More

    ಕರೊನಾ‌ ಮುಗಿದಿಲ್ಲ, ಮತ್ತೆ ನಿರ್ಬಂಧ ಜಾರಿ ಪರಿಸ್ಥಿತಿ ಬಂದಿಲ್ಲ: ಸಚಿವ ಡಾ.ಸುಧಾಕರ್

    ಬೆಂಗಳೂರು: ಕರೊನಾ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿದ್ದರೂ ಪೂರ್ಣ ಮುಗಿದಿಲ್ಲ. ಆದರೆ ಹಂತ‌ ಹಂತವಾಗಿ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸುವ ಪರಿಸ್ಥಿತಿ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸದಾಶಿವ ನಗರದ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಬೇರೆ ಕೆಲವು ದೇಶಗಳಲ್ಲಿ ನಾಲ್ಕನೇ ಅಲೆ ಪ್ರವೇಶಿಸಿದೆ. ಸೋಂಕಿನ ತೀವ್ರತೆ, ಆಸ್ಪತ್ರೆಗೆ ದಾಖಲೀಕರಣ ಪ್ರಮಾಣ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ ಎಂದರು.

    ದೆಹಲಿ ಸೇರಿ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ನಾಲ್ಕನೇ ಅಲೆಯ ಅಥವಾ ಬೇರೆ ಯಾವುದಾದರೂ ಕಾರಣಗಳಿವೆಯೇ? ಎನ್ನುವುದು ಖಚಿತಪಟ್ಟಿಲ್ಲ. ಇಲಾಖೆ ಪ್ರಗತಿ ಪರಿಶೀಲನಾ ಸಭೆ ಇಂದು ನಡೆಸಲಿದ್ದು, ಸೋಂಕಿನ ಸ್ಥಿತಿಗತಿ, ಸಂಭಾವ್ಯ ನಾಲ್ಕನೇ ಅಲೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಾಮರ್ಶಿಸುವೆ ಎಂದರು.

    ಜೂನ್-ಜುಲೈನಲ್ಲಿ ರಾಜ್ಯಕ್ಕೆ ನಾಲ್ಕನೇ ಅಲೆ ಪ್ರವೇಶ ಸಾಧ್ಯತೆ ಬಗ್ಗೆ ತಜ್ಞರು ನೀಡಿದಂತೆ ಮಾಸ್ಕ್ ಧರಿಸಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡಿರುವ ಜತೆಗೆ ಸೋಂಕು ಇಳಿಮುಖವಾಗಿರುವ ಕಾರಣ ಜನರು ಈ ಸಲಹೆಗಳನ್ನು ಪಾಲಿಸುತ್ತಿಲ್ಲ.

    ವೈಯಕ್ತಿಕ ಬೇರೆಯವರ ಆರೋಗ್ಯದ ಹಿತದೃಷ್ಟಿಯಿಂದ ಒಳಾಂಗಣ, ನಿಕಟ ಸಂಪರ್ಕದ ವೇಳೆ ಮಾಸ್ಕ್ ಧರಿಸುವುದು ಸೂಕ್ತ. ಉಳಿದ 30 ಲಕ್ಷ ಜನರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಅರ್ಹರು ಮೂರನೇ ಡೋಸ್ ಪಡೆಯಲು ವಿಳಂಬ ಮಾಡಬಾರದು ಎಂದು ಡಾ.ಸುಧಾಕರ್ ಮನವಿ ಮಾಡಿದರು.

    Koo App

    ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ವಿವಿಧ ಯೋಜನೆಗಳ ಅನುಷ್ಠಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಚಿಕಿತ್ಸಾ ವೆಚ್ಚ ಪಾವತಿ, ಸಂಭಾವ್ಯ ಕೊರೊನಾ 4ನೇ ಅಲೆಗೆ ಅಗತ್ಯ ಮುಂಜಾಗ್ರತಾ ಕ್ರಮ ಹಾಗು ಪೂರ್ವಸಿದ್ಧತೆ ಸೇರಿದಂತೆ ಹಲವು ವಿಷಯಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

    Dr. Sudhakar K (@drsudhakark.official) 20 Apr 2022

    ಕರೊನಾ‌ ಮುಗಿದಿಲ್ಲ, ಮತ್ತೆ ನಿರ್ಬಂಧ ಜಾರಿ ಪರಿಸ್ಥಿತಿ ಬಂದಿಲ್ಲ: ಸಚಿವ ಡಾ.ಸುಧಾಕರ್

    ಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾರೆ ಶಿವಮೊಗ್ಗದ ಬಾಲಕಿ! ಅತ್ತೆಯ ಪ್ರಭಾವ… ಸುಖ-ವೈಭೋಗಕ್ಕೆ ವಿದಾಯ

    ತಮಕೂರಲ್ಲಿ ಟಿ.ಬಿ. ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಬೆಂಗಳೂರು ಆಸ್ಪತ್ರೆಗೆ ಮಾಜಿ ಸಚಿವ ದಾಖಲು

    https://www.vijayavani.net/a-shootout-in-the-theater-watching-kgap-2-cinema/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts