More

    ತಮನ್ನಾ ಹರಿಬಿಟ್ಟ ಬಿಕಿನಿ​ ವಿಡಿಯೋ ನೋಡಿ ದಂಗಾದ ನೆಟ್ಟಿಗರು: ಮಿಲ್ಕಿ ಬ್ಯೂಟಿಯ ಹಾಟ್​ ಅವತಾರ ವೈರಲ್​!

    ನವದೆಹಲಿ: ಮಿಲ್ಕಿ ಬ್ಯೂಟಿ ತಮ್ಮನ್ನಾರ ಬಿಕಿನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿದೆ. ಶೂಟಿಂಗ್​ನಿಂದ ಬಿಡುವು ಪಡೆದುಕೊಂಡು ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ಗೆ ಹಾರಿರುವ ತಮನ್ನಾ ಸಖತ್​ ಎಂಜಾಯ್​ ಮೂಡ್​ನಲ್ಲಿದ್ದಾರೆ. ಪಿಂಕ್​ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​​ ನೀಡಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್​ಲೋಡ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ತಮನ್ನಾ ಅವರು ಗಾಳಿಯನ್ನು ಆನಂದಿಸುತ್ತಾ ತಾವಿರುವ ಜಾಗದಲ್ಲಿ ನಡೆದಾಡುತ್ತಿರುವುದು ವೀಡಿಯೊದಲ್ಲಿದೆ. ಅವರು ತಮ್ಮ ಫ್ರೆಂಡ್​ ಜತೆ ಸೂರ್ಯಾಸ್ತವನ್ನು ಆನಂದಿಸುತ್ತಿರುವ ಫೋಟೋವನ್ನು ಸಹ ಪೋಸ್ಟ್​ ಮಾಡಿದ್ದಾರೆ. ತಮನ್ನಾ ಅವರು ವೀಡಿಯೊ ಜೊತೆಗೆ ಮಾಲ್ಡೀವ್ಸ್​ ದ್ವೀಪದಲ್ಲಿ ಐಸ್ ಕ್ರೀಮ್ ಸೈಕಲ್ ಸವಾರಿ ಮಾಡುತ್ತಿರುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ತಮನ್ನಾ ಗುಲಾಬಿ ಬಣ್ಣದ ಕ್ರಾಪ್ ಟಾಪ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿದ್ದು, ಹೂವಿನ ಮುದ್ರಿತ ಬೀಚ್ ಕವರ್ ಅವರ ಹಾಟ್​ ಧಿರಿಸಿಗೆ ಪೂರಕವಾಗಿದೆ. ಸದ್ಯ ತಮ್ಮನ್ನಾ ಅವರ ಹಾಟ್​ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತಮನ್ನಾ ಅವರ ಮಾದಕ ಮೈಮಾಟ ನೋಡಿ ಪಡ್ಡೆ ಹುಟುಗರು ಫಿದಾ ಆಗಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ತಮನ್ನಾ ಇತ್ತಿಚೆಗಷ್ಟೇ “ಬಬ್ಲಿ ಬೌನ್ಸರ್”​ ಬಾಲಿವುಡ್​ ಸಿನಿಮಾದ ಮೊದಲ ಶೆಡ್ಯೂಲ್​ ಮುಗಿಸಿದ್ದಾರೆ. ಈ ಚಿತ್ರವನ್ನು ಮಧು ಬಂಡಾರ್ಕರ್​ ನಿರ್ದೇಶನ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲ ಶೆಡ್ಯೂಲ್ ಮುಗಿಸಿದ ಕುರಿತು ವೀಡಿಯೊವನ್ನು ಹಂಚಿಕೊಂಡಿರುವ ತಮನ್ನಾ, “ನೀವು ಅತ್ಯುತ್ತಮ ಸಮಯವನ್ನು ಹೊಂದಿರುವಾಗ ಸಮಯ ವೇಗವಾಗಿ ಸಾಗುತ್ತದೆ. ಇದು ಈಗಾಗಲೇ ಬಬ್ಲಿ ಬೌನ್ಸರ್​ ಚಿತ್ರದ ಮೊದಲ ಶೆಡ್ಯೂಲ್‌ನಲ್ಲಿ ಈ ಅನುಭವವಾಗಿದೆ. ಇದು ನನ್ನಿಂದ ನಂಬಲು ಆಗುತ್ತಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಹೋಳಿ ಹಬ್ಬದಂದು ಪಬ್​ನಲ್ಲಿ ಯುವಕರು ಮಾಡಿದ ಎಡವಟ್ಟು ಇಂಟರ್ನೆಟ್​ ಸೆಲೆಬ್ರಿಟಿಯ ಪ್ರಾಣ ಕಸಿಯಿತಾ?

    ಅಯ್ಯೋ ದುರ್ವಿಧಿಯೇ! ಬಿರುಗಾಳಿಯಿಂದ ಚಲಿಸುತ್ತಿದ್ದ ಬೈಕ್​ ಮೇಲೆ ತೆಂಗಿನ ಮರ ಬಿದ್ದು ಬಾಲಕಿ ಸಾವು

    ಸಮಂತಾ ಜತೆಗಿರೋ ವಿದೇಶಿ ವ್ಯಕ್ತಿ ಯಾರು? ಈ ಒಂದು ವಿಚಾರಕ್ಕೆ ಮತ್ತೆ ಸುದ್ದಿಯಾದ ಸ್ಯಾಮ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts