More

    ನೀಚ ಕೃತ್ಯದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಜೀವನ ಹಾಳು ಮಾಡ್ತಿದ್ದ ದೈಹಿಕ ಶಿಕ್ಷಕಿಯ ಬಂಧನ

    ಕೊಚ್ಚಿ: ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಬೇಕಿದ್ದ ದೈಹಿಕ ಶಿಕ್ಷಕಿ ಹಾಗೂ ಶಿಕ್ಷಕ ಡ್ರಗ್ಸ್​ ಪ್ರಕರಣದಲ್ಲಿ ಬಂಧನವಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಶಿಕ್ಷಕರ ಜತೆಗೆ ಇತರೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ತಿರುವನಂತರಪುರಂನ ಮುತ್ತಥರಾ ಪ್ರದೇಶದ ಶಿವಶಕ್ತಿ ಹೌಸ್​ನ ದೈಹಿಕ ಶಿಕ್ಷಕಿ ಅಮೃತಾ (24), ಥಿರುವಳ್ಳ ಮೂಲಕ ದೈಹಿಕ ಶಿಕ್ಷಕ ಅಭಿಮನ್ಯು (27) ಮತ್ತು ಪೆರಿಂತಲಮನ್ನದ ಕಪ್ಪಿಲ್​ ಹೌಸ್​ನ ಸನಿಲ್​ (27) ಎಂದು ಗುರುತಿಸಲಾಗಿದೆ.

    ಬುಧವಾರ ರಹಸ್ಯ ಮಾಹಿತಿ ದೊರೆತ ಬೆನ್ನಲ್ಲೇ ಜಿಲ್ಲಾ ಮಾದಕ ದ್ರವ್ಯ ವಿರೋಧಿ ವಿಶೇಷ ಕ್ರಿಯಾ ಪಡೆ (ಡಿಎಎನ್​ಎಸ್​ಎಎಫ್​) ಮತ್ತು ಇನ್ಫೋಪಾರ್ಕ್​ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಂಬಿಕಾರ್ಹ ವ್ಯಕ್ತಿಗಳಿಗೆ ಮಾತ್ರ ಆರೋಪಿಗಳು ಡ್ರಗ್ಸ್​ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 20 ಗ್ರಾಂ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ. ಡ್ರಗ್ಸ್​ ಅನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.

    ಎಂಡಿಎಂಎ ಮಾರಾಟದ ಬಗ್ಗೆ ರಹಸ್ಯ ಮಾಹಿತಿ ದೊರೆತ ಬಳಿಕ ಈ ಗ್ಯಾಂಗ್ ಕೆಲವು ದಿನಗಳಿಂದ ಪೊಲೀಸ್​ ಕಣ್ಗಾವಲಿನಲ್ಲಿತ್ತು. ಆರೋಪಿಗಳು ಹಲವಾರು ಸಿಮ್ ಕಾರ್ಡ್‌ಗಳು ಮತ್ತು ಫೋನ್‌ಗಳನ್ನು ಪರ್ಯಾಯವಾಗಿ ಬಳಸುತ್ತಾ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದರು. ಆದರೆ, ಹಲವು ಪ್ರಯತ್ನಗಳ ನಡುವೆಯೂ ಕೊನೆಗೂ ಪೊಲೀಸರ ಕೈಗೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ. (ಏಜೆನ್ಸೀಸ್​)

    ಸತ್ತವಳ ಹೆಸರಲ್ಲಿ ಬಂತು ಫೇಸ್​ಬುಕ್ ಫ್ರೆಂಡ್​ ರಿಕ್ವೆಸ್ಟ್​! ಹೆದರಿ ಠಾಣೆಗೆ ದೌಡಾಯಿಸಿದ ಸಂಬಂಧಿಕರು

    ಗೃಹ ಬಳಕೆಯ LPG ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

    ಮೈ ಮೇಲಿದ್ದ ಚಿನ್ನವೇ ಚೇತನಾಗೆ ಮುಳುವಾಯ್ತಾ? ಪಾಲಕರ ಮಾತು ಕೇಳಿದಿದ್ರೆ ಖಂಡಿತ ಪ್ರಾಣ ಉಳಿಯುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts