More

    ಕರೊನಾ ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘನೆ

    ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗವನ್ನು ತಂತ್ರಜ್ಞಾನ, ವಾರ್ ರೂಮ್ ಮತ್ತು ಟೆಲಿ ಮೆಡಿಸಿನ್ ಮೂಲಕ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದ್ದು, ದೇಶದ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆಯಿದೆ. 2023ರಲ್ಲಿ ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ ಹೆಜ್ಜೆ ಇರೋಸೋಣ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ತಿಳಿಸಿದ್ದಾರೆ.

    ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ಕರೊನಾ ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘನೆ

    ದೇಶದಲ್ಲಿ ಕೋವಿಡ್ ಸೋಂಕು ನಿರ್ವಹಣೆಗೆ ಕೇಂದ್ರದ ಜತೆಗೆ ರಾಜ್ಯ ಸರ್ಕಾರ ಹೆಚ್ಚು ಶ್ರಮವಹಿಸಿದೆ. ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಸಾಫ್ಟ್ ವೇರ್ ಅಭಿವೃದ್ಧಿ ಮತ್ತು ಕೋವಿಡ್ ವಾರ್ ರೂಮ್ ನಿರ್ಮಾಣ ದೇಶಕ್ಕೆ ಮಾದರಿಯಾಗಿದೆ. ಆಕ್ಸಿಜನ್ ಮತ್ತು ಸಿಲಿಂಡರ್ ಗಳ ಉತ್ಪಾದನೆ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶದಲ್ಲಿ ನಿರ್ವಹಣೆ ಮಾಡಿದ ಜಿಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. 2023ರ ಆ.15ರವರೆಗೆ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯಲ್ಲಿದ್ದು ಈ ವೇಳೆ 14 ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಕಲಬುರಗಿ, ಶಿವಮೊಗ್ಗ, ವಿಜಯಪುರ, ಬಳ್ಳಾರಿ, ಹಾಸನ, ಕಾರವಾರ ಮತ್ತು ರಾಯಚೂರು ನಗರಗಳ ಹೊರವಲಯಗಳಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಗಳ ವಿವಿಧ ಘಟಕಗಳಿಗೆ ಶಸ್ತ್ರಾಸ್ತ್ರಗಳು, ವಾಹನಗಳು ಮತ್ತು ವೈಜ್ಞಾನಿಕ ಉಪಕರಣ ಕೇಂದ್ರದಿಂದ 14.23 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 13.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವೈರ್‌ಲೆಸ್ ಉಪಕರಣಗಳ ಖರೀದಿಗಾಗಿ ಕೇಂದ್ರದಿಂದ 9.14 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 6.09 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ರಾಜ್ಯವು ಸಹಕಾರಿ ಕ್ಷೇತ್ರದಲ್ಲಿನ ಹಾಲು ಉತ್ಪಾದನೆಯಲ್ಲಿ ಭಾರತದಲ್ಲಿಯೇ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 6ನೇ ಸ್ಥಾನ ಹಾಗೂ ಮಾರಿಸ ಉತ್ಪಾದನೆಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. ಪಶುಸಂಗೋಪನಾ ಇಲಾಖೆಯು ಕೃಷಿ ಜಿಡಿಪಿಗೆ ಶೇ.26.81 ರಷ್ಟು ಮತ್ತು ರಾಜ್ಯ ಜಿಡಿಪಿಗೆ ಶೇ.3.53 ರಷ್ಟು ಕೊಡುಗೆಯನ್ನು ನೀಡಿದೆ. ಎಪಿಎಂಸಿಯ ಮಾರುಕಟ್ಟೆ ಶುಲ್ಕದಿಂದ ರೈತರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ರೈತರ ಈ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಮಾರುಕಟ್ಟೆ ಶುಲ್ಕವನ್ನು ಶೇ.0.6 ಕಡಿಮೆ ಮಾಡಲಾಗಿದೆ. ರಾಜ್ಯ ಉಗ್ರಾಣ ನಿಗಮವು ಅತಿ ಹೆಚ್ಚಿನ ದಾಸ್ತಾನು ಬೇಡಿಕೆಯನ್ನು ಪೂರೈಸುವುದಕ್ಕಾಗಿ 54 ಕೇಂದ್ರಗಳಲ್ಲಿ 9.24 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ಹೊಸ ಉಗ್ರಾಣಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. 4.70 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣಗಳು ಈಗಾಗಲೇ ರೈತರ ಬಳಕೆಗೆ ಸಿದ್ಧವಾಗಿವೆ ಎಂದು ಹೇಳಿದರು.

    ಅರಣ್ಯ ಇಲಾಖೆಯು 37,745 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ವಿವಿಧ ಬಗೆಯ 2.39 ಕೋಟಿ ಗಿಡಗಳನ್ನು ನೆಟ್ಟಿದ್ದು, ಕೃಷಿ ಭೂಮಿಯಲ್ಲಿ ಮತ್ತು ಖಾಸಗಿ ಜಮೀನುಗಳಲ್ಲಿ ಗಿಡಗಳನ್ನು ನೆಡುವುದಕ್ಕಾಗಿ 1.87 ಕೋಟಿ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿ ರೈತರಿಗೆ ರೂ. ವಿತರಿಸಲಾಗಿದೆ. 4.39 ಕೋಟಿ ರೂ.ಗಳ ಪ್ರೋತ್ಸಾಹಧನ ವಿತರಿಸಲಾಗಿದೆ. ವನ್ಯಜೀವಿ ಸಮಗ್ರ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕ್ರಮ ಕೈಗೊಂಡಿದ್ದರ ಫಲವಾಗಿ ಅರಣ್ಯ ಪ್ರದೇಶದಲ್ಲಿ 524 ಹುಲಿಗಳನ್ನು ಹೊಂದಿರುವ ಕರ್ನಾಟಕ ರಾಜ್ಯವನ್ನು ಅತ್ಯಧಿಕ ಸಂಖ್ಯೆಯ ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯವೆಂದು ಗುರುತಿಸಲಾಗಿದೆ. 2017ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6,049 ಆನೆಗಳಿವೆ. ಇದು ಭಾರತದಲ್ಲಿನ ಆನೆಗಳ ಶೇ.25ರಷ್ಟನ್ನು ಒಳಗೊಳ್ಳುತ್ತದೆ. ಹೆಚ್ಚಿನ ಆನೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

    ಕರೊನಾ ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘನೆ

    2021-22ರಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳಿಗೆ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನಾ ಕಾರ್ಯಕ್ರಮಗಳ ಅಡಿಯಲ್ಲಿನ ಯೋಜನೆಗಳಿಗಾಗಿ ಒಟ್ಟು ಸುಮಾರು 26 ಸಾವಿರ ಕೋಟಿ ರೂ.ಗಳನ್ನು ಹಂಚಿಕೆ ಮಾಡಿದೆ. ಈ ಪೈಕಿ ನವೆಂಬರ್ 2021ರ ವರೆಗೆ ಸುಮಾರು 11,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಪರಿಶಿಷ್ಟ ಜಾತಿಗಳ ವಿವಿಧ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಒಟ್ಟು 3,710 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ನವೆಂಬರ್ 2021ರ ವರೆಗೆ ಸುಮಾರು 2,014 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗಾಗಿ ಸ್ವಯಂ ರಕ್ಷಣೆಗಾಗಿ ಕರಾಟೆ, ಟೆಕ್ವಾಂಡೋ ನಂತಹ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದರು.

    ನಮ್ಮ ಸರ್ಕಾರ, ಮಹಿಳಾ ಕೇಂದ್ರಿತ ಆಯ-ವ್ಯಯಗಳಿಗೆ ಆದ್ಯತೆ ನೀಡಿ, ಮಾತೃಪೂರ್ಣ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ಒದಗಿಸುತ್ತಿದೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಸೌಲಭ್ಯವನ್ನು 9.36 ಲಕ್ಷ ಫಲಾನುಭವಿಗಳು ಪಡೆದುಕೊಂಡಿರುತ್ತಾರೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಸ್ತ್ರೀಯರ ಮತ್ತು ಬಾಣಂತಿಯರ ಬ್ಯಾಂಕ್ ಖಾತೆಗಳಿಗೆ 5 ಸಾವಿರ ರೂ.ಗಳನ್ನು ಜಮೆ ಮಾಡಲಾಗಿದ್ದು, 2.9 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಿದೆ ಎಂದು ಥಾವರ್ ಚಂದ್ ಗೆಹಲೋತ್ ತಿಳಿಸಿದರು.

    ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 158.27 ಕಿ.ಮೀ ಮಾರ್ಗವನ್ನು ಒಳಗೊಂಡ 77 ರಸ್ತೆಗಳನ್ನು ವೈಟ್ ಟಾಪಿಂಗ್‌ಗಾಗಿ ಆಯ್ಕೆ ಮಾಡಲಾಗಿದೆ. ಈ ಪೈಕಿ 83.91 ಕಿ.ಮೀ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದ್ದು, 31 ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಸಾರಿಗೆಗೆ ಲಭ್ಯಗೊಳಿಸಲಾಗಿದೆ. ಪಾದಚಾರಿ ಸ್ನೇಹಿ ರಸ್ತೆಗಳನ್ನು ಒದಗಿಸುವುದಕ್ಕಾಗಿ ಮೊದಲ ಹಂತದಲ್ಲಿ 17 ಕಿ.ಮೀ ಮಾರ್ಗದ 12 ರಸ್ತೆಗಳನ್ನು ಮತ್ತು 2ನೇ ಹಂತದಲ್ಲಿ 16 ಕಿ.ಮೀ ಮಾರ್ಗದ 35 ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 12.37 ಕಿ.ಮೀ ಮಾರ್ಗದ 10 ರಸ್ತೆಗಳು ಮತ್ತು 10.27 ಕಿ.ಮೀ ಮಾರ್ಗದ 29 ರಸ್ತೆಗಳ ಕಾಮಗಾರಿಗಳು ಮುಕ್ತಾಯಗೊಂಡಿದೆ.

    ಘನತ್ಯಾಜ್ಯ ವಿಲೇವಾರಿಯ ನಿರ್ವಹಣೆಯಲ್ಲಿ ಬೆಂಗಳೂರು ನಗರಕ್ಕೆ ಅತ್ಯುತ್ತಮ ಸುಸ್ಥಿರ ವಾಸಯೋಗ್ಯ ನಗರ’ ಪ್ರಶಸ್ತಿಯನ್ನು ನೀಡಲಾಗಿದೆ. ಪಪಥಮವಾಗಿ ಈ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವ ಶೇ.50 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು.

    ಕರೊನಾ ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘನೆ

    ಸತತ 2ನೇ ವರ್ಷ ಸರಳ ಗಣರಾಜ್ಯೋತ್ಸವ:
    ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಎಲ್ಲ ತುಕಡಿಗಳು ಸೇರಿ 21 ಪಡೆಗಳು ಗೌರವ ದೀಕ್ಷೆಯಲ್ಲಿ ಪಾಲ್ಗೊಂಡಿದ್ದವು. ಕೋವಿಡ್ ವಾರಿಯರ್ಸ್, ಹಿರಿಯ ಅಧಿಕಾರಿಗಳು ಮತ್ತು ವಿಶೇಷ ಗಣ್ಯರಿಗೆ ಮಾತ್ರ ಪ್ರವೇಶ ಅವಕಾಶವಿತ್ತು. ಕೇವಲ 200 ಆಸನಗಳನ್ನು ಮಾತ್ರ ಸಿದ್ಧಪಡಿಸಲಾಗಿತ್ತು. ಕರ್ನಲ್ ಆಶಿಶ್ ಚನ್ನಪ್ಪ ಪರೇಡ್ ನೇತೃತ್ವ ವಹಿಸಿದ್ದರು. ರಾಜ್ಯಪಾಲರ ದ್ವಜಾರೋಹಣ, ಗೌರವ ದೀಕ್ಷೆ ಸ್ವೀಕಾರ, ನಾಡಿಗೆ ಗಣರಾಜ್ಯೋತ್ಸವ ಸಂದೇಶ, ರೈತಗೀತೆ, ನಾಡಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts