More

    ಆಫ್ಘಾನ್​ನಲ್ಲಿ ಅರಾಜಕತೆ: 1 ಬಾಟಲ್ ನೀರಿಗೆ​ 3000 ರೂ. ಆದ್ರೆ, ಒಂದು ಪ್ಲೇಟ್​ ಊಟದ ಬೆಲೆ ತಲೆ ತಿರುಗುವಂತಿದೆ!

    ಕಾಬುಲ್​: ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಪಡಿಸಿಕೊಂಡಾಗಿನಿಂದ ಶಾಂತಿ ನೆಲೆಸಿದ್ದ ಆಫ್ಘಾನ್ ನೆಲದ ಚಿತ್ರಣವೇ ಬದಲಾಗಿದ್ದು, ಎಲ್ಲೆಡೆ ಮದ್ದು ಗುಂಡುಗಳ ಸದ್ದಿನೊಂದಿಗೆ ಅಕ್ಷರಶಃ ಕ್ರೌರ್ಯ ತುಂಬಿದ ಭೂಮಿಯಾಗಿ ಆಫ್ಘಾನ್​ ಮಾರ್ಪಾಡಾಗಿದೆ. ತಾಲಿಬಾನಿ ಉಗ್ರರು ರಕ್ತಚರಿತ್ರೆ ಸೃಷ್ಟಿಸಿದ್ದು, ಅಲ್ಲಿನ ಜನರು ದಿನನಿತ್ಯ ಭಯದಲ್ಲಿ ದಿನದೂಡುವಂತಾಗಿದೆ. ದೈನಂದಿನ ಚಟುವಟಿಕೆಗಳೇ ಸ್ಥಬ್ಧವಾಗಿದ್ದು, ಆಫ್ಘಾನ್​ನಲ್ಲಿ ಅನ್ನ-ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಅಲ್ಲಿನ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳು ಆಫ್ಘಾನ್​ನಲ್ಲಿರುವ ಜನರಿಗೆ ನರಕಕ್ಕಿಂತಲೂ ಕಡೆಯಾಗುವುದರಲ್ಲಿ ಸಂಶಯವೇ ಇಲ್ಲ.

    ಆಫ್ಘಾನ್​ನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ದೇಶ​ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ಸಾವಿರಾರು ಜನರು ಕಾಬುಲ್​ ಏರ್​ಪೋರ್ಟ್​ನಲ್ಲಿ ತುಂಬಿಕೊಂಡಿದ್ದಾರೆ. ಸುಮಾರು 10 ಲಕ್ಷ ಮಂದಿ ದೇಶ ತೊರೆಯಲು ಬಯಸಿದ್ದಾರೆ. ಆದರೆ, ಇಲ್ಲಿಯವರೆಗೂ 82,300 ಮಂದಿಯನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಅದರಲ್ಲಿ ಅನೇಕ ಮಂದಿ ವಿದೇಶಿಗರೆ ಆಗಿದ್ದಾರೆ.

    ತಮ್ಮ ಸರದಿಯು ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಆಫ್ಘಾನ್​ನ ಸಾಮಾನ್ಯ ಜನರು ಕಾಬುಲ್​ ಏರ್​ಪೋರ್ಟ್​ ಹೊರಭಾಗದಲ್ಲಿ ಆಸೆಯ ಕಣ್ಣುಗಳಿಂದ ಕಾದು ಕುಳಿತಿದ್ದಾರೆ. ಈ ಜನರಲ್ಲಿ ಹಲವರು ವಿಮಾನ ನಿಲ್ದಾಣವನ್ನು ಪ್ರವೇಶಿಸಲು ಕೊಳಕು ಚರಂಡಿಯ ಮೂಲಕ ಹಾದುಹೋಗಲು ಪ್ರಯತ್ನಿಸಿದರು. ವಿಮಾನ ನಿಲ್ದಾಣದ ಈ ಭಾಗದಲ್ಲಿ ಯಾವುದೇ ವ್ಯಕ್ತಿಯು 10 ನಿಮಿಷಗಳ ಕಾಲ ನಿಲ್ಲುವುದು ಕಷ್ಟ, ಆದರೆ ಈ ಜನರು ಕಳೆದ ಹಲವು ದಿನಗಳಿಂದ ಕೊಳಕು ಚರಂಡಿಯ ಮುಂದೆಯೇ ನಿಂತಿದ್ದು, ವಿದೇಶಕ್ಕೆ ಹಾರಿ ನೆಮ್ಮದಿಯ ಜೀವನ ನಡೆಸುವ ಇಂಗಿತ ಇಟ್ಟುಕೊಂಡಿದ್ದಾರೆ.

    ಇನ್ನು ವಿಮಾನ ನಿಲ್ದಾಣದ ಬಳಿಯಿರುವ ಅನೇಕ ಜನರ ಬಳಿ ಆಹಾರ ಅಥವಾ ನೀರನ್ನು ಕೊಳ್ಳುವಷ್ಟು ಹಣವು ಇಲ್ಲ. ಕಾಬುಲ್​ ಹೊರಭಾಗದಲ್ಲಿ ಒಂದು ಬಾಟಲ್​ ನೀರಿನ ಬೆಲೆ ದುಬಾರಿ ಆಗಿದೆ. ಎಷ್ಟಿದೆ ಅಂದರೆ ಅದರ ಬೆಲೆ ಕೇಳಿದ್ರೆ ತೆಗೆದುಕೊಳ್ಳುವ ಯೋಚನೆಯನ್ನು ಮಾಡುವುದಿಲ್ಲ. ಒಂದು ಬಾಟಲ್​ ನೀರಿನ ಬೆಲೆ 40 ಡಾಲರ್​ ಇದೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 3000 ರೂಪಾಯಿ. ಇನ್ನು ಊಟ ಅಂತೂ ಕೇಳುವ ಹಾಗೇ ಇಲ್ಲ. ಅಷ್ಟೊಂದು ದುಬಾರಿಯಾಗಿದೆ. ಒಂದು ಪ್ಲೇಟ್​ ಊಟಕ್ಕೆ 100 ಡಾಲರ್​ ಬೆಲೆ ಇದೆ. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 7 ಸಾವಿರ ರೂಪಾಯಿ ಆಗಿದೆ. ಯಾರ ಹತ್ತಿರ ಡಾಲರ್​ ಇದೆಯೋ ಅವರು ಮಾತ್ರ ನೀರು ಮತ್ತು ಆಹಾರವನ್ನು ಕೊಳ್ಳುತ್ತಿದ್ದು, ನಿಜಕ್ಕೂ ಪರಿಸ್ಥಿತಿ ಹೇಳತೀರದ್ದಾಗಿದೆ.

    ಮಾಧ್ಯಮ ವರದಿಗಳ ಪ್ರಕಾರ 50 ಸಾವಿರಕ್ಕೂ ಹೆಚ್ಚು ಮಂದಿ ಈಗಲೂ ಕಾಬುಲ್​ ವಿಮಾನ ನಿಲ್ದಾಣ ಹೊರಭಾಗದಲ್ಲಿ ಕಾದು ಕುಳಿತಿದ್ದಾರೆ. ಇದರಿಂದ ಏರ್​ಪೋರ್ಟ್​ ತಲುಪುವುದು ಸಪ್ತ ಸಾಗರ ದಾಟುವುದಷ್ಟೇ ಕಷ್ಟಕರವಾಗಿದೆ. ಏಕೆಂದರೆ ಅಷ್ಟೊಂದು ಟ್ರಾಫಿಕ್​ ಜಾಮ್​ ಸ್ಥಳದಲ್ಲಿ ಉಂಟಾಗಿದೆ. ಇನ್ನು ಸ್ಥಳಾಂತರ ಕೆಲಸ ಹಗಲು-ರಾತ್ರಿಯೆನ್ನದೇ ನಿರಂತರವಾಗಿ ಸಾಗುತ್ತಿದೆ. ಆಫ್ಘಾನ್​ನಿಂದ ಮೊದಲು ಕಾಲ್ಕಿಳಬೇಕೆಂದುಕೊಂಡಿರುವ ಮಂದಿ ಏರ್​ಪೋರ್ಟ್​ ರನ್​ವೇ ಮೇಲೆ ತಂಡೋಪತಂಡವಾಗಿ ಸೇರಿಕೊಂಡಿದ್ದಾರೆ. ಈ ಜನರು ಕಾಬುಲ್​ ವಿಮಾನ ನಿಲ್ದಾಣದ ಒಳಗಡೆ ಇರುವುದರಿಂದ ಅದೃಷ್ಟಶಾಲಿಗಳು ಎನ್ನಬಹುದಾಗಿದೆ.

    ವಿಮಾನ ನಿಲ್ದಾಣದ ಹೊರಗಿನ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಏರ್​ಪೋರ್ಟ್​ ಒಳಗೆ ಹೋಗಲು ಸಾವಿರಾರು ಮಂದಿ ಕಾದು ಕುಳಿತಿದ್ದಾರೆ. ಈ ಬೃಹತ್ ಗುಂಪಿನಲ್ಲಿ, ಕೊರೊನಾವೈರಸ್ ಸೋಂಕಿಗೆ ಯಾರೂ ಹೆದರುವುದಿಲ್ಲ. ಆದರೆ, ಅವರಿಗೆ ತಾಲಿಬಾನ್ ಅಂದ್ರೆ ಮಾತ್ರ ನಿದ್ರೆಯಲ್ಲೂ ಭಯ ಬೀತರಾಗುತ್ತದೆ. ಅಷ್ಟೊಂದು ಕ್ರೂರಿಗಳಾಗಿರುವ ತಾಲಿಬಾನಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಆಸೆಯಿಂದ ವಿಮಾನ ನಿಲ್ದಾಣದ ಮುಂದೆಯೇ ತಮ್ಮ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. (ಏಜೆನ್ಸೀಸ್​)

    ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ನ್ಯಾಯಮೂರ್ತಿಗಳ ಹೆಸರಿಗೆ ಕೇಂದ್ರದ ಅನುಮೋದನೆ

    ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ವರ್ಗಾವಣೆ: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಸ್ಟೆಫೆನ್​ ರವೀಂದ್ರ ನೇಮಕ!

    11 ಹೊಸ ಸಂಜೆ ಕಾಲೇಜು – ಬಿಕಾಂ, ಬಿಸಿಎ ಪ್ರವೇಶಕ್ಕೆ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts