More

  ತಮನ್ನಾ ಭಾಟಿಯಾ- ವಿಜಯ್ ವರ್ಮಾ ಮದುವೆ ಶೀಘ್ರ?

  ಚೆನ್ನೈ: ಈ ವರ್ಷದ ಆರಂಭದಲ್ಲಿ, ಮಹತ್ವದ ಜವಾಬ್ಧಾರಿ ಹೊರುತ್ತಿರುವುದಾಗಿ ಖ್ಯಾತ ನಟಿ, ಮಿಲ್ಕಿಬ್ಯೂಟಿ ತಮನ್ನಾ ಬಹಿರಂಗಪಡಿಸಿದ್ದು ತಿಳಿದ ಸಂಗತಿಯೇ. ಈಗ ಈ ಖ್ಯಅತ ತಾರೆ ಇದಕ್ಕೆ ಒಂಬುಕೊಡುವಂತೆ ತನ್ನ ಮದುವೆಯ ಬಗ್ಗೆ ದೃಷ್ಟಿ ಹರಿಸಿದಂತೆ ತೋರುತ್ತಿದೆ ಎನ್ನುತ್ತಿವೆ ಮೂಲಗಳು.

  ಇದನ್ನೂ ಓದಿ: ‘ಹಾಗೆ ಮಾಡುವುದು ನನಗೆ, ನನ್ನ ಪತ್ನಿಗೆ ಇಷ್ಟವಿಲ್ಲ’: ನಟ ಮಾಧವನ್ ಹೀಗಂದಿದ್ಯಾಕೆ?

  ತಮನ್ನಾ ಭಾಟಿಯಾ ಮತ್ತು ಆಕೆಯ ಗೆಳೆಯ ವಿಜಯ್ ವರ್ಮಾ ಶೀಘ್ರದಲ್ಲೇ ವಿವಾಹ ಬಂಧನಕ್ಕೆ ಒಳಪಡುತ್ತಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಈಗ ಹೆಚ್ಚಾಗಿ ಕೇಳಿಬರುತ್ತಿವೆ. ಇವರಿಬ್ಬರ ಸಂಬಂಧದ ಬಗ್ಗೆ ವದಂತಿಗಳನ್ನು ಎಂದೂ ತಳ್ಳಿಹಾಕಿಲ್ಲ. ತಮ್ಮ ಒಡನಾಟದ ಬಗ್ಗೆ ಮುಕ್ತರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಮದುವೆಯು ಶೀಘ್ರದಲ್ಲೇ ನೆರವೇರಬಹುದು ಎನ್ನಲಅಗುತ್ತಿದೆ.

  ತಮನ್ನಾಗೆ ಶೀಘ್ರ ವಿವಾಹ ಬಂಧನಕ್ಕೆ ಒಳಪಡುವಂತೆ ಪಾಲಕರಿಂದ ಒತ್ತಡವಿದೆ. ಹೀಗಾಗಿಯೇ ತ್ವರಿತವಾಗಿ ಹಸೆಮಣೆ ಏರಬಹುದು ಎಂದು ವರದಿಯಾಗಿದೆ.

  ಚಿತ್ರರಂಗದ ಮೂಲಗಳ ಪ್ರಕಾರ, ವಿಜಯ್​- ತಮನ್ನಾ ದಾಂಪತ್ಯಕ್ಕೆ ಕಾಲಿರಿಸಲು ತುದಿಗಾಲಲ್ಲಿ ನಿಂತಿದ್ದು, ಇದರ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಇಡೀ ದಕ್ಷಿಣದ ಚಿತ್ರರಂಗದಲ್ಲಿ ಇವರ ವಿವಾಹದ ಬಗ್ಗೆ ಊಹಾಪೋಹಗಳು ಸುತ್ತುತ್ತಿವೆ. ತಮನ್ನಾ ಅವರ ಪಾಲಕರು ಮದುವೆಯನ್ನು ಪರಿಗಣಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಇವರ ಸಂಬಂಧದ ಸುತ್ತಲಿನ ಬಝ್ ಅನ್ನು ಹೆಚ್ಚಿಸುತ್ತದೆ.

  ನಂಬಲೇ ಬೇಕಾದ ಸಂಗತಿಯೆಂದರೆ ತಮನ್ನಾ ‘ಭೋಲಾ ಶಂಕರ್’ ನಲ್ಲಿ ನಟಿಸಿದ ನಂತರ ರಜನಿಕಾಂತ್ ಅವರ ‘ಜೈಲರ್’ ಚಿತ್ರದ ‘ನುವ್ವು ಕಾವಾಲಯ್ಯ’ ಹಾಡಿಗೆ ನೃತ್ಯಮಾಡಿದ ನಂತರ ಹೊಸ ಚಲನಚಿತ್ರ ಯೋಜನೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿದ್ದಾರೆ. ವರದಿಗಳು ಆಕೆಯ ಗಮನವು ವೈಯಕ್ತಿಕ ಮತ್ತು ವೈವಾಹಿಕ ಜೀವನದ ಕಡೆಗೆ ತೋರುತ್ತವೆ. ಒಟ್ಟಿನಲ್ಲಿ ತಮನ್ನಾ ಈಗ ಹೀರೋಯಿನ್​ಗಳ ಮದುವೆಯು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

  ರಾಮ್ ಚರಣ್​ಗೆ ಮೂವರು ವಿಲನ್​ಗಳು.. ಗೇಮ್ ಚೇಂಜರ್ ಮೂಲ ಕಥೆ ಲೀಕ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts