More

    ಅಡುಗೆ ಚೆನ್ನಾಗಿಲ್ಲ ಅಂತಾ ಮಹಿಳೆಗೆ ಬೆಂಕಿ: ತಾಲಿಬಾನಿಗಳ ಶವಪೆಟ್ಟಿಗೆ ಭಯಾನಕ ರಹಸ್ಯ ಬಿಚ್ಚಿಟ್ಟ ಮಾಜಿ ನ್ಯಾಯಾಧೀಶೆ!

    ಕಾಬುಲ್​: ಮಹಿಳೆಯರಿಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡುತ್ತೇವೆ ಎಂಬ ತಾಲಿಬಾನಿಗಳ ಭರವಸೆ ಕೇವಲ ಭರವಸೆಯಾಗಿಯೇ ಉಳಿಯಲಿದೆ ಹೊರತು ಅದು ಕಾರ್ಯರೂಪಕ್ಕೆ ಬರುವುದಿಲ್ಲ ಎನ್ನುವುದಕ್ಕೆ ಈ ಒಂದು ಘಟನೆಯೇ ಸಾಕ್ಷಿ. ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಆಫ್ಘಾನ್​ ನೆಲದಲ್ಲಿ ನರಕವನ್ನೇ ಸೃಷ್ಟಿ ಮಾಡಿದ್ದಾರೆ.

    ಅಡುಗೆ ಚೆನ್ನಾಗಿಲ್ಲ ಎಂದು ಮಹಿಳೆಯೊಬ್ಬಳಿಗೆ ಕ್ರೂರಿಗಳು ಬೆಂಕಿ ಹಚ್ಚಿರುವ ಘಟನೆ ಇದೇ ವಾರ ಉತ್ತರ ಆಫ್ಘಾನ್​ನಲ್ಲಿ ನಡೆದಿರುವುದಾಗಿ ಮಹಿಳಾ ಕಾರ್ಯಕರ್ತೆಯೊಬ್ಬರು ತಿಳಿಸಿದ್ದಾರೆ. ಮಹಿಳೆಗೆ ಅಡುಗೆ ಮಾಡಿಕೊಡುವಂತೆ ತಾಲಿಬಾನಿಗಳು ಹೇಳಿದ್ದರು. ಅವರ ಆದೇಶದಂತೆ ಅಡುಗೆ ಮಾಡಿ ತಂದುಕೊಟ್ಟಿದ್ದಾಳೆ. ಆದರೆ, ಅಡುಗೆ ಚೆನ್ನಾಗಿಲ್ಲ ಎಂದು ಆಕೆಗೆ ಬೆಂಕಿ ಹಚ್ಚಿದ್ದಾರೆಂದು ಆಫ್ಘಾನ್​ ಮಾಜಿ ನ್ಯಾಯಾಧೀಶೆ ನಜ್ಲಾ ಅಯೌಬಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಇನ್ನು ತಾಲಿಬಾನಿಗಳು ತಮಗೆ ಅಡುಗೆ ಮಾಡಿಕೊಡಿ ಎಂದು ಜನರನ್ನು ಬಲವಂತ ಮಾಡುತ್ತಿದ್ದಾರೆ. ಅಲ್ಲದೆ, ಶವಪೆಟ್ಟಿಗೆಯಲ್ಲಿ ಯುವತಿಯರನ್ನು ಇಟ್ಟು ನೆರೆಯ ದೇಶಗಳಿಗೆ ಸೆಕ್ಸ್​ ಗುಲಾಮಗಿರಿಗಾಗಿ ತಾಲಿಬಾನಿಗಳು ಸಾಗಿಸುತ್ತಿದ್ದಾರೆ ಎಂದು ನಜ್ಲಾ ಅಯೌಬಿ ಭಯಾನಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಅಯೌಬಿ ಅವರು ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ತನ್ನ ಸಹ ಕಾರ್ಯಕರ್ತರ ಸಹಾಯದಿಂದ ಆಫ್ಘಾನ್​ನಲ್ಲಿ ಪ್ರಸ್ತುತ ನಡೆಯುತ್ತಿರುವ ಕ್ರೌರ್ಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಸಾವಿರಾರು ಮಹಿಳೆಯರ ಮೇಲೆ ತಾಲಿಬಾನಿಗಳು ನಿತ್ಯವೂ ಅಟ್ಟಹಾಸ ಮೆರೆಯುತ್ತಿರುವುದಾಗಿ ತಿಳಿದುಬಂದಿದೆ. (ಏಜೆನ್ಸೀಸ್​)

    ಯುವಕನ ತೋಳಿನಲ್ಲಿ ಟ್ಯಾಟೂ ಕ್ಯುಆರ್​ ಕೋಡ್: ಸ್ಕ್ಯಾನ್​ ಮಾಡಿದವರಿಗೆ ಕಾದಿತ್ತು ಅಚ್ಚರಿ..!​

    ತಾಕತ್ ಇದ್ರೆ ಬಳ್ಳಾರಿಗೆ ಬಾ… ಬರ್ತಿದ್ದೇನೆ ತಾಕತ್ತಿದ್ರೆ ಕಟ್ಹಾಕು! ವೈರಲ್​ ಆಯ್ತು ಟ್ರೋಲ್​ ವಿಡಿಯೋ

    ಪ್ರಭಾಸ್ ಜತೆ ಮದುವೆ ಆಗುವಾಸೆ; ನಟಿ ಕೃತಿ ಸನಾನ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts