More

    ವಿದ್ಯಾಭ್ಯಾಸದ ಜತೆಜತೆಗೆ ಟೀ ಸ್ಟಾರ್ಟ್​ಅಪ್​ ಆರಂಭಿಸಿದ ಬಿ.ಟೆಕ್​ ವಿದ್ಯಾರ್ಥಿನಿ: ಚಾಯ್​ವಾಲಿಯ ಸ್ಫೂರ್ತಿಯ ಕತೆಯಿದು

    ಪಟನಾ: ಭಾರತದಲ್ಲಿನ ಪ್ರಖ್ಯಾತ ಚಾಯ್​ವಾಲಾಗಳ ಬಗ್ಗೆ ನಾವು ಕೇಳಿದ್ದೇವೆ. ಅಲ್ಲದೆ, ಪ್ರತಿಯೊಬ್ಬ ಚಹಾ ಪ್ರೇಮಿಗೂ ಓರ್ವ ಫೇವರಿಟ್​ ಚಾಯ್​ವಾಲಾ ಇದ್ದೇ ಇರುತ್ತಾನೆ. ಇದೀಗ ಈ ಪಟ್ಟಿಗೆ ಮತ್ತೊಬ್ಬರು ಸೇರಿದ್ದಾರೆ. ಆದರೆ, ಇವರು ಚಾಯ್​ವಾಲಾ ಅಲ್ಲ ಚಾಯ್​ವಾಲಿ. ಈ ಖ್ಯಾತ ಚಾಯ್​ವಾಲಿ ಹರಿಯಾಣ ಮೂಲದವರಾಗಿದ್ದು, ಬಿ.ಟೆಕ್​ ವಿದ್ಯಾರ್ಥಿನಿ ಎಂಬುದೇ ವಿಶೇಷ.

    ವಿದ್ಯಾರ್ಥಿನಿಯ ಹೆಸರು ವರ್ತಿಕಾ ಸಿಂಗ್​. ಈಕೆ ಬಿಹಾರದಲ್ಲಿ ಬಿ.ಟೆಕ್​ ಮಾಡುತ್ತಿದ್ದಾರೆ. ತನ್ನದೇಯಾದ ಸ್ಟಾರ್ಟ್​ಅಪ್​ ಮಾಡಬೇಕೆಂಬುದು ಈಕೆ ಕನಸಾಗಿತ್ತು. ಆದರೆ, ಬಿ.ಟೆಕ್​ ಮುಗಿಯುವುದಕ್ಕೆ ಇನ್ನು ನಾಲ್ಕು ವರ್ಷಗಳು ಇರುವುದರಿಂದ ಅಲ್ಲಿಯವರೆಗೂ ಕಾಯಲಾರದೇ ಬಿ.ಟೆಕ್​ ಚಾಯ್​ವಾಲಿ ಹೆಸರಿನಲ್ಲಿ ಟೀ ಸ್ಟಾರ್​ ಆರಂಭಿಸುವ ಮೂಲಕ ತಮ್ಮ ಸ್ಟಾರ್ಟ್​ಅಪ್​ ಕನಸನ್ನು ವರ್ತಿಕಾ ನನಸು ಮಾಡಿಕೊಂಡಿದ್ದಾರೆ. ಹರಿಯಾಣದ ಫರೀದಾಬಾದ್​ನಲ್ಲಿ ವರ್ತಿಕಾ ಟೀ ಸ್ಟಾಲ್​ ಇಟ್ಟುಕೊಂಡಿದ್ದಾರೆ.

    ವರ್ತಿಕಾ ಅವರ ವಿಡಿಯೋವನ್ನು ಸ್ವ್ಯಾಗ್​ ಸೆ ಡಾಕ್ಟರ್​ (Swag Se Doctor) ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ವಿಡಿಯೋದಲ್ಲಿ ವರ್ತಿಕಾ ತನ್ನ ಟೀ ಸ್ಟಾಲ್​ ಬಗ್ಗೆ ಮಾಹಿತಿ ನೀಡಿದ್ದಾರೆ. ಫರೀದಾಬಾದ್​ನ ಗ್ರೀನ್​ ಫೀಲ್ಡ್​ ಬಳಿ ಅಳವಡಿಸಿರುವುದಾಗಿ ಮತ್ತು ಬೆಳಗ್ಗೆ 5.30ರಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ ಎಂದು ವರ್ತಿಕಾ ತಿಳಿಸಿದ್ದಾರೆ.

    ಅಂದಹಾಗೆ ವರ್ತಿಕಾ ಅವರು ವಿವಿಧ ರೀತಿಯ ಚಹಾಗಳನ್ನು ಮಾರಾಟ ಮಾಡುತ್ತಾರೆ. ಮಸಾಲಾ ಮತ್ತು ನಿಂಬೆ ಹಣ್ಣಿನ ಚಹಾಗೆ ತಲಾ 20 ರೂಪಾಯಿ ಚಾರ್ಜ್​ ಮಾಡಿದ್ದು, ಸಾಮಾನ್ಯ ಚಹಾಗೆ 10 ರೂ. ಶುಲ್ಖ ನಿಗದಿ ಮಾಡಿದ್ದಾರೆ. ಸಣ್ಣ ಸ್ಟೌ ಮೇಲೆ ಅಲ್ಯುಮಿನಿಯಂ ಕ್ಯಾಟಲ್​ ಇಡಲಾಗಿದ್ದು, ಸಾಕಷ್ಟು ಜನರು ಟೀ ಸವಿಲು ವರ್ತಿಕಾ ಅವರ ಅಂಗಡಿ ಬಳಿ ಬರುತ್ತಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವರ್ತಿಕಾ ಅವರ ವಿಡಿಯೋ ವೈರಲ್​ ಆಗಿದ್ದು, ಇಲ್ಲಿಯವರೆಗೂ 56 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವರ್ತಿಕಾರನ್ನು ಪ್ರಯತ್ನವನ್ನು ಅನೇಕ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ನಿಮ್ಮ ನಗು ಮತ್ತು ಆತ್ಮ ವಿಶ್ವಾಸ ನನಗೆ ಇಷ್ಟವಾಯಿತು ಎಂದು ನೆಟ್ಟಿಗನೊಬ್ಬ ಹೇಳಿದರೆ, ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆಂದು ಇನ್ನೊಬ್ಬ ನೆಟ್ಟಿಗ ಹೇಳಿದ್ದಾರೆ.

    ಇದೇ ವರ್ಷ ಏಪ್ರಿಲ್​ ತಿಂಗಳಲ್ಲಿ ಮತ್ತೊಬ್ಬ ಚಾಯ್​ವಾಲಿ ಖ್ಯಾತಿ ಗಳಿಸಿದರು. ಆ ಚಾಯ್​ವಾಲಿ ಹೆಸರು ಪ್ರಿಯಾಂಕಾ ಗುಪ್ತ. 2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ಮಧ್ಯಪ್ರದೇಶದ ಖ್ಯಾತ ಚಾಯ್​ವಾಲಾ ಹಾಗೂ ಎಂಬಿಎ ಪದವೀಧರ ಪ್ರಫುಲ್​ ಬಿಲ್ಲೋರ್ ಅವರಿಂದ ಸ್ಪೂರ್ತಿಗೊಂಡಿರುವ ಪ್ರಿಯಾಂಕಾ, ಹಿಂಜರಿಕೆಯನ್ನು ಬಿಟ್ಟು, ಟೀ ಅಂಗಡಿ ಸ್ಥಾಪಿಸಿ ಸ್ವಂತ ಕಾಲ ಮೇಲೆ ನಿಂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯೋಗ ಸಿಗಲಿಲ್ಲ. ಪ್ರಫುಲ್ಲ್​ ಬಿಲ್ಲೋರ್​ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ ಎಂದು ಹೇಳಿದ್ದಾರೆ. 24 ವರ್ಷದ ಪ್ರಿಯಾಂಕಾ ಕುಲ್ಹದ್​ ಚಾಯ್​ನಿಂದ ಪಾನ್​ ಚಾಯ್​ವರೆಗೂ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡುತ್ತಾರೆ. ಒಂದು ಕಪ್​ ಚಹಾ 15 ರಿಂದ 20 ರೂ. ಶ್ರೇಣಿಯಲ್ಲಿರುತ್ತದೆ.

    ಇನ್ನು ಇನ್ನೂ ಪ್ರಫುಲ್​ ಬಿಲ್ಲೋರ್ ಬಗ್ಗೆ ಹೇಳುವುದಾದರೆ, ಮಧ್ಯಪ್ರದೇಶದ ಪ್ರಫುಲ್​ ಸದ್ಯ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದು, ದೇಶಾದ್ಯಂತ ಎಂಬಿಎ ಚಾಯ್​ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ. ಕೊನೆಗೆ ಒಂದು ನಿರ್ಧಾರಕ್ಕೆ ಬರುವ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್​ನ ರೆಸ್ಟೋರೆಂಟ್​ ಒಂದರಲ್ಲಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಿರುತ್ತಾರೆ. ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್​ ಕೊನೆಗೆ ತನ್ನದೇ ಸ್ವಂತ ಟೀ ಶಾಪ್​ ತೆರೆಯುತ್ತಾರೆ. ಆರಂಭದಲ್ಲಿ ವ್ಯಾಪಾರ ಇಲ್ಲದೇ ಸಮಸ್ಯೆ ಎದುರಾದರೂ ನಂತರದ ದಿನಗಳಲ್ಲಿ ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ. (ಏಜೆನ್ಸೀಸ್​)

    ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

    ಎಂಬಿಎ ಬಿಟ್ಟು ಟೀ ಮಾರಾಟಕ್ಕಿಳಿದ ಯುವಕನ ಯಶೋಗಾಥೆ ಕೇಳಿದ್ರೆ ಫಿದಾ ಆಗೋದು ಗ್ಯಾರೆಂಟಿ!

    ಮದುವೆ ಎಂದರೇನು? ವಿದ್ಯಾರ್ಥಿ ಬರೆದ ಉತ್ತರ ನೋಡಿ ತಬ್ಬಿಬ್ಬಾದ ಶಿಕ್ಷಕ! ವೈರಲ್​ ಆಯ್ತು ಉತ್ತರ ಪತ್ರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts