More

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ನವದೆಹಲಿ: ಚುಟುಕು ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮನ್​ನಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಮಂಗಳವಾರ ಪ್ರಕಟಿಸಿದೆ.

    ಈ ಮೊದಲು ಟಿ20 ವಿಶ್ವಕಪ್​ ಅನ್ನು ಭಾರತದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕರೊನಾ ಮಹಾಮಾರಿಯಿಂದಾಗಿ ಅರಬ್​ ಮತ್ತು ಒಮನ್​ಗೆ ಸ್ಥಳಾಂತರವಾಗಿದ್ದು, ಅಕ್ಟೋಬರ್​ 17 ರಿಂದ ನವೆಂಬರ್​ 14ರವರೆಗೆ ಟಿ20 ವಿಶ್ವಕಪ್​ ನಡೆಯಲಿದೆ.

    ಟೂರ್ನಿಯು ಗ್ರೂಪ್​ ‘ಎ’ ಮತ್ತು ಗ್ರೂಪ್​ ‘ಬಿ’ ಒಳಗೊಂಡ ಮೊದಲು ಸುತ್ತಿನ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಗ್ರೂಪ್​ ‘ಎ’ ನಲ್ಲಿ ಶ್ರೀಲಂಕಾ, ಐರ್ಲೆಂಡ್​, ನೆದರ್ಲೆಂಡ್​ ಮತ್ತು ನಮಿಬಿಯಾ ಹಾಗೂ ಗ್ರೂಪ್​ ‘ಬಿ’ ನಲ್ಲಿ ಬಾಂಗ್ಲಾದೇಶ, ಸ್ಕಾಟ್​ಲೆಂಡ್​, ಪಾಪುವಾ ನ್ಯೂಗಿನಿ ಮತ್ತು ಓಮನ್​ ತಂಡಗಳು ಟಿ20 ಅರ್ಹತೆಗಾಗಿ ಸೆಣಸಾಡಲಿವೆ. ಮೊದಲ ಸುತ್ತಿನ ಪಂದ್ಯಗಳ ಬಳಿಕ ಗ್ರೂಪ್​ ‘1’ ಮತ್ತು ಗ್ರೂಪ್​ ‘2’ ಒಳಗೊಂಡ ಸೂಪರ್​ 12 ಲೀಗ್​ ನಡೆಯಲಿದೆ.

    ಈ ಹಿಂದೆ ಜುಲೈನಲ್ಲಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ, ಒಮನ್​ನ ಮಸ್ಕತ್​ನಲ್ಲಿ ಟಿ 20 ವಿಶ್ವಕಪ್ ಉದ್ಘಾಟಿಸಿದ್ದಾರೆ. ಒಮಾನ್ ರಾಷ್ಟ್ರ ಆತಿಥೇಯರಲ್ಲಿ ಒಂದಾಗಿದ್ದು, ಒಮಾನ್ ಕ್ರಿಕೆಟ್ ಅಕಾಡೆಮಿ ರೌಂಡ್ 1ರಲ್ಲಿ ಬಿ ಗುಂಪಿನ ಆರು ಪಂದ್ಯಗಳನ್ನು ಆಯೋಜಿಸಬಹುದು ಎಂದು ತಿಳಿದುಬಂದಿದೆ.

    ವೇಳಾಪಟ್ಟಿಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಬಿಸಿಸಿಐ ಹೊತ್ತಿತ್ತು. ಓಮನ್​ನಲ್ಲಿ ಪಂದ್ಯಗಳನ್ನು ಆಯೋಜಿಸುವ ನಿರ್ಧಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಒಮಾನ್‌ನಲ್ಲಿರುವುದಕ್ಕೆ ನನಗೆ ವಿಶೇಷವಾಗಿ ಸಂತೋಷವಾಗಿದೆ. ವಿಶ್ವ ಕ್ರಿಕೆಟ್‌ನ ಪ್ರಮುಖ ಶಕ್ತಿಯಾಗಿ, ಬಿಸಿಸಿಐ ಯಾವಾಗಲೂ ಸಹವರ್ತಿ ರಾಷ್ಟ್ರಗಳನ್ನು ಉತ್ತೇಜಿಸಲು ಮತ್ತು ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ನನ್ನ ಸಾಮರ್ಥ್ಯದಲ್ಲಿ, ನನ್ನ ದೃಷ್ಟಿ ಏಷ್ಯಾಕ್ಕೆ ಕ್ರಿಕೆಟ್ ಅನ್ನು ಹೆಚ್ಚು ದೂರಕ್ಕೆ ಕೊಂಡೊಯ್ಯುವುದು ಎಂದು ಜಯ್ ಶಾ ಹೇಳಿದ್ದರು.

    ಒಮನ್​ ವಿಶ್ವಕಪ್​ ಟೂರ್ನಿಯ ಸಹ-ಆಯೋಜಕರಾಗಿರುವುದರಿಂದ ಒಮನ್ ಕ್ರಿಕೆಟ್ ಅನ್ನು ಜಾಗತಿಕ ವೇದಿಕೆಯಲ್ಲಿ ಇರಿಸುತ್ತದೆ. ಅವರು ಕ್ವಾಲಿಫೈಯರ್‌ ಪಂದ್ಯಗಳನ್ನು ಕೂಡ ಆಡುತ್ತಿದ್ದಾರೆ ಮತ್ತು ಅವರು ಸೂಪರ್ 12ಗೆ ತಲುಪಿದರೆ ಅದಕ್ಕಿಂತ ಒಳ್ಳೆಯ ಬೆಳವಣಿಗೆ ಬೇರೊಂದಿಲ್ಲ ಎಂದು ಜಯ್​ ಶಾ ತಿಳಿಸಿದ್ದರು.

    ವೇಳಾಪಟ್ಟಿ ಈ ಕೆಳಕಂಡಂತಿದೆ…
    ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್​ 24ರಂದು ಟಿ20 ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಎದುರಾಳಿ ಆಗಲಿದ್ದು, ಮತ್ತೊಂದು ಹೈವೋಲ್ಟೇಜ್​ ಪಂದ್ಯಕ್ಕೆ ವೇದಿಕೆ ಸಜ್ಜಾಗುತ್ತಿದೆ. ನವೆಂಬರ್​ 10 ಮತ್ತು 11 ಸೆಮಿಫೈನಲ್​ 1 ಮತ್ತು 2 ನಡೆಯಲಿದ್ದು, ನವೆಂಬರ್​ 14ಕ್ಕೆ ಫೈನಲ್​ ಪಂದ್ಯ ನಡೆಯಲಿದೆ. (ಏಜೆನ್ಸೀಸ್​)

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts