಲಿ ನಡೆಯುತ್ತಿದೆ. ಅದು ಇನ್ನು ಅಂತಿಮ ಹಂತಕ್ಕೆ ಬರಬೇಕಿದೆ. ಇತ್ತ ನಾಗಾರ್ಜುನ ಅವರು ನಾಗಚೈತನ್ಯ ಅವರಿಗೆ ಸೂಕ್ತವಾದ ವಧು ಅನ್ವೇಷಣೆಯಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಬಹುಕಾಲದಿಂದ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಸಪ್ತಪದಿ ತುಳಿದಿದ್ದರು. ನಾಲ್ಕು ದಾಂಪತ್ಯ ಜೀವನ ತುಂಬುವ ಮುನ್ನವೇ 2021ರ ಅಕ್ಟೋಬರ್ 2ರಂದು ತಾರಾ ದಂಪತಿ ಡಿವೋರ್ಸ್ ಘೋಷಣೆ ಮಾಡಿದರು.
ಇನ್ನು ನಾಗಾಚೈತನ್ಯ ಮದುವೆಯಾಗಲು ಸಮಂತಾರೇ ಮೊದಲನೇ ಆಯ್ಕೆಯಲ್ಲ. ಈ ಹಿಂದೆ ಶ್ರುತಿ ಹಾಸನ್ ಜತೆ ಗಾಢವಾದ ಪ್ರೀತಿಯಲ್ಲಿ ಬಿದ್ದಿದ್ದರು. ಶ್ರುತಿ ಜತೆ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಇಬ್ಬರ ಲವ್ ಬ್ರೇಕಪ್ ಆಯಿತು.
ಇದಲ್ಲದೆ, ನಾಗಚೈತನ್ಯ ಅವರು ಮಜಿಲಿ ಚಿತ್ರ ಸಹನಟಿ ದಿವ್ಯಾಂಶ ಕೌಸಿಕ್ ಜತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ನಾಗಚೈತನ್ಯ ದಿವ್ಯಾಂಶರನ್ನು ಮದುವೆಯಾಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ. ಸದ್ಯ ಮದುವೆ ವಿಚಾರ ಟಾಲಿವುಡ್ ಗಲ್ಲಿಯಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಈ ವಿಚಾರಕ್ಕೆ ಅಕ್ಕಿನೇನಿ ಕುಟುಂಬ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
ಮೂರೇ ತಿಂಗಳಲ್ಲಿ 2 ಲಕ್ಷ ಸಬ್ಸ್ಕ್ರೈಬರ್ಸ್ ಕಳೆದುಕೊಂಡ ನೆಟ್ಫ್ಲಿಕ್ಸ್: ಕಾರಣ ಹೀಗಿದೆ…
ಕರೊನಾ ಮುಗಿದಿಲ್ಲ, ಮತ್ತೆ ನಿರ್ಬಂಧ ಜಾರಿ ಪರಿಸ್ಥಿತಿ ಬಂದಿಲ್ಲ: ಸಚಿವ ಡಾ.ಸುಧಾಕರ್
ಅಲ್ಲು ಅರ್ಜುನ್ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್ ಕೇಳಿದ್ರೆ ಫ್ಯಾನ್ಸ್ ಥ್ರಿಲ್