More

    ಬೈಕ್​ನಲ್ಲೇ ವಿಶ್ವ ಪರ್ಯಟನೆ ಆರಂಭಿಸಿದ ನಟ ಅಜಿತ್​​: ಸ್ಪೋರ್ಟ್ಸ್​ ಬೈಕ್​ ಬೆಲೆ ಕೇಳಿದ್ರೆ ಬೆರಗಾಗ್ತೀರಾ..!

    ಚೆನ್ನೈ: ಸಿನಿಮಾ ಹೊರತು ಪಡಿಸಿದರೆ ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ ಓರ್ವ ವೃತ್ತಿಪರ ಬೈಕ್​ ರೇಸರ್​ ಎಂಬುದು ಎಲ್ಲರಿಗು ತಿಳಿದಿದೆ. ತಾವು ನಟಿಸಿರುವ ಹಾಗೂ ಬಿಡುಗಡೆಗೆ ಸಜ್ಜಾಗಿರುವ “ವಾಲಿಮೈ” ಚಿತ್ರದಲ್ಲೂ ಅಜಿತ್​ ಬೈಕ್​ ರೇಸರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಆ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ.

    ಇದರ ನಡುವೆ ಅಜಿತ್​ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಅಭಿಮಾನಿಗಳ ಪಾಲಿಗೆ ಇದು ಸಂತಸದ ವಿಚಾರವೂ ಹೌದು. ಏನೆಂದರೆ, ಬೈಕ್​ನಲ್ಲೇ ವಿಶ್ವ ಪರ್ಯಟನೆಯನ್ನು ಅಜಿತ್​ ಆರಂಭಿಸಿದ್ದಾರೆ. ಇದು ಅಜಿತ್​ ಅವರ ಬಹುದಿನಗಳ ಯೋಜನೆ ಆಗಿದೆ. ವಿಶ್ವ ಪರ್ಯಟನೆ ಆರಂಭಿಸಿರುವ ಅಜಿತ್​ ಅವರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

    ವೈರಲ್​ ಫೋಟೋದಲ್ಲಿ ತಲಾ ಅಜಿತ್​, ರೇಸಿಂಗ್​ ಧಿರಿಸು ಮತ್ತು ಹೆಲ್ಮೆಟ್​ ಧರಿಸಿ ಬಿಎಂಡಬ್ಲ್ಯು 12000ಜಿಎಸ್​ ಸ್ಫೋರ್ಟ್ಸ್​ ಬೈಕ್​ ಏರಿ ಫೋಸ್​ ನೀಡಿದ್ದಾರೆ. ಇನ್ನು ಬೈಕ್​ನ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗಬಹುದು. ಬರೋಬ್ಬರಿ 25 ಲಕ್ಷ ರೂಪಾಯಿ ಅಧಿಕ ಮೌಲ್ಯವನ್ನು ಈ ಬೈಕ್​ ಹೊಂದಿದೆ.

    ಅಜಿತ್​ ಇತ್ತೀಚೆಗೆ ವಿಶ್ವ ಖ್ಯಾತಿಯ ಮಹಿಳಾ ಬೈಕರ್​ ಮರಲಾ ಯಜರ್ಲೂ ಎಂಬುವರನ್ನು ಭೇಟಿಯಾಗಿ ಅವರ ಅನುಭವದ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ವಿಶ್ವಾದ್ಯಂತ ಬೈಕ್​ ಸವಾರಿ ಮಾಡಲು ಅವರಿಂದ ಕೆಲವೊಂದು ಸಲಹೆಯನ್ನು ಪಡೆದುಕೊಂಡಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅಜಿತ್​ ಅವರ ಮುಂದಿನ ಚಿತ್ರ ವಾಲಿಮೈ. ಈಗಾಗಲೇ ಬ್ಯಾಕ್​ ಟು ಬ್ಯಾಕ್​ ಬ್ಲಾಕ್​ ಬಸ್ಟರ್​ ಸಿನಿಮಾಗಳನ್ನು ನೀಡಿರುವ ಅಜಿತ್​ಗೆ ದಕ್ಷಿಣ ಭಾರತದಲ್ಲಿ ಒಳ್ಳೆಯ ಫ್ಯಾನ್ಸ್​ ಬೇಸ್​ ಇದೆ. ನಿನ್ನೆಯಷ್ಟೇ ಅವರ ಟೀಸರ್​ ಬಿಡುಗಡೆಯಾಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಈ ಚಿತ್ರವನ್ನು ಎಚ್​. ವಿನೋದ್​ ನಿರ್ದೇಶಿಸಿದ್ದಾರೆ. ಬೋನಿ ಕಪೂರ್​ ಅವರು ಜೀ ಸ್ಟುಡಿಯೋ ಮತ್ತು ಬೇವೀವ್​ ಪ್ರಾಜೆಕ್ಟ್​ ಎಲ್​ಎಲ್​ಪಿ ಸಹಯೋಗದಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದು, 2022ರ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

    ಬಾ ನಲ್ಲೆ ಮಧುಚಂದ್ರಕೆ ಫಿಲ್ಮ್​ ನೋಡಿ ಪತ್ನಿ ಹತ್ಯೆಗೆ ಸಂಚು: ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಗಂಡ!

    ಪ್ರೀತಿಸಿ ಮದ್ವೆ ಆದವಳು ಪಕ್ಕದ ಮನೆಯವನ ಜತೆ ಎಸ್ಕೇಪ್! ಮನನೊಂದು ಗಂಡ ಆತ್ಮಹತ್ಯೆಗೆ ಶರಣು

    ಹಾವು ನುಂಗುವ ಸಾಹಸಕ್ಕೆ ಕೈ ಹಾಕಿದ ಕೃಷಿಕ: 2 ಬಾರಿ ಬಚಾವ್​ ಆದವನಿಗೆ 3ನೇ ಬಾರಿ ಅದೃಷ್ಟ ಕೈಕೊಟ್ಟಿತು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts