More

    ಸೀರೆ ಧರಿಸಿ ಬರಲು ವಧುವಿನ ಕೊಠಡಿಗೆ ಹೋದ ವಧು ಮರಳಿ ಬರಲೇ ಇಲ್ಲ: ವರನಿಗೆ ಕಾದಿತ್ತು ಶಾಕ್!​

    ಮದನಪಲ್ಲಿ: ತಾಳಿ ಕಟ್ಟಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ವಧುವೊಬ್ಬಳು ವರನಿಗೆ ಕೈಕೊಟ್ಟು ತನ್ನ ಪ್ರಿಯಕರನನ್ನು ವರಿಸಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.

    ಮದನಪಲ್ಲಿ ಪಟ್ಟಣ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ನರಸಿಂಹ ಪ್ರಕಾರ ಮದನಪಲ್ಲಿ ವಲಯದ ತಟ್ಟಿವರಿಪಲ್ಲಿ ನಿವಾಸಿಗಳಾದ ರಾಮಕೃಷ್ಣ ಮತ್ತು ಮಲ್ಲಿಕಾ ದಂಪತಿಯ ಪುತ್ರ ಸೋನಿಕಾ ಮತ್ತು ಮದನಪಲ್ಲಿ ಪಟ್ಟಣದ ಸೋಸೈ ಟೀ ಕಾಲನಿಯಲ್ಲಿ ವಾಸವಿರುವ ಯುವಕನಿಗೂ ಮದುವೆ ನಿಶ್ವಯವಾಗಿತ್ತು.

    ಎರಡು ಕುಟುಂಬದವರು ಒಟ್ಟಿಗೆ ಕುಳಿತು ಜಾತಕಫಲವನ್ನು ನೋಡಿ ಒಂದು ತಿಂಗಳ ಹಿಂದೆಯೇ ಮದುವೆಗೆ ನಿಶ್ವಯ ಮಾಡಿದ್ದರು. ಕಳೆದ ಶನಿವಾರ ಮತ್ತು ಭಾನುವಾರ ಮದುವೆ ನಡೆಯಬೇಕಿತ್ತು. ಶನಿವಾರ ರಾತ್ರಿ ರಿಸೆಪ್ಷನ್​ ಕೂಡ ನಡೆಯಿತು. ವರ ಮತ್ತು ವಧುವಿನ ಕಡೆಯ ಸಂಬಂಧಿಕರು ಮತ್ತು ಆಪ್ತರು ಮದುವೆಗೆ ಆಗಮಿಸಿದ್ದರು. ಭಾನುವಾರ ಮುಗಿಯಬೇಕಿದ್ದ ಮದುವೆ ವರನ ಆಘಾತದೊದಿಗೆ ಅಂತ್ಯವಾಗಿದೆ.

    ಶನಿವಾರ ರಾತ್ರಿ ರಿಸೆಪ್ಷನ್​ಗೆಂದು ಸೀರೆ ಧರಿಸಿ ಬರುವುದಾಗಿ ಹೇಳಿ ವಧುವಿನ ಕೊಠಡಿಗೆ ತೆರಳಿದ ಸೋನಿಕಾ ಮರಳಿ ಬರಲೇ ಇಲ್ಲ. ಎಲ್ಲಿ ಹೋದಳು ಎಂದು ವಿಚಾರಿಸುತ್ತಲೇ ಇಡೀ ರಾತ್ರಿ ಕಳೆದಿದೆ. ಇತ್ತ ಭಾನುವಾರ ಬೆಳಗ್ಗೆ ಪುಂಗನೂರಿಗೆ ತನ್ನ ಪ್ರಿಯಕರ ಚರಣ್​ ಜತೆ ತೆರಳಿದ ಸೋನಿಕಾ ಅಲ್ಲಿಯೇ ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆಯೇ ವರನ ಕಡೆಯವರು ಮದನಪಲ್ಲಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮದುವೆಗಾಗಿ ಸಾಕಷ್ಟು ಹಣವನ್ನು ವ್ಯಯಿಸಿದ್ದೇವೆ ಮತ್ತು ಸಂಬಂಧಿಕರ ಮುಂದೆ ನಮಗೆ ತುಂಬಾ ಅವಮಾನ ಆಗಿದೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಇನ್ನು ಸೋನಿಕಾ ಎಂಬಿಎ ಮುಗಿಸಿದ್ದು, ಸ್ಥಳೀಯ ಗುರುಕುಲ ಶಾಲೆಯಲ್ಲಿ ಸೂಪರ್​ವೈಸರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆಯು ಸಹ ಪೊಲೀಸರಿಗೆ ದೂರು ನೀಡಿದ್ದು, ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾದರು. ಅದಕ್ಕಾಗಿ ನನ್ನನ್ನು ಹಲವು ದಿನಗಳವರೆಗೆ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದಾಳೆ. (ಏಜೆನ್ಸೀಸ್​)

    ನ.19ರಿಂದ ಸಲಗದಲ್ಲಿ ಟಿಣಿಂಗ ಮಿಣಿಂಗ ಟಿಶ್ಶಾ..

    ಫೈನಲ್​ಗೆ ಮುನ್ನ ಬಲ ಪಕ್ಕದಲ್ಲಿ ನಿಂತ ನಾಯಕರಿಗೆ ಒಲಿಯುತ್ತೆ ಐಸಿಸಿ ಟ್ರೋಫಿ!

    ಇಂದು ರಾಜಧಾನಿ ಬೆಂಗಳೂರಿನಲ್ಲಿ ಪುನೀತ್ ನಮನ

    ಕ್ರಿಪ್ಟೊ ನಿಯಂತ್ರಣಕ್ಕೆ ನೀತಿ?; ಹಣಕಾಸು ಸಂಸದೀಯ ಸಮಿತಿ ಸಭೆಯಲ್ಲಿ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts