More

    ಕಾಶ್ಮೀರದ ಮುಸ್ಲಿಮರ ಬಗ್ಗೆ ಮಾತನಾಡೋದು ನಮ್ಮ ಹಕ್ಕು: ಕೊನೆಗೂ ನರಿಬುದ್ಧಿ ತೋರಿದ ತಾಲಿಬಾನ್..!​

    ಕಾಬುಲ್​: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದು, ಅವರ ಆಡಳಿತದ ಅಡಿಯಲ್ಲಿ ಆಫ್ಘಾನ್​ ಗಡಿಯನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂಬ ಕಳವಳ ವ್ಯಕ್ತವಾಗಿರುವ ಬೆನ್ನಲ್ಲೇ ಕಾಶ್ಮೀರದ ಬಗ್ಗೆ ಮಾತನಾಡಿರುವ ತಾಲಿಬಾನ್​, ಕಾಶ್ಮೀರ ಸೇರಿದಂತೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮುಸ್ಲಿಮರ ಬಗ್ಗೆ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದಿದೆ. ಅಲ್ಲದೆ, ನಾವು ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಳ್ಳುವುದು ನಮ್ಮ ನೀತಿಯಲ್ಲ ಎಂದಿದೆ.

    ಬಿಬಿಸಿ ಉರ್ದು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ತಾಲಿಬಾನ್​ ವಕ್ತಾರ ಸುಹೈಲ್​ ಶಾಹೀನ್​, ನಾವು ಮುಸ್ಲಿಂ ಆಗಿದ್ದುಕೊಂಡು ಭಾರತದಲ್ಲಿರುವ ಕಾಶ್ಮೀರದ ಮುಸ್ಲಿಂ ಸೇರಿದಂತೆ ಇತರೆ ಯಾವುದೇ ದೇಶದ ಮುಸ್ಲಿಮರ ಬಗ್ಗೆ ಧ್ವನಿ ಎತ್ತುವುದು ನಮ್ಮ ಹಕ್ಕಾಗಿದೆ. ಮುಸ್ಲಿಮರು ನಿಮ್ಮ ಸ್ವಂತ ಜನರು, ನಿಮ್ಮ ಸ್ವಂತ ಪ್ರಜೆಗಳಾಗಿರಬಹುದು ಆದರೆ, ಅವರು ನಿಮ್ಮ ಕಾನೂನುಗಳ ಅಡಿಯಲ್ಲಿ ಸಮಾನ ಹಕ್ಕುಗಳಿಗೆ ಅರ್ಹರು ಎಂದಿದ್ದಾರೆ.

    ಆಗಸ್ಟ್​ 15ರಂದು ಕಾಬುಲ್​ ವಶಕ್ಕೆ ಪಡೆದುಕೊಂಡ ಮರುದಿನವೇ ಕಾಶ್ಮೀರದ ಬಗ್ಗೆ ಮಾತನಾಡಿದ್ದ ತಾಲಿಬಾನ್​, ಅದು ದ್ವಿಪಕ್ಷೀಯ ಮತ್ತು ಭಾರತದ ಆಂತರಿಕ ವಿಚಾರದಲ್ಲಿ ನಾವು ತಲೆಹಾಕುವುದಿಲ್ಲ ಎಂದಿತ್ತು. ಆದರೆ, ಇದೀಗ ಆಫ್ಘಾನ್​ನಲ್ಲಿ ಸರ್ಕಾರ ರಚನೆ ಮಾಡುತ್ತಿರುವ ತಾಲಿಬಾನ್​, ಅದಕ್ಕೂ ಮುನ್ನವೇ ಕಾಶ್ಮೀರದ ಬಗ್ಗೆ ಮಾತನಾಡಿದ್ದು, ಕಾಶ್ಮೀರದ ಮುಸ್ಲಿಮರ ಬಗ್ಗೆ ಮಾತನಾಡುವ ಹಕ್ಕು ನಮಗಿದೆ ಎಂದಿದೆ.

    ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳುವುದು ಭಾರತದ ಗುರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ. ಆದರೆ, ತಾಲಿಬಾನ್​ಗೆ ಪಾಕ್​ ಕುಮ್ಮಕ್ಕು ಇರುವುದರಿಂದ ಆಫ್ಘಾನ್​ ಗಡಿಯಲ್ಲೂ ಗಡಿ ಕ್ಯಾತೆ ಆರಂಭವಾಗಬಹುದು ಎಂಬ ಚರ್ಚೆ ಈಗಾಗಲೇ ಬಹಳಷ್ಟು ಚರ್ಚೆ ಆಗುತ್ತಿದೆ.

    ಇನ್ನು ತಾಲಿಬಾನಿಗಳ ಮಾತಿನ ಮೇಲೆ ಯಾರಿಗೂ ನಂಬಿಕೆ ಇಲ್ಲ. ಕಾಶ್ಮೀರ ಅವರ ಆಂತರಿಕ ವಿಚಾರ ಅಂದವರು ಇದೀಗ ಕಾಶ್ಮೀರದ ಮುಸ್ಲಿಮರ ಪರ ಮಾತನಾಡುವುದು ನಮ್ಮ ಹಕ್ಕು ಎಂದಿದ್ದಾರೆ. ಹೀಗಾಗಿ ತಾಲಿಬಾನ್​ ಆಡಳಿತ ಶುರುವಾದರೆ ಮುಂದೆ ಯಾವ ರೀತಿಯಲ್ಲಿ ಭಾರತದ ಜತೆ ವರ್ತಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಜೂನಿಯರ್​​ ಚಿರುಗೆ ‘ರಾಯನ್ ರಾಜ್ ಸರ್ಜಾ’ ಎಂದು ನಾಮಕರಣ: ರಾಯನ್​ ಹೆಸರಿನ ಅರ್ಥ ಹೀಗಿದೆ ನೋಡಿ..

    ಐಡಾ ಚಂಡಮಾರುತ ಆರ್ಭಟಕ್ಕೆ ನ್ಯೂಯಾರ್ಕ್​ನಲ್ಲಿ 44 ಮಂದಿ ದಾರುಣ ಸಾವು..!

    ಕಿಚ್ಚನ ಕಟೌಟ್​ ಮುಂದೆ ಕೋಣ ಕಡಿದ ಪ್ರಕರಣ: ಎಫ್​ಐಆರ್​ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts