More

    ತೆಲಂಗಾಣದ ಥಿಯೇಟರ್​ ಪಾರ್ಕಿಂಗ್​ ದರಕ್ಕಿಂತ ಕಡಿಮೆ ಆಂಧ್ರದ ಸಿನಿಮಾ ಟಿಕೆಟ್​ ಬೆಲೆ: ಬಾಲ್ಕನಿಗೆ 20 ರೂ.

    ವಿಜಯವಾಡ: ಸಿನಿಮಾ ಟಿಕೆಟ್​ ದರದ ವಿಚಾರವಾಗಿ ಆಂಧ್ರ ಪ್ರದೇಶ ಸರ್ಕಾರ ಮತ್ತು ತೆಲುಗು ಸಿನಿಮಾ ಇಂಡಸ್ಟ್ರಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ತೆಲುಗು ಸಿನಿಮಾ ಇಂಡಸ್ಟ್ರಿಯನ್ನು ಆಂಧ್ರ ಸರ್ಕಾರ ದಮನ ಮಾಡುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪ ಕೇಳಿಬಂದಿದ್ದು, ಇದೀಗ ವೈರಲ್​ ಆಗಿರುವ ಫೋಟೋವೊಂದು ಅದಕ್ಕೆ ಪುಷ್ಟಿ ನೀಡುವಂತಿದೆ.

    ವೈರಲ್​ ಆಗಿರುವ ಫೋಟೋದಲ್ಲಿ ತೆಲಂಗಾಣದ ಸಿನಿಮಾ ಹಾಲ್​ ಪಾರ್ಕಿಂಗ್​ ದರ ಮತ್ತು ಆಂಧ್ರದ ಸಿನಿಮಾ ಟಿಕೆಟ್ ದರವನ್ನು ಹೋಲಿಕೆ ಮಾಡಲಾಗಿದೆ. ಅದರಲ್ಲಿ ಸಿನಿಮಾ ಟಿಕೆಟ್​ ದರಕ್ಕಿಂತ ಪಾರ್ಕಿಂಗ್​ ದರವೇ ಹೆಚ್ಚಿದೆ. ಆಂಧ್ರದ ಬಾಲ್ಕನಿ ಟಿಕೆಟ್​ ದರಕ್ಕಿಂತ ತೆಲಂಗಾಣದ ಪಾರ್ಕಿಂಗ್​ ದರವೇ ಹೆಚ್ಚಿದೆ.

    ತೆಲಂಗಾಣದ ಚಿತ್ರಮಂದಿರಗಳಲ್ಲಿ ವಾಹನ ಪಾರ್ಕಿಂಗ್​ ದರ 30 ರೂಪಾಯಿ ಇದೆ. ಆದರೆ, ಆಂಧ್ರದಲ್ಲಿ ಟಿಕೆಟ್​ ಬೆಲೆ ಬಾಲ್ಕನಿ 20, ಫಸ್ಟ್​ ಕ್ಲಾಸ್​ 15 ಹಾಗೂ ಸೆಕೆಂಡ್​ ಕ್ಲಾಸ್​ 10 ರೂ. ಇದೆ. ಸರ್ಕಾರದ ಟಿಕೆಟ್​ ಬೆಲೆ ಇಳಿಸಿರುವ ಪರಿಣಾಮ ಮೂಲ ಖರ್ಚು ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಅಸಮಾಧಾನ ಹೊರಹಾಕಿದ್ದಾರೆ.

    ಕಡಿಮೆ ಟಿಕೆಟ್​ ದರ ನಿಗದಿಯಿಂದಾಗಿ ಆಂಧ್ರದದಲ್ಲಿ ಅನೇಕ ಸಿನಿಮಾ ಮಂದಿರಗಳನ್ನು ಬಂದ್​ ಮಾಡಲಾಗಿದೆ. ಟಿಕೆಟ್​ ದರ ಮಾತ್ರವಲ್ಲದೆ, ಸಿನಿಮಾ ಹಾಲ್​ ಸುರಕ್ಷತಾ ಕ್ರಮಗಳ ಬಗ್ಗೆಯೂ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು, ಸುರಕ್ಷತಾ ಕ್ರಮ ಪಾಲಿಸದ 15 ಚಿತ್ರಮಂದಿಗಳನ್ನು ಸರ್ಕಾರ ಸೀಜ್​ ಮಾಡಿದೆ.

    ಆಂಧ್ರ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿದ ತೆಲುಗು ಚಿತ್ರರಂಗ ಕೂಡ ಕೋರ್ಟ್​ ಮೆಟ್ಟಿಲೇರಿದೆ. ಅಲ್ಲದೆ, ನಾನಿ ಸೇರಿದಂತೆ ಅನೇಕ ನಟರು ಕೂಡ ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸದ್ಯ ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಆರ್​ಆರ್​ಆರ್​ ಮತ್ತು ರಾಧೆ ಶ್ಯಾಮ್​ ಚಿತ್ರದ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ. (ಏಜೆನ್ಸೀಸ್​)

    ರಾಕಿ ಭಾಯ್ ಗಡ್ಡಕ್ಕೆ ಮುಕ್ತಿ ಯಾವಾಗ? ಕೆಜಿಎಫ್-2 ಬಗ್ಗೆ ಯಶ್ ಹೇಳಿದ್ದೇನು….?

    ಡಿಸೆಂಬರ್​ 31ರಂದು ಬಂದ್​ಗೆ ಕರೆ ನೀಡಿರುವುದು ಕನ್ನಡಕ್ಕೆ ಮಾಡಿದ ದ್ರೋಹ: ನಟ ಶಿವರಾಜ್​ಕುಮಾರ್​

    ಸಾರ್ವಜನಿಕರ ಕ್ಷಮೆಯಾಚಿಸದಿದ್ರೆ ಭಾರತದಲ್ಲಿ ಉಳಿಯಲು ಬಿಡುವುದಿಲ್ಲ: ಸನ್ನಿ ಲಿಯೋನ್​ಗೆ ಅರ್ಚಕರ ಎಚ್ಚರಿಕೆ

    ಮಕ್ಕಳ ಪಡೆಯಲೂ ಸಿಗುತ್ತೆ ಸಾಲ; ಚೀನಾದ ಜಿಲಿನ್ ಪ್ರಾಂತ್ಯದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts