More

    ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

    ಹೈದರಾಬಾದ್​: ಹೈದರಾಬಾದ್​ನ ಒಂದೇ ಕ್ಷೇತ್ರದ ವಿವಿಧ ಭಾಗಗಳಿಂದ ನಾಲ್ವರು ಮಹಿಳೆಯರು ನಾಪತ್ತೆಯಾಗಿರುವುದಾಗಿ ಭಾನುವಾರ ಒಂದೇ ದಿನ ದೂರು ದಾಖಲಾಗಿರುವುದು ಸ್ಥಳೀಯ ಜನರನ್ನು ಭಾರೀ ಆತಂಕಕ್ಕೆ ದೂಡಿದೆ.

    ಹೈದರಾಬಾದ್​ನ ಮಲ್ಕಜ್​ಗಿರಿ ಕ್ಷೇತ್ರದ ವಿವಿಧ ಭಾಗಗಳಿಂದ ಮಹಿಳೆಯರು ಪತ್ತೆಯಾಗಿರುವುದಾಗಿ ನಾರೇದ್​ ಮೆಹ್ತಾ ವೃತ್ತ ನಿರೀಕ್ಷಕ ನರಸಿಂಹಸ್ವಾಮಿ ಮಾಹಿತಿ ನೀಡಿದ್ದಾರೆ.

    ಪೊಲೀಸ್​ ಮಾಹಿತಿಯ ಪ್ರಕಾರ ಸಫಿಲ್ಗುಡಾ (ಮುಘಲ್​ ಕಾಲನಿ)ಪೊಲೀಸ್​ ಠಾಣಾ ವ್ಯಾಪ್ತಿಯ ನಿವಾಸಿ ಠಾಕೂರ್​ ರಾಜೇಶ್ವರಿ (29) ಮನೆಯನ್ನು ಲಾಕ್​ ಮಾಡಿ ಹೊರಹೋದ ಮಹಿಳೆ ಮರಳಿ ಬರಲೇ ಇಲ್ಲ. ಈ ಸಂಬಂಧ ರಾಜೇಶ್ವರಿ ಪತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಖಾಸಗಿ ಕಂಪನಿ ಉದ್ಯೋಗಿ ನಾಪತ್ತೆ
    ಇಂದಿರಾನೆಹಹರೂ ನಗರದ ಖಾಸಗಿ ಉದ್ಯೋಗಿ ಹರಿಷಾ ಅಲಿಯಾಸ್ ಪಿಂಕಿ (25) ಈ ತಿಂಗಳ 22ರಂದು ಮನೆ ಬಿಟ್ಟು ಹೋದವಳು ಮತ್ತೆ ಬರಲೇ ಇಲ್ಲ. ಆಕೆಯ ಸಹೋದರ ಮಹೇಶ್ ಭಾನುವಾರ ದೂರು ನೀಡಿದರು. ಈ ಸಂಬಂಧ ಮಲ್ಕಜ್ ಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನರ್ಸ್ ನಾಪತ್ತೆ
    ಬಂಜಾರ ಹಿಲ್ಸ್​ನ ರೋಡ್​ ನಂಬರ್​ 10ರಲ್ಲಿರುವ ಆಸ್ಪತ್ರೆಯೊಂದರ ನರ್ಸ್​ ಉದಯಸಿರಿ (22) ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿರುವ ಪ್ರಕರಣ ಭಾನುವಾರ ದೂರು ನೀಡಿದ ಬಳಿಕ ಬೆಳಕಿಗೆ ಬಂದಿದೆ. ಖಮ್ಮಮ್​ ಜಿಲ್ಲೆಯ ನೆಲಕೊಂಡಪಲ್ಲಿ ಗ್ರಾಮದ ನಿವಾಸಿಯಾಗಿರುವ ಉದಯಸಿರಿ, ಕ್ಯಾನ್ಸರ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದಳು. ಇದೇ ತಿಂಗಳ 23ರಂದು ಆಸ್ಪತ್ರೆಗೆ ಹೋದ ಉದಯಸಿರಿ ಮರಳಿ ಬರಲಿಲ್ಲ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಬಾಡಿಗೆ ಮನೆಯಲ್ಲಿದ ಯುವತಿ ಎಲ್ಲಿ ಹೋದಳು?
    ಮತ್ತೊಬ್ಬ ಯುವತಿ ಅರುಣಾ (20) ಎಂಬಾಕೆ ಬಾಡಿಗೆ ಮನೆಯಿಂದಲೇ ನಾಪತ್ತೆ ಆಗಿದ್ದಾಳೆ. ಇಂದಿರಾ ನೆಹರೂ ನಗರದ ಅರುಣಾ ವಾಸವಿದ್ದಳು. ಇದೇ ತಿಂಗಳ 25ರಂದು ಅರುಣಾಳನ್ನು ನೋಡಿ ಬರಲು ತಂದೆ-ತಾಯಿಯಾದ ಬಾಲಯ್ಯ ಮತ್ತು ಕನಕಲಕ್ಷ್ಮೀ ಮನೆಗೆ ತೆರಳಿದ್ದಾರೆ. ಆದರೆ, ಬಾಡಿಗೆ ಮನೆ ಮಾಲೀಕ ಅರುಣಾ ಕೆಲವು ದಿನಗಳಿಂದ ಕಾಣಿಸುತ್ತಿಲ್ಲ ಎಂದು ಹೇಳಲು, ಬೆನ್ನಲ್ಲೇ ಪಾಲಕರು ಠಾಣೆಗೆ ತೆರಳಿ ದೂರು ನೀಡಿದ್ದಾರೆ.

    ಇದೀಗ ಒಂದೇ ದಿನ ನಾಲ್ಕು ನಾಪತ್ತೆ ಪ್ರಕರಣಗಳು ದಾಖಲಾಗಿರುವುದು ಮುತ್ತಿನ ನಗರಿ ಜನರನ್ನು ಆತಂಕಕ್ಕೆ ದೂಡಿದೆ. (ಏಜೆನ್ಸೀಸ್​)

    ದೇಹದ ವಿವಿಧ ಭಾಗದಲ್ಲಿರುವ ಮಚ್ಚೆ ಹಿಂದಿನ ರಹಸ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ..!

    ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್‌ಗೆ!

    ಕೆಕೆಆರ್​ ತಂಡದ ಕೋಡ್​​ ವರ್ಡ್​ ರಹಸ್ಯ ಬಿಚ್ಚಿಟ್ಟು ತೀವ್ರ ಅಸಮಾಧಾನ ಹೊರಹಾಕಿದ ವೀರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts