More

    ಭಾರತದಲ್ಲಿ ಕರೊನಾ ಸಂಕಷ್ಟ… ಚೀನಾದಲ್ಲಿ ಕಾಂಡೋಮ್​ಗಳ ದಾಖಲೆ ಮಾರಾಟ: ಇಲ್ಲಿದೆ ಅಚ್ಚರಿಯ ಕಾರಣ..!

    ಬೀಜಿಂಗ್​: ಚೀನಾದ ವುಹಾನ್​ನಲ್ಲಿ ಸ್ಫೋಟಗೊಂಡ ಮಹಾಮಾರಿ ಕರೊನಾ ವೈರಸ್​ ಇಡೀ ವಿಶ್ವವನ್ನೇ ಆವರಿಸಿದೆ. ಭಾರತದಲ್ಲಿ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದ್ದು, ರಕ್ಷಣೆಗಾಗಿ ದೇಶವು ಮತ್ತೊಮ್ಮೆ ಲಾಕ್​ಡೌನ್​ ಮೊರೆ ಹೋಗಿದೆ. ಇದರಿಂದ ಜನರ ಜೀವನವು ಸಂಕಷ್ಟದಲ್ಲಿದೆ.

    ಆದರೆ, ಕರೊನಾ ಸ್ಫೋಟಗೊಂಡ ಚೀನಾದಲ್ಲಿ ಇದೇ ಸಮಯದಲ್ಲಿ ಕಾಂಡೋಮ್​ಗಳು ದಾಖಲೆಯಲ್ಲಿ ಮಾರಾಟವಾಗುತ್ತಿದೆ. ಈ ಬಗ್ಗೆ ಸರಕು ಮಾರಾಟದ ದೈತ್ಯ ಕಂಪನಿ ರೆಕ್ಕಿಟ್ ಬೆನ್‌ಕಿಸರ್ ಮಾಹಿತಿ ನೀಡಿದ್ದು, ಚೀನಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಕಾಂಡೋಮ್​ಗಳು ಭಾರಿ ಜೋರಾಗಿ ಮಾರಾಟವಾಗುತ್ತಿದೆ. ದಿನದಿಂದ ದಿನಕ್ಕೆ ಕಾಂಡೋಮ್​ಗಳ ಕಪಾಟು ಖಾಲಿಯಾಗುತ್ತಿವೆ.

    ಇದಕ್ಕೆ ಕಾರಣ ಚೀನಾದಲ್ಲಿ ಕರೊನಾ ಕಟ್ಟಿಹಾಕಲು ಇದ್ದ ಹೆಚ್ಚಿನ ನಿಯಮಗಳನ್ನು ಕೈಬಿಡಲಾಗಿದೆ. ಸಾಮಾಜಿಕ ಅಂತರ ಇಲ್ಲವಾಗಿದೆ. ಲಾಕ್​ಡೌನ್​ ನಿಯಮಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಸೆಕ್ಸ್​ನಲ್ಲಿ ತೊಡಗಲು ಮುಕ್ತ ಅವಕಾಶ ದೊರೆತಿದೆ. ಹೀಗಾಗಿಯೇ ಅಲ್ಲಿನ ಮಂದಿ ಕಾಂಡೋಮ್​ಗಾಗಿ ಮುಗಿಬಿದ್ದಿದ್ದು, ಡುರೆಕ್ಸ್​ ಕಾಂಡೋಮ್​ ದಾಖಲೆ ಸಂಖ್ಯೆಯಲ್ಲಿ ಬಿಕರಿಯಾಗುತ್ತಿದೆ. ಚೀನಾ ಮಾತ್ರವಲ್ಲದೆ, ಇನ್ನಿತರ ದೇಶಗಳಲ್ಲಿಯು ಲಾಕ್​ಡೌನ್​ ನಿಯಮ ಸಡಿಲಗೊಳಿಸಲಾಗಿದೆ. ಆದರೆ, ಭಾರತದಲ್ಲಿ ಮಾತ್ರ ಕರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ಹಲವು ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ.

    ಬೇರೆ ದೇಶಗಳಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಗೊಳಿಸಿದರೆ, ಕಾಂಡೋಮ್​ ಮಾರಾಟದಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಡುರೆಕ್ಸ್​ ಒಡೆತನ ಹೊಂದಿರುವ ರೆಕ್ಕಿಟ್ ಬೆನ್‌ಕಿಸರ್ ಕಂಪನಿ ಹೊಂದಿದೆ. ಕಳೆದ ವರ್ಷ ಮಹಾಮಾರಿ ವೈರಸ್​ ಸ್ಫೋಟಗೊಂಡಾಗ ಡುರೆಕ್ಸ್​ ತೀವ್ರ ಪ್ರಮಾಣದ ನಷ್ಟ ಅನುಭವಿಸಿತ್ತು. ಕರೊನಾ ಭಯಕ್ಕೆ ಕಾಂಡೋಮ್​ ಕೊಳ್ಳುವವರೇ ಇರಲಿಲ್ಲ. ಅದಕ್ಕೆ ಕಾರಣ ಸಾಮಾಜಿಕ ಅಂತರ ಮತ್ತು ಕೆಲವು ದೇಶಗಳಲ್ಲಿ ಸೆಕ್ಸ್​ನಲ್ಲಿ ತೊಡಗುವುದನ್ನು ಸಹ ಬ್ಯಾನ್​ ಮಾಡಲಾಗಿತ್ತು. ಇದೀಗ ಲಾಕ್​ಡೌನ್​ ನಿಯಮಗಳ ಸಡಿಲಗೊಂಡಿರುವುದರಿಂದ ಕಾಮಡೋಮ್​ ಮಾರಾಟದಲ್ಲಿ ಒಂದೇ ಬಾರಿಗೆ ಶೇ. 12 ರಷ್ಟು ಏರಿಕೆಯಾಗಿದೆ.

    ಲೈಂಗಿಕ ಸ್ವಾಸ್ಥ್ಯದ ಉತ್ಪನ್ನಗಳ ಮಾರಾಟದಲ್ಲಿಯೂ ಚೀನಾ ಸೇರಿದಂತೆ ಯು.ಎಸ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಏರಿಕೆ ಕಂಡಿವೆ. ಉಳಿದಂತೆ ಸೋಂಕುನಿವಾರಕ ಉತ್ಪನ್ನಗಳಾದ ಡೆಟಾಲ್ ಮತ್ತು ಲೈಸೋಲ್ ಮಾರಾಟವು ಹೆಚ್ಚಾಗಿದೆ. ಏಕೆಂದರೆ ಗ್ರಾಹಕರು ಕೋವಿಡ್ -19 ಹರಡುವುದನ್ನು ತಪ್ಪಿಸಲು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ: 6 ತಿಂಗಳಿಂದ ಮುಚ್ಚಿಟ್ಟಿದ್ದ ರಹಸ್ಯ ಬಯಲು!

    ಡಬ್ಲ್ಯುಡಬ್ಲ್ಯುಇ ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾದ ಭಾರತದ ಕುವರಿ! ಸಂಜನಾರ ಇಂಟೆರೆಸ್ಟಿಂಗ್​ ಮಾಹಿತಿ ಇಲ್ಲಿದೆ

    ಕೋವಿಡ್​ ಎದುರಿಸಲು ಸಹಾಯ ಕೋರಿದ ಮಹಿಳೆಯರಿಗೆ ಬಂದ ಸಂದೇಶಗಳು ಬೆಚ್ಚಿಬೀಳಿಸುವಂತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts